ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiptur News: ನಟಿ ಹೇಮಲತಾ ಮನೆಯಲ್ಲಿ ಕಳ್ಳತನ; ರಾಜ್ಯೋತ್ಸವ ಪ್ರಶಸ್ತಿಯ 22 ಗ್ರಾಂ ಚಿನ್ನದ ಪದಕ ಮಾಯ

ಒಂದು ತಿಂಗಳ ಹಿಂದೆಯೂ ಮನೆ ಕೆಲಸದವರಿಂದ ಸುಮಾರು 25 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿತ್ತು. ಆಗ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತಡರಾತ್ರಿ ಕೂಡ ಮನೆ ಕೆಲಸದವರಿಂಲೇ ಪುನಃ ಕಳ್ಳತನ ನಡೆದಿದೆ ಎನ್ನಲಾಗಿದೆ.

ನಟಿ ಹೇಮಲತಾ.

ತಿಪಟೂರು, ಡಿ.13: ಪಟ್ಟಣದ ವಿನಾಯಕ ನಗರದ (Tiptur News) ನಟಿ ಹೇಮಲತಾ (actress Hemalatha) ಅವರ ನಿವಾಸದಲ್ಲಿ ಕಳ್ಳತನ ನಡೆದಿದೆ. ರಂಗಭೂಮಿ ಕ್ಷೇತ್ರದಲ್ಲಿ ಹೇಮಲತಾ ಅವರ ಕೊಡುಗೆಯನ್ನು ಗುರುತಿಸಿ ನೀಡಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪದಕವನ್ನು ಕಳವು ಮಾಡಲಾಗಿದೆ. ಕಳೆದ 2 ದಿನಗಳ ಹಿಂದೆ ಮನೆ ಕೆಲಸದವರು, 22 ಗ್ರಾಂ ಚಿನ್ನದ ಪದಕವನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಂದು ತಿಂಗಳ ಹಿಂದೆಯೂ ಮನೆ ಕೆಲಸದವರಿಂದ ಸುಮಾರು 25 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿತ್ತು. ಆಗ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತಡರಾತ್ರಿ ಕೂಡ ಮನೆ ಕೆಲಸದವರಿಂಲೇ ಪುನಃ ಕಳ್ಳತನ ನಡೆದಿದೆ ಎನ್ನಲಾಗಿದೆ.

ಡಿವೈಎಸ್‌ಪಿ ಅವರ ಮಾರ್ಗದರ್ಶನದಂತೆ ರಚಿಸಿದ್ದ ಜಯಲಕ್ಷ್ಮಮ್ಮ ನೇತೃತ್ವದಲ್ಲಿ ತಂಡವು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಚಾಲಾಕಿ ಕಳ್ಳರು ಬೇರೆ ಎಲ್ಲೆಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯ ನಂತರ ಹೊರ ಬೀಳಬೇಕಾಗಿದೆ.

ಅಮೆರಿಕದಲ್ಲಿ ಬಟ್ಟೆ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ಳು ಕಳ್ಳಿ! ಭಾರೀ ವೈರಲ್‌ ಆಗ್ತಿದ್ದಂತೆ ಈ ವಿಡಿಯೊ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರ ಬಂಧನ

ಚಿತ್ರದುರ್ಗ: 10 ವರ್ಷದ ಬಾಲಕಿಯನ್ನು ಬೆದರಿಸಿ 1 ವರ್ಷದಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರನ್ನು ಪೊಲೀಸರು ಅರೆಸ್ಟ್‌ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ. ಕಳೆದ ಒಂದು ವರ್ಷದಿಂದ 24 ವರ್ಷದ ಹಾಗೂ 40 ವರ್ಷದ ಇಬ್ಬರು ವ್ಯಕ್ತಿಗಳು, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಿ, ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

ಕಲಬುರಗಿಯಲ್ಲಿ ಭೀಕರ ಸರಣಿ ಅಪಘಾತ; ವೃದ್ಧ ದಂಪತಿ ಸೇರಿ ಮೂವರ ಸಾವು

ಲೈಂಗಿಕ ದೌರ್ಜನ್ಯ ಎಸಗಿದ್ದ ಬಳಿಕ ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ತಾಯಿಯನ್ನು ಕೊಲೆ ಮಾಡುತ್ತೇವೆ ಎಂದು ಆರೋಪಿಗಳು ಬೆದರಿಸಿದ್ದಾರೆ. ಬಳಿಕ ಈ ವಿಚಾರ ಬಾಲಕಿ ಶಾಲೆಯಲ್ಲಿ ತಮ್ಮ ಶಿಕ್ಷಕರಿಗೆ ತಿಳಿಸಿದ್ದು, ಶಿಕ್ಷಕಿ ಪೋಷಕರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.