ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R Rajendra Rajanna: ನಂಜನಗೂಡು ದೇವಾಲಯದ ಮಾದರಿಯಲ್ಲಿ ಮಲ್ಲೇಶ್ವರ ಹಾಗೂ ವೆಂಕಟರಮಣ ದೇವಸ್ಥಾನಗಳ ಗೋಪುರಗಳಿಗೆ ಬಣ್ಣ: ಆರ್. ರಾಜೇಂದ್ರ

ಇಲ್ಲಿನ ಪುರಾತನ ದೇವಾಲಯಗಳು ಜನರ ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಇಂತಹ ದೇವಾಲಯಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳ ಸೌಂದರ್ಯವನ್ನು ಹೆಚ್ಚಿಸು ವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣ ಸ್ವಾಮಿ ದೇವಾಲಯಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ, ಈ ದೇವಾಲಯಗಳ ಅಭಿವೃದ್ಧಿಗೆ ಭಕ್ತಾಧಿಗಳು ಕೂಡ ಮನವಿ ಮಾಡಿದ್ದಾರೆ.

ಮಧುಗಿರಿಯ ಮಲ್ಲೇಶ್ವರ ಸ್ವಾಮಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳಿಗೆ ಎಂ. ಎಲ್.ಸಿ. ಆರ್.ರಾಜೇಂದ್ರರಾಜಣ್ಣ ಭೇಟಿ, ಭಕ್ತಾಧಿಗಳು, ಮುಖಂಡರು ಇದ್ದರು.

ಮಧುಗಿರಿ: ಪಟ್ಟಣದ ಪುರಾತನ ಮಲ್ಲೇಶ್ವರ ಸ್ವಾಮಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳ ಗೋಪುರಗಳಿಗೆ ನಂಜನಗೂಡು ದೇವಾಲಯದ ಮಾದರಿಯಲ್ಲಿ ಆಕರ್ಷಕ ಬಣ್ಣ ಬಳಿಸಲಾಗುವುದು ಎಂದು ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ (Prishad Member R Rajendra Rajanna)ತಿಳಿಸಿದರು.

ದುರಸ್ತಿ ಕಾರ್ಯ: ಭಾನುವಾರ ಬೆಳಿಗ್ಗೆ ಎರಡೂ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ದೇವಾಲಯಗಳ ಗೋಪುರಗಳಿಗೆ ಆಕರ್ಷಕ ಬಣ್ಣ ಬಳಸುವುದರ ಜೊತೆಗೆ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ದೇವಾಲಯದ ಆವರಣ ದಲ್ಲಿರುವ ಅನುಪಯುಕ್ತ ಗಿಡಗಂಟಿಗಳನ್ನು ತೆರವುಗೊಳಿಸಿ, ಸೌಲಭ್ಯ ಒದಗಿಸುವುದು: ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆಕರ್ಷಕ ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಒಂದು ವಾರದೊಳಗಾಗಿ ದುರಸ್ತಿ ಹಾಗೂ ಬಣ್ಣ ಬಳಿಯುವ ಕಾರ್ಯ ನಡೆಯಲಿದೆ ಹಾಗೂ ಎರಡೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸ ಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Madhugiri News: ಕುಡಿಯುವ ನೀರು ಪೂರೈಕೆಗೆ ಆಗ್ರಹ: ಚೀಲನಹಳ್ಳಿ ಗ್ರಾಮಸ್ಥರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

ಭಕ್ತಾಧಿಗಳ ಬೇಡಿಕೆ : ಇಲ್ಲಿನ ಪುರಾತನ ದೇವಾಲಯಗಳು ಜನರ ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಇಂತಹ ದೇವಾಲಯಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳ ಸೌಂದರ್ಯವನ್ನು ಹೆಚ್ಚಿಸು ವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣ ಸ್ವಾಮಿ ದೇವಾಲಯಗಳ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ, ಈ ದೇವಾಲಯಗಳ ಅಭಿವೃದ್ಧಿಗೆ ಭಕ್ತಾಧಿಗಳು ಕೂಡ ಮನವಿ ಮಾಡಿದ್ದಾರೆ. ಅದರಂತೆ ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗುತ್ತಿದೆ ಎಂದು ಆರ್. ರಾಜೇಂದ್ರ ರಾಜಣ್ಣ ವಿವರಣೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಎಂ.ವಿ.ಗೋವಿಂದರಾಜು, ಮಾಜಿ ಸದಸ್ಯರಾದ ಆರ್.ಎಲ್.ಎಸ್. ರಮೇಶ್, ಮಂಜುನಾಥ್ ಆಚಾರ್, ದೇವಾಲಯದ ಪ್ರಧಾನ ಅರ್ಚಕರಾದ ನಟರಾಜ್ ದೀಕ್ಷಿತ್, ಅನಂತ ಪದ್ಮನಾಭ, ಮುಖಂಡರಾದ ಮನೋಹರ್, ಪ್ರಹ್ಲಾದ್, ಹೊನ್ನಾಪುರ ದೀಪು, ಜಿ.ನಾರಾಯಣರಾಜು, ಭಕ್ತಾಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

*

ಮಧುಗಿರಿ ಪಟ್ಟಣ ಹಾಗೂ ತಾಲೂಕು ಅಭಿವೃದ್ಧಿಪಡಿಸುವುದರ ಜೊತೆಗೆ ಯುವಕರಿಗೆ ಉದ್ಯೋಗ ಬಡವರಿಗೆ ನೀವೇಶನ, ರಸ್ತೆ ಅಗಲೀಕರಣ, ಬಾಡಿಗೆಯಲ್ಲಿ ಇರುವ ಸರ್ಕಾರಿ ಕಛೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸಿಕೊಡುವುದು, ಎಲ್ಲಾ ಜಾತಿಯವರಿಗೂ ಸಮಾನತೆಯಿಂದ ಕಾಣುವುದು ನಮ್ಮ ತಂದೆ ಕೆ.ಎನ್. ರಾಜಣ್ಣ, ತಾಯಿ ಎಸ್.ಆರ್.ಶಾಂತಲಾರಾಜಣ್ಣ ರವರ ಮಾರ್ಗದರ್ಶನ ಹಾಗೇ ನನ್ನ ಕ್ಷೇತ್ರದ ಮತದಾರರ ಆಶೀರ್ವಾದದೊಂದಿಗೆ ಅಭಿವೃದ್ಧಿ ಕೆಲಸ ಮಾಡಲು ಸದಾ ಸಿದ್ಧನಾಗಿರುತ್ತೇನೆ ಎಂಬ ಮಾತು ಎಂಎಲ್ಸಿ ಆರ್. ರಾಜೇಂದ್ರ ನುಡಿದರು.