ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಚೇಳೂರು ಜಿಪಂ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು

ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಶದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ

ಗುಬ್ಬಿ: ಲೋಕಲ್ ಫೈಟ್ ಎನಿಸಿದ ಸ್ಥಳೀಯ ಚುನಾವಣೆ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿ ಈಗಾಗಲೇ ನಿಗದಿಯಾಗಿದೆ. ತಾಲ್ಲೂಕಿನ ಚೇಳೂರು ಜಿಪಂ ಕ್ಷೇತ್ರ ಓಬಿಸಿ (ಎ) ಮೀಸಲು ನಿಗದಿಯಾಗಿದ್ದು ಎನ್ ಡಿಎ ಮೈತ್ರಿ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ನಾನು ಆಕಾಂಕ್ಷಿ ಯಾಗಿದ್ದೇನೆ ಎಂದು ಗುಡ್ಡದಹಳ್ಳಿ ಬಸವರಾಜು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಶದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

ಮೈತ್ರಿ ಪಕ್ಷದಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಸ್ಥಳೀಯ ಅಭ್ಯರ್ಥಿಗಳಿಗೆ ಮಾನ್ಯತೆ ನೀಡಿ. ಹೊರಗಿನಿಂದ ಬರುವ ಅಭ್ಯರ್ಥಿಗಳು ನಂತರದಲ್ಲಿ ಮಾಯಾ ಆಗುತ್ತಾರೆ. ವಲಸೆ ಆಕಾಂಕ್ಷಿಗಳಿಗೆ ಮನ್ನಣೆ ನೀಡದೆ ಸ್ಥಳೀಯವಾಗಿ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡಿ. ನಾನು ಕೂಡ ಜಿ.ಎಸ್.ಬಸವರಾಜು ಅವರ ಹಿಂಬಾಲಕರಿಗೆ ಬಿಜೆಪಿ ಸಂಘಟನೆಗೆ ದುಡಿದಿದ್ದೇನೆ. ಹಿಂದುಳಿದ ವರ್ಗ ಮೀಸಲಾತಿ ಪೈಕಿ ಕಾಡು ಗೊಲ್ಲ ಸಮುದಾಯಕ್ಕೆ ಅವಕಾಶ ಸಿಕ್ಕಿರುವುದು ಈ ಚೇಳೂರು ಕ್ಷೇತ್ರದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಈ ಹಿಂದೆ ಕೂಡ ಟಿಕೆಟ್ ಆಕಾಂಕ್ಷಿಯಾಗಿ ಪ್ರಯತ್ನ ಮಾಡಿದ್ದೆ. ಈ ಬಾರಿ ನನ್ನ ಮೇಲೆ ಪಕ್ಷ ವಿಶ್ವಾಸ ಇಟ್ಟು ಟಿಕೆಟ್ ನೀಡುವ ಭರವಸೆ ಇದೆ ಎಂದರು.

ಪ್ರಬಲ ಆಕಾಂಕ್ಷಿಯಾಗಿ ನನಗೆ ಟಿಕೆಟ್ ನೀಡಿದಲ್ಲಿ ಚೇಳೂರು ಕ್ಷೇತ್ರ ಗೆಲ್ಲುವ ಜೊತೆಗೆ ಇಲ್ಲಿನ ಮೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಸಹ ಮೈತ್ರಿ ಪಕ್ಷದ ತೆಕ್ಕೆಗೆ ತರುತ್ತೇನೆ. ಈ ಜೊತೆಗೆ ಉಳಿದ ಐದು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿನ ಗೊಲ್ಲ ಸಮುದಾಯದ ಮತಗಳನ್ನು ಮೈತ್ರಿ ಪಕ್ಷದತ್ತ ತರುವ ಕೆಲಸ ಮಾಡುತ್ತೇನೆ. ಚೇಳೂರು ಜಿಪಂ ಕ್ಷೇತ್ರದಲ್ಲಿ 12 ಸಾವಿರ ಮತಗಳನ್ನು ಹೊಂದಿರುವ ಕಾಡು ಗೊಲ್ಲರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಮೈತ್ರಿ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ ಅವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನನಗೆ ಟಿಕೆಟ್ ನೀಡಿದಲ್ಲಿ ಮುಂಬರುವ ಚುನಾವಣೆಯ ಉತ್ತಮ ಫಲಿತಾಂಶ ಕೂಡಾ ಮೈತ್ರಿ ಪಕ್ಷಕ್ಕೆ ದೊರೆಯಲಿದೆ ಎಂದರು.

ಮೂರು ದಶಕದ ಪಕ್ಷ ಸಂಘಟನೆ, ಎಲ್ಲಾ ಚುನಾವಣೆಯಲ್ಲಿ ಪ್ರಾಮಾಣಿಕ ಪರಿಶ್ರಮ, ಎಲ್ಲಾ ವರ್ಗದ ಸಮುದಾಯದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಹಾಗೂ ಸ್ಥಳೀಯ ಎಂಬ ಮಾನದಂಡ ಎಲ್ಲದಕ್ಕೂ ಅರ್ಹತೆ ಇರುವ ಕಾರಣ ನನಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ ಅವರು ಬಡ ಸಮುದಾಯ ಕಾಡು ಗೊಲ್ಲರು ಈಗಾಗಲೇ ಸಾಮಾಜಿಕವಾಗಿ ರಾಜಕೀಯವಾಗಿ ಹಿಂದುಳಿದ ವರ್ಗ ವಾಗಿದೆ. ರಾಜಕೀಯ ಪ್ರಾತಿನಿಧ್ಯ ಮೈತ್ರಿ ಪಕ್ಷದಿಂದ ದೊರೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಣ್ಣತಿಮ್ಮಯ್ಯ, ಆನಂದ್, ಶಿವರಾಜು, ಹಾಲೇಗೌಡ, ಶ್ರೀನಿವಾಸ್, ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.