ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹುಚ್ಚಣ್ಣ ಕಟ್ಟೆ ಕೆರೆ ಹಸ್ತಾಂತರ: "ಧರ್ಮಸ್ಥಳದ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿ": ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ

ಡಾ. ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾ ಸ್ವಾಮೀಜಿಯವರು ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿದ್ದು, ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದೆ. ಪೂಜ್ಯರು ನಮ್ಮೆಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಸಮುದಾಯ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿಯಾಗಿದೆ," ಎಂದು ಬಣ್ಣಿಸಿದರು.

​ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ವಲಯದ ತಿಮ್ಮನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹುಚ್ಚಣ್ಣ ಕಟ್ಟೆ ಕೆರೆ ಹಸ್ತಾಂತರ ಕಾರ್ಯ ಕ್ರಮವು ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.

​ಈ ಸಂದರ್ಭದಲ್ಲಿ ಕುಪ್ಪೂರು ತಮಡಿಹಳ್ಳಿ ವಿರುಕ್ತ ಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾ ಸ್ವಾಮೀಜಿಯವರು ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿದ್ದು, ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದೆ. ಪೂಜ್ಯರು ನಮ್ಮೆಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಸಮುದಾಯ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿಯಾಗಿದೆ," ಎಂದು ಬಣ್ಣಿಸಿದರು.

ಇದನ್ನೂ ಓದಿ: Chikkanayakanahalli News: ದಾರ್ಶನಿಕರ ಜಯಂತಿ ಸ್ವಾಗತಾರ್ಹ ಆದರೆ ಆಚರಣೆಯ ವೈಭವೀಕರಣಕ್ಕೆ ಟೀಕೆ

ಮಾದರಿ ಕಾರ್ಯಕ್ರಮಗಳು

​ಜನಜಾಗೃತಿ ವೇದಿಕೆ ಸದಸ್ಯರಾದ ಉಮೇಶ್ ಅವರು ಮಾತನಾಡಿ, "ಆಡು ಮುಟ್ಟದ ಸೊಪ್ಪಿಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡದ ಕಾರ್ಯಕ್ರಮವಿಲ್ಲ." ಸರ್ಕಾರ ಮಾಡದಂತಹ ಕೆಲಸಗಳನ್ನು ಸಹ ಪೂಜ್ಯರು ಇಂತಹ ಸಮುದಾಯ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಮಾಡುತ್ತಿದ್ದಾರೆ. ಶಾಲೆಗಳಿಗೆ ಶಿಕ್ಷಕರ ಓದರಣೆ, ಶುದ್ಧ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ ಹಲವಾರು ಕೆಲಸಗಳು ಸರ್ಕಾರಕ್ಕೆ ಅನುಕರಣೀಯ ವಾಗಿದೆ ಎಂದು ಶ್ಲಾಘಿಸಿದರು. ಹಾಗೆಯೇ ಗ್ರಾಮಸ್ಥರು ಕೆರೆಯನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

​ತುಮಕೂರು-2 ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಪ್ರಕಾಶ್ ಅವರು ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು.

​ಕೆರೆ ಸಂರಕ್ಷಣೆಗೆ ಕರೆ

​ತಾಲ್ಲೂಕಿನ ಯೋಜನಾಧಿಕಾರಿಗಳಾದ ಪ್ರೇಮಾನಂದ್ ಅವರು ಮಾತನಾಡಿ, ಹುಚ್ಚಣ್ಣ ಕಟ್ಟೆ ಅಭಿವೃದ್ಧಿ ಕಾಮಗಾರಿಯು ಪೂರ್ಣಗೊಂಡಿದ್ದು, ಈ ದಿನ ಗ್ರಾಮ ಪಂಚಾಯಿತಿಗೆ ಔಪಚಾರಿಕವಾಗಿ ಹಸ್ತಾಂತರ ಮಾಡಲಾಗುತ್ತಿದೆ. ಊರಿನ ಎಲ್ಲಾ ಸದಸ್ಯರು ಕೆರೆಯನ್ನು ಸದುಪಯೋಗ ಪಡೆದುಕೊಂಡು ಕಾಪಾಡಿಕೊಂಡು ಹೋಗಬೇಕೆಂದು ಮನವಿ ಮಾಡಿ ದರು.

​ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ತನ್ಮನ್, ಪಿಡಿಒ ಬಾಬು ಶ್ರೀನಿವಾಸ, ಪಂಚಾಯತ್ ಅಧ್ಯಕ್ಷರಾದ ನೇತ್ರಾವತಿ, ವಲಯದ ಮೇಲ್ವಿಚಾರಕರಾದ ಗಾಯತ್ರಿ, ಕೃಷಿ ಮೇಲ್ವಿಚಾರಕರಾದ ಪ್ರಕಾಶ್, ಕೆರೆ ಸಮಿತಿ ಸದಸ್ಯರುಗಳು, ಪಂಚಾಯತ್ ಸದಸ್ಯರುಗಳು, ವಲಯದ ಸೇವಪ್ರತಿನಿಧಿಗಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.