ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tiptur News: ಸಕ್ಕರೆ ಕಾಯಿಲೆ ನಿಯಂತ್ರಿಸದಿದ್ದರೆ ಅಂಧತ್ವ ಹೆಚ್ಚುತ್ತದೆ: ಡಾ.ವಿವೇಚನ

ಬದಲಾದ ವಾತಾವರಣದಲ್ಲಿ ಜನರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ‌. ಗ್ರಾಮೀಣ ಪ್ರದೇಶದ ಜನರು ಸಕಾಲದಲ್ಲಿ ಆರೋಗ್ಯ ಪರೀಕ್ಷೆ ಮತ್ತು ಚಿಕಿತ್ಸೆ ದೊರೆಯದ ಕಾರಣ ಬಿಪಿ ಮತ್ತು ಶುಗರ್ ಹೆಚ್ಚಲು ಕಾರಣವಾಗಿದೆ. ಇದರಿಂದ ಕಣ್ಣಿನ ದೃಷ್ಟಿ ದೋಷ ಸಹಜವಾಗಿ ಹೆಚ್ಚಾ ಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೇ ಇದ್ದರೆ, ಅಂಧತ್ವ ಬರುವ ಅಪಾಯವಿದ್ದು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದರು.

ತಿಪಟೂರು: ನಾನಾ ಕಾರಣಗಳಿಂದ ಬರುವ ಕಣ್ಣಿನ ಕಾಯಿಲೆಗಳಿಂದ ಜನರು ಹೊರ ಬರಲು ಸರ್ಕಾರ ಅಂಧತ್ವ ನಿವಾರಣಾ ಕಾರ್ಯಕ್ರಮ ಹಾಕಿಕೊಂಡಿದ್ದು ಅದರ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ವೈದ್ಯ ಡಾ‌. ಜಿ ಬಿ ವಿಚೇಚನ ಹೇಳಿದರು.

ಅವರು ಸೋಮವಾರ ಹೊನ್ನವಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ತಿಪಟೂರು, ಶ್ರದ್ಧಾ ನೇತ್ರಧಾಮ ಬೆಂಗಳೂರು, ಕುಟುಂಬ ಮತ್ತು ಕಲ್ಯಾಣ ಇಲಾಖೆ ಹಾಗೂ ಅಂಧತ್ವ ನಿಯಂತ್ರಣ ವಿಭಾಗ, ತುಮಕೂರು ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಲೆನ್ಸ್ ಅಳವಡಿಕೆ ಮತ್ತು ಕನ್ನಡ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದನ್ನೂ ಓದಿ: Tiptur News: ಏಪ್ರಿಲ್‌ 29ರಂದು ತಿಪಟೂರಿನ ಕೆಐಟಿ ಕಾಲೇಜಿನಲ್ಲಿ ʼಸಿಸ್ಕೋ ಎಕ್ಸಲೆನ್ಸ್ ಸೆಂಟರ್ʼ ಉದ್ಘಾಟನೆ

ಬದಲಾದ ವಾತಾವರಣದಲ್ಲಿ ಜನರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ‌. ಗ್ರಾಮೀಣ ಪ್ರದೇಶದ ಜನರು ಸಕಾಲದಲ್ಲಿ ಆರೋಗ್ಯ ಪರೀಕ್ಷೆ ಮತ್ತು ಚಿಕಿತ್ಸೆ ದೊರೆಯದ ಕಾರಣ ಬಿಪಿ ಮತ್ತು ಶುಗರ್ ಹೆಚ್ಚಲು ಕಾರಣವಾಗಿದೆ. ಇದರಿಂದ ಕಣ್ಣಿನ ದೃಷ್ಟಿ ದೋಷ ಸಹಜ ವಾಗಿ ಹೆಚ್ಚಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೇ ಇದ್ದರೆ, ಅಂಧತ್ವ ಬರುವ ಅಪಾಯವಿದ್ದು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದರು.

ಲಯನ್ಸ್ ಕ್ಲಬ್ ಇತರೆ ಸಂಸ್ಥೆಯ ಸಹಯೋಗದಲ್ಲಿ ತಿಪಟೂರು ತಾಲ್ಲೂಕಿನ ನಾನಾ ಭಾಗಗಳಲ್ಲಿ ನಿಗಧಿತ ಸಮಯದಲ್ಲಿ ನಿರಂತರವಾಗಿ ಕಣ್ಣಿನ ಪರೀಕ್ಷೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಉಪಯೋಗ ಪಡೆದು ಕೊಳ್ಳಲು ಮನವಿ ಮಾಡಿದರು.

ಲಯನ್ ಎಸ್ ಎಸ್ ಗಂಗಾಧರ್ ಮಾತನಾಡಿ ಪ್ರತಿ ತಿಂಗಳ ಮೊದಲ ಗುರುವಾರ ತಿಪಟೂರು ಶ್ರೀ ರಂಗ ಆಸ್ಪತ್ರೆ, ಎರಡನೇ ಗುರುವಾರ ಹಾಲ್ಕುರಿಕೆ ಮತ್ತು ಬಿಳಿಗೆರೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಾಲ್ಕನೇ ಸೋಮವಾರ ಹೊನ್ನವಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ತಪಾಸಣೆ ಶಿಬಿರಗಳು ವರ್ಷ ಪೂರ್ತಿ ನಿರಂತರವಾಗಿ ನಡೆಯಲಿದೆ. ಹೆಚ್ಚು ಹೆಚ್ಚು ಪ್ರಚಾರ ಮಾಡುವ ಮೂಲಕ ಇದರ ಸದುಪಯೋಗ ಜನರಿಗೆ ಆಗಬೇಕೆಂದರು.

ಕಾರ್ಯಕ್ರಮದಲ್ಲಿ ಶ್ರದ್ಧಾ ನೇತ್ರ ಧಾಮ ತಜ್ಞವೈದ್ಯರಾದ ಡಾ.ಸೃಷ್ಟಿ, ಹೊನ್ನವಳ್ಳಿಯ ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ‌. ರಾಜು, ಲಯನ್ಸ್ ಕ್ಲಬ್ ಖಜಾಂಚಿ ಲಯನ್ ತಿಪಟೂರು ಕೃಷ್ಣ, ಜಂಟಿ ಕಾರ್ಯದರ್ಶಿ ಲಯನ್ ಎ.ಎಸ್.ಚಂದ್ರಶೇಖರ್ (ವಡೋ ಪೋನ್), ಜಂಟಿ ಖಜಾಂಚಿ ಲಯನ್ ನಾಗರತ್ನ, ನಿರ್ದೇಶಕರಾದ ಲಯನ್ ವೇದಾವತಿ, ಲಯನ್ ತೋಂಟಾರಾಧ್ಯ ( ಬೆಸ್ಕಾಂ) ಉಪಸ್ಥಿತರಿದ್ದರು. ಕಾರ್ಯದರ್ಶಿ ಲಯನ್ ಟಿ ಎಸ್ ಮಂಜುನಾಥ್ ಸ್ವಾಗತಿಸಿ, ವಂದಿಸಿದರು. ಲಯನ್ ಕುಸುಮ ನಿರೂಪಿಸಿದರು.