ಪಾವಗಡ: ವಿಜಯದಶಮಿ(Vijayadashami) ಹಬ್ಬದ ಅಂಗವಾಗಿ ಪಾವಗಡ ಪಟ್ಟಣದಲ್ಲಿ ಬುಧವಾರ ಸಂಜೆ ಸಾಂಪ್ರದಾಯಿಕ ಶಮಿಪೂಜೆ ಹಾಗೂ ಅಂಬು ಹೊಡೆಯುವ ಕಾರ್ಯಕ್ರಮ ವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಪಾವಗಡ ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ರಾಜಬೀದಿಗಳ ಮೂಲಕ ಗುರುಭವನದ ಆವರಣದಲ್ಲಿರುವ ಶಮಿ ವೃಕ್ಷದ ಮಂಟಪದವರೆಗೆ ವಿವಿಧ ಗ್ರಾಮ ದೇವತೆಗಳು ಹಾಗೂ ದುರ್ಗಾದೇವಿಯ ವಿಗ್ರಹಗಳೊಂದಿಗೆ ತಹಸೀಲ್ದಾರ್ ವೈ. ರವಿ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.
ಇದನ್ನೂ ಓದಿ: Pavagada Naxalites: ಪಾವಗಡದಲ್ಲಿ ನಕ್ಸಲ್ ಭೀತಿ; ಶಂಕಿತ ನಕ್ಸಲ್ ವೆಂಕಟೇಶ್ಗಾಗಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ
ಬಳಿಕ ವೇದಬ್ರಹ್ಮ ಅನಂತ್ ರಾಮ್ ಭಟ್ ಅವರ ನೇತೃತ್ವದಲ್ಲಿ ಶಮಿ ವೃಕ್ಷಕ್ಕೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದ ನಂತರ ತಹಸೀಲ್ದಾರ್ ವೈ. ರವಿ ಅವರು ಅಂಬು ಹೊಡೆಯುವ ಮೂಲಕ ವಿಜಯದಶಮಿ ಆಚರಣೆಗೆ ವಿಶೇಷ ಮೆರುಗು ನೀಡಿದರು.
ಈ ಮೆರವಣಿಗೆಯಲ್ಲಿ ಪಾವಗಡ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ 15ಕ್ಕೂ ಅಧಿಕ ಗ್ರಾಮ ದೇವತೆಗಳು ಮತ್ತು ದುರ್ಗಾ ವಿಗ್ರಹಗಳು ಪಾಲ್ಗೊಂಡಿದ್ದವು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಮಿ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ರಾಜಗೋಪಾಲ್, ಗ್ರಾಮ ಆಡಳಿತ ಅಧಿಕಾರಿ ರಾಜೇಶ್, ಪ್ರಸಾದ್. ಆಸಿಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾವಿರಾರು ಸಾರ್ವಜನಿಕ ರು ಉಪಸ್ಥಿತರಿದ್ದರು.