ಗುಬ್ಬಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗುಬ್ಬಿ ತಾಲ್ಲೂಕು ಘಟಕದ ನೂತನ ಸಂಚಾಲಕ ರಾಗಿ ಕಡಬ ಶಂಕರ್ ಅವರನ್ನು ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಪುನರಾಯ್ಕೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು ಅವರ ನೇತೃತ್ವದ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮತಿಯ ಮೇರೆಗೆ ಕಡಬ ಶಂಕರ್ ಅವರ ಕಳೆದ ಎರಡು ವರ್ಷದ ಕಾರ್ಯ ವೈಖರಿ ಮೆಚ್ಚಿ ಮತ್ತೊಮ್ಮೆ ಸಂಚಾಲಕರನ್ನಾಗಿ ಪುನರ್ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘು ಮಾತನಾಡಿ ಜಿಲ್ಲಾದ್ಯಂತ ಪ್ರತಿ ತಾಲೂಕು ಘಟಕ ಗಳ ಪುನರ್ ರಚನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಗುಬ್ಬಿ ಪ್ರವಾಸಿ ಮಂದಿರದಲ್ಲಿ ದಸಂಸ ತಾಲ್ಲೂಕು ಸಂಚಾಲಕರನ್ನಾಗಿ ಕಡಬ ಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸರ್ವಾನು ಮತದ ನಿರ್ಣಯದಂತೆ ಶಂಕರ್ ಅವರ ಆಯ್ಕೆ ಸಂಘಟನೆಯ ಶಕ್ತಿ ಹೆಚ್ಚಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: Gubbi News: ಗ್ರಾಮೀಣ ಶಾಲೆಯಲ್ಲಿ ಕಾನ್ವೆಂಟ್ ಮಾದರಿ ಶಿಕ್ಷಣ : ಡಾ.ನಾಗಭೂಷಣ್
ದಲಿತ ಸಂಘರ್ಷ ಸಮಿತಿಯ ನೂತನ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ನಾನು ದಲಿತರ, ಶೋಷಿತರ ಪರ ಧ್ವನಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಕಾರ್ಯ ವೈಖರಿಯನ್ನು ಮೆಚ್ಚಿ ಮತ್ತೊಮ್ಮೆ ನನ್ನನ್ನು ಸಮಿತಿಯ ತಾಲ್ಲೂಕು ಸಂಚಾಲಕರಾಗಿ ಪುನರಾಯ್ಕೆ ಮಾಡಿದ್ದಾರೆ. ಸಂಘವನ್ನು ತಳಮಟ್ಟದಲ್ಲಿ ಸಂಘಟಿಸಿ ಶೋಷಿತರ ಸಮಸ್ಯೆಗಳಿಗೆ ಧ್ವನಿ ಆಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ.ಎಸ್.ಜಗನ್ನಾಥ್ ಮಾತನಾಡಿ ಹೋಬಳಿ ಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಳಮಟ್ಟದಲ್ಲಿ ಸಂಘಟನೆಯನ್ನು ಮಾಡಬೇಕು. ಆಗ ದೀನ ದಲಿತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಸಮಿತಿಯ ಎರಡೂ ಬಣಗಳು ಶಕ್ತಿಯುತವಾಗಿ ಬೆಳೆದಿದೆ. ಇಬ್ಬರನ್ನೂ ಒಗ್ಗೂಡಿಸಿ ಹೋರಾಟಗಳು ನಡೆಸಲು ನಾನು ಕಳೆದ ಎಂಟು ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ. ನ್ಯಾಯ ದೊರಕಿಸುವ ಕಾರಣ ಎರಡೂ ಸಮಿತಿಯ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬುದ್ಧ ಬಸವ ಅಂಬೇಡ್ಕರ್ ಸಮಿತಿಯ ರಾಜ್ಯಾಧ್ಯಕ್ಷ ಮಾದಲಪುರ ಲೋಕೇಶ್, ಆದಿ ಜಾಂಬವ ಯುವ ಬ್ರಿಗೇಡ್ ನ ತಾಲ್ಲೂಕು ಅಧ್ಯಕ್ಷ ಗುಬ್ಬಿ ಬಸವರಾಜು, ದಲಿತ ಮುಖಂಡರಾದ ಕುಂದರನಹಳ್ಳಿ ನಟರಾಜು, ಅದಲಗೆರೆ ಈಶ್ವರಯ್ಯ, ಕಲ್ಲೂರು ರವಿಕುಮಾರ್, ದಲಿತ್ ಗಂಗಣ್ಣ, ನಾಗಭೂಷಣ್, ಶ್ರೀಧರ್, ಶಿವಸ್ವಾಮಿ, ಕೋಟೆ ಕಲ್ಲೇಶ್, ಗ್ಯಾರಹಳ್ಳಿ ಯೋಗೇಶ್, ಚೇಳೂರು ಸೋಮಶೇಖರ್, ಮಹೇಶ್, ರಾಮು, ಪಾತಾರಾಜು, ಚಿಕ್ಕೋನಹಳ್ಳಿ ನವೀನ್, ಕೊಡಿಗೆಹಳ್ಳಿ ಗಿರೀಶ್, ಕೊಂಡ್ಲಿ ಯೋಗೇಶ್, ಸಲೀಂ ಪಾಷಾ, ಲಕ್ಷ್ಮಯ್ಯ ಸೇರಿದಂತೆ ಇತರರು ಹಾಜರಿದ್ದರು.