Kancheepuram Varamahalakshmi Silks: ತುಮಕೂರಿನಲ್ಲಿ ʼಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ʼ ನೂತನ ಮಳಿಗೆ ಆರಂಭ
Kancheepuram Varamahalakshmi Silks: ಅತ್ಯುತ್ತಮ ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಖ್ಯಾತಿಯಾದ ʼಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಸ್ಕ್ʼನ 68ನೇ ನೂತನ ಮಳಿಗೆಯನ್ನು ತುಮಕೂರಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯ ಕೆ.ಆರ್.ಎಕ್ಸ್ಟೆನ್ಷನ್‌ನಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದರು.


ತುಮಕೂರು: ಸಾಯಿ ಸಿಲ್ಕ್ಸ್ (ಕಲಾಮಂದಿರ್) ಲಿಮಿಟೆಡ್ ವತಿಯಿಂದ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಖ್ಯಾತಿಯಾದ ʼಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಸ್ಕ್ʼನ 68ನೇ ನೂತನ ಮಳಿಗೆಯನ್ನು (Kancheepuram Varamahalakshmi Silks) ನಗರದಲ್ಲಿ ಬುಧವಾರ ಆರಂಭಿಸಲಾಯಿತು. ತುಮಕೂರಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆಯ ಕೆ.ಆರ್.ಎಕ್ಸ್ಟೆನ್ಷನ್‌ನಲ್ಲಿ ಮಳಿಗೆಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದರು.
ಈ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡಿ, ನಗರದಲ್ಲಿ ಗುಣಮಟ್ಟದ ಕಾಂಚೀಪುರಂ ಸಿಲ್ಸ್ಕ್‌ನ ನೂತನ ಮಳಿಗೆಯನ್ನು ಸಾಯಿ ಸಿಲ್ಕ್ಸ್ ತೆರೆದಿದೆ. ನಾಡಿನ ಜನರು ಕಾಂಚೀಪುರಂ ಉಡುಪುಗಳನ್ನು ತೊಟ್ಟು ಅದರ ಅಂದವನ್ನು ಸವಿಯಬಹುದು. ಅಲ್ಲದೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ತನ್ನ ಪ್ರೀಮಿಯಂನ ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.

ಕಾಂಚೀಪುರಂ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ಅವರ ಉಡುಪುಗಳು ವಿಶ್ವದಾದ್ಯಂತ ಪಡೆದಿವೆ. ನಗರದ ಜನರಿಗೆ ಹೊಸ ಅನುಭವನ್ನು ನೀಡಲು ಹೊಸ ಮಳಿಗೆ ತೆರೆಯಲಾಗಿದೆ. ಮದುವೆ, ಶುಭ ಸಮಾರಂಭಗಳಿಗೆ ಹೆಚ್ಚು ಜನಪ್ರಿಯತೆ ಪಡೆದಿದೆ ಎಂದು ಶ್ರೀಗಳು ಹೇಳಿದರು.
ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್‌ನ ನಿರ್ದೇಶಕ ದುರ್ಗಾರಾವ್ ಚಲವಾದಿ ಅವರು ಮಾತನಾಡಿ, ತುಮಕೂರಿನಲ್ಲಿ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆ ಉದ್ಘಾಟನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರ್ಯಾಂಡ್ ವಿಸ್ತರಣೆ ಮುಂದುವರಿಸಿದೆ. ಹೊಸ ಸ್ವರೂಪದ ಅಡಿಯಲ್ಲಿ ತನ್ನ 68ನೇ ಶೋ ರೂಂ ಅನ್ನು (ಕರ್ನಾಟಕದಲ್ಲಿ 4 ನೇ ಶೋ ರೂಂ) ನಗರದಲ್ಲಿ ಪ್ರಾರಂಭಿಸಿದೆ. ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ. ಮಳಿಗೆಯಲ್ಲಿ ಒಂದು ಸಾವಿರದಿಂದ 3 ಲಕ್ಷದ ಬೆಲೆ ವರೆಗೆ ಸೀರೆ ಲಭ್ಯವಿದೆ ಎಂದರು.
ಈ ಸುದ್ದಿಯನ್ನೂ ಓದಿ | Gold Price Today: ಸ್ವರ್ಣ ಪ್ರಿಯರಿಗೆ ಶಾಕ್ ಮೇಲೆ ಶಾಕ್; ಚಿನ್ನದ ದರದಲ್ಲಿ ಮತ್ತೆ ಏರಿಕೆ
ಕರ್ನಾಟಕದಲ್ಲಿ ತನ್ನ ನೆಲೆಯನ್ನು ಬಲಪಡಿಸಲು, ಎಸ್. ಎಸ್. ಕೆ. ಎಲ್ ವಿನೂತನವಾದ ಕೆಲಸಗಳನ್ನು ಮಾಡಿಕೊಂಡು ಬರುತ್ತದೆ. ಗ್ರಾಹಕರಿಗೆ ಗುಣಮಟ್ಟದ ಸಾಂಪ್ರದಾಯಿಕ ಮಗ್ಗದ ಅನುಭವವನ್ನು ನೀಡಲಾಗುತ್ತದೆ ಎಂದರು.
ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು, ಗಣ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.