ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Koratagere News: ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಕೊರಟಗೆರೆ ಗೋಪಾಲಕೃಷ್ಣ ನೇಮಕ

Koratagere News: ತುಮಕೂರು ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಕೊರಟಗೆರೆಯ ಗೋಪಾಲಕೃಷ್ಣ (ಏರ್ಟೆಲ್ ಗೋಪಿ) ಅವರನ್ನು ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ವಿನಯ್ ಕುಮಾರ್ ಆಜಾದ್ ಅಧಿಕೃತವಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಕೊರಟಗೆರೆ ಗೋಪಾಲಕೃಷ್ಣ ನೇಮಕ

ತುಮಕೂರು ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯ ನೂತನ ಜಿಲ್ಲಾಧ್ಯಕ್ಷ ಕೊರಟಗೆರೆಯ ಗೋಪಾಲಕೃಷ್ಣ ಮಾತನಾಡಿದರು. -

Profile
Siddalinga Swamy Mar 25, 2026 9:04 PM

ಕೊರಟಗೆರೆ, ಮಾ.25: ತುಮಕೂರು ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಕೊರಟಗೆರೆಯ ಗೋಪಾಲಕೃಷ್ಣ (ಏರ್ಟೆಲ್ ಗೋಪಿ) ಅವರನ್ನು ನೇಮಕ ಮಾಡಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ವಿನಯ್ ಕುಮಾರ್ ಆಜಾದ್ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪಟ್ಟಣದ (Koratagere News) ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.

ಈ ವೇಳೆ ಸಂಘಟನೆಯ ಭವಿಷ್ಯದ ಗುರಿ ಮತ್ತು ಉದ್ದೇಶಗಳ ಕುರಿತು ನೂತನ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಸವಿಸ್ತಾರವಾಗಿ ಮಾತನಾಡಿದರು. ದಲಿತರ ಪರ ಹೋರಾಟ ನಡೆಸಿ ದಲಿತರಿಗೆ ನ್ಯಾಯ ಕೊಡಿಸುವುದೇ ಭೀಮ್ ಆರ್ಮಿ ಸಂಘಟನೆಯ ಮೂಲ ಉದ್ದೇಶವಾಗಿದೆ. ಅಲ್ಲದೇ, ಭೀಮ್ ಆರ್ಮಿ ಸಂಘಟನೆಯ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವುದೇ ಕಾರ್ಖಾನೆ ಅಥವಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಭೀಮ್ ಆರ್ಮಿ ಸಂಘಟನೆಯ ಹೆಸರಿನಲ್ಲಿ ಯಾರಾದರೂ ಬೆದರಿಕೆ ಹಾಕುತ್ತಿದ್ದರೆ, ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಅವರು ಮನವಿ ಮಾಡಿದರು. ಅಂತಹವರ ವಿರುದ್ಧ ಸಂಘಟನೆಯೇ ಖುದ್ದಾಗಿ ದೂರು ದಾಖಲಿಸಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನು ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಪ್ರಮುಖ ಆದ್ಯತೆ ನೀಡಲಾಗುವುದು. ಸಂವಿಧಾನ ಶಿಲ್ಪಿ ಡಾ. ಬಿ.ಆ‌ರ್. ಅಂಬೇಡ್ಕ‌ರ್ ಅವರ ಆಶಯದಂತೆ ಜಿಲ್ಲೆಯಲ್ಲಿ ಸಂಘಟನೆಯು ನ್ಯಾಯಯುತವಾಗಿ ಕೆಲಸ ಮಾಡಲಿದೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ದಲಿತರಿಗೆ ಅನ್ಯಾಯವಾದರೂ ಸಂಘಟನೆ ಧ್ವನಿಯಾಗಲಿದೆ ಎಂದು ಭರವಸೆ ನೀಡಿದರು.

BESCOM: ಪೂರ್ವ ಮುಂಗಾರು ಮಳೆ ಅಬ್ಬರ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ

ʼದಲಿತ ಪರ ಸಂಘಟನೆ ಮತ್ತು ಕನ್ನಡಪರ ಹೋರಾಟಗಳಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ನನಗೆ ಭೀಮ್ ಆರ್ಮಿ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದೆʼ ಎಂದು ನೂತನ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.‌ ಸುದ್ದಿಗೋಷ್ಠಿಯಲ್ಲಿ ಕೆಂಗನಪಾಳ್ಯ ನವೀನ್ ಕುಮಾರ್, ಮಧುಗಿರಿ ಚಿರಂಜೀವಿ, ಶಂಕರ್, ಮಂಜುನಾಥ್, ಹರ್ಷ, ಕಿಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.