ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi News: ಕೆ.ಎನ್.ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು

ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ದಲಿತರಿಗೆ ಶಿಕ್ಷೆ ನೀಡಿದೆ. ದಲಿತರು ಸತ್ಯ ಹೇಳುವಂತಿಲ್ಲವೇ, ಸದಾಕಾಲ ದೀನ ದಲಿತರ ಪರ ನಿಲ್ಲುವ ರಾಜಣ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿದೆ. ನೇರವಾದಿ ಮತಪಟ್ಟಿಯ ಚಿತ್ರಣ ಸಿದ್ಧವಾದಾಗ ನಮ್ಮದೇ ಸರ್ಕಾರ ಇತ್ತು. ಅಂದು ಎಲ್ಲವನ್ನೂ ಗಮನಿಸಬೇಕಿತ್ತು ಎಂದು ನೇರವಾಗಿ ಸತ್ಯ ಹೇಳಿದ್ದಕ್ಕೆ ವಜಾ ಶಿಕ್ಷೆ ನೀಡಿದ್ದು ಸರಿಯಲ್ಲ. ವಾಲ್ಮೀಕಿ ಸಮಾಜವನ್ನು ಕಡೆಗಣಿಸಿದ್ದಾರೆ. ನಮ್ಮ ಜನಾಂಗದ ಬೆಳವಣಿಗೆ ಸಹಿಸದ ಕೆಲವರ ಕುತಂತ್ರಕ್ಕೆ ನಾಗೇಂದ್ರ ಅವರು ಮೊದಲ ಬಲಿ

ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು

Ashok Nayak Ashok Nayak Aug 15, 2025 2:59 PM

ಗುಬ್ಬಿ: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿದ್ದು ಖಂಡನೀಯ ಎಂದು ರಾಜಣ್ಣ ಅವರ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ತಾಲ್ಲೂಕು ವಾಲ್ಮೀಕಿ ಮುಖಂಡರು ಕಾಂಗ್ರೆಸ್ ನಡೆ ಸಂಪೂರ್ಣ ದಲಿತ ವಿರೋಧಿ ಎನಿಸಿದೆ ಎಂದು ಗುಡುಗಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ದಲಿತರಿಗೆ ಶಿಕ್ಷೆ ನೀಡಿದೆ. ದಲಿತರು ಸತ್ಯ ಹೇಳುವಂತಿಲ್ಲವೇ, ಸದಾಕಾಲ ದೀನ ದಲಿತರ ಪರ ನಿಲ್ಲುವ ರಾಜಣ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿದೆ. ನೇರವಾದಿ ಮತಪಟ್ಟಿಯ ಚಿತ್ರಣ ಸಿದ್ಧವಾದಾಗ ನಮ್ಮದೇ ಸರ್ಕಾರ ಇತ್ತು. ಅಂದು ಎಲ್ಲವನ್ನೂ ಗಮನಿಸಬೇಕಿತ್ತು ಎಂದು ನೇರವಾಗಿ ಸತ್ಯ ಹೇಳಿದ್ದಕ್ಕೆ ವಜಾ ಶಿಕ್ಷೆ ನೀಡಿದ್ದು ಸರಿಯಲ್ಲ. ವಾಲ್ಮೀಕಿ ಸಮಾಜವನ್ನು ಕಡೆಗಣಿಸಿದ್ದಾರೆ. ನಮ್ಮ ಜನಾಂಗದ ಬೆಳವಣಿಗೆ ಸಹಿಸದ ಕೆಲವರ ಕುತಂತ್ರಕ್ಕೆ ನಾಗೇಂದ್ರ ಅವರು ಮೊದಲ ಬಲಿ. ಈಗ ರಾಜಣ್ಣ ಅವರು ಎರಡನೇ ಬಲಿ. ಈ ಅಸಹನೆ ನಡವಳಿಕೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ. ವಾಲ್ಮೀಕಿ ಸಮಾಜ ಎಲ್ಲಡೆ ಪ್ರತಿಭಟನೆ ನಡೆಸಲಿದೆ. ಗುಬ್ಬಿ ತಾಲ್ಲೂಕಿನಲ್ಲಿ ಸಹ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ಇದನ್ನೂ ಓದಿ: Tumkur (Gubbi) News: ಬಿದರೆ ಗ್ರಾಪಂ ಅಧ್ಯಕ್ಷರಾಗಿ ರೇಣುಕಮ್ಮ ರಾಮಕೃಷ್ಣಯ್ಯ ಅವಿರೋಧ ಆಯ್ಕೆ

ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಲಕ್ಷ್ಮೀರಂಗಯ್ಯ ಮಾತನಾಡಿ ವಾಲ್ಮೀಕಿ ಸಮಾಜಕ್ಕೆ ಮಾಡಿದ ಅಪಮಾನ ಇದಾಗಿದೆ. ಕಾಂಗ್ರೆಸ್ ದಲಿತ ಪರ ನಿಲ್ಲುತ್ತಿಲ್ಲ. ದಲಿತ ಮುಖಂಡರ ಬೆಳವಣಿಗೆ ಸಹಿಸು ತ್ತಿಲ್ಲ. ಕುತಂತ್ರ ನಡೆಸಿದ ಮಹಾನಾಯಕರಿಗೆ ಸಮಾಜ ತಕ್ಕ ಪಾಠ ಕಲಿಸಲಿದೆ. ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಲಿದೆ. ರಾಜಣ್ಣ ಅವರಿಗೆ ಆಗಿರುವ ಅನ್ಯಾಯ ವಿರುದ್ಧ ಪ್ರತಿಭಟನೆ ಪಕ್ಷಾತೀತವಾಗಿ ನಡೆಸಲಾಗುವುದು. ದಲಿತ ಪರ ಎಲ್ಲಾ ಸಂಘಟನೆ ಹೋರಾಟಕ್ಕೆ ಧುಮ್ಮುಕ್ಕಲಿದೆ ಎಂದರು.

ನಾಯಕ ಸಮಾಜದ ಅಧ್ಯಕ್ಷ ಸಾಕಸಂದ್ರ ದೇವರಾಜ್ ಮಾತನಾಡಿ ಎಲ್ಲಾ ಜಾತಿ ಧರ್ಮದವರನ್ನು ತೆಕ್ಕೆಗೆ ತೆಗೆದುಕೊಂಡು ಕೆಲಸ ಮಾಡುವ ರಾಜಣ್ಣ ಅವರು ಇಂದಿಗೂ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುತ್ತಿದ್ದಾರೆ. ಇಲ್ಲಿಯೇ ಅವರ ಕಾರ್ಯಕ್ಕೆ ತಕ್ಕ ಉತ್ತರ ಸಿಕ್ಕಿದೆ. ಕಾಣದ ಕೈಗಳು ನಡೆಸಿದ ಕುತಂತ್ರಕ್ಕೆ ರಾಜಣ್ಣ ಅವರು ಬಲಿಯಾಗಿದ್ದಾರೆ. ತಲೆದಂಡ ಎಂದು ಖುಷಿ ಪಡುವವರು ತಿಳಿಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲೆದಂಡ ಎಂದು ಅರ್ಥ ಮಾಡಿಕೊಳ್ಳ ಬೇಕು. ಗುಬ್ಬಿ ತಾಲ್ಲೂಕಿನಲ್ಲಿ ಉಗ್ರ ಪ್ರತಿಭಟನೆಗೆ ದಿನಾಂಕ ನಿಗದಿ ಮಾಡಲಿದ್ದೇವೆ. ರಾಜಣ್ಣ ಪರ ವಾಲ್ಮೀಕಿ ಸಮಾಜ ನಿಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಶಿವಣ್ಣ, ಮುಖಂಡರಾದ ಎಚ್.ಡಿ.ಯಲ್ಲಪ್ಪ, ಶಂಕರ್, ನಾಗೇಶ್, ರಾಜಶೇಖರ್, ವಿಶ್ವನಾಥ್, ಚೇತನ್ ನಾಯಕ್, ವಿದ್ಯಾ ಸಾಗರ್, ಮಂಜುನಾಥ್, ಕಂಚಿ ರಾಯಪ್ಪ ಇತರರು ಇದ್ದರು.\