ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ರಾಜ್ಯಸಭಾ ಮಾಜಿ ಸದಸ್ಯೆ ಅವರ ಸರ್ವೇ ಕಾರ್ಯ ವಿಳಂಬ ಪ್ರಕರಣ : ಸ್ವಯಂ ಪ್ರೇರಿತ ದೂರು ದಾಖಲಿಸಿದ ಲೋಕಾಯುಕ್ತರು

ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಅವರ ಜಮೀನು ಸರ್ವೇ ಕಾರ್ಯ ಮಾಡುವಲ್ಲಿ ವಿಳಂಬ ಅನುಸರಿಸಿದ್ದಲ್ಲದೆ ಮೂರು ಬಾರಿ ಹಣ ಕಟ್ಟಿಸಿದ್ದು, ಜೊತೆಗೆ ಅವರಿಗೆ ಅಗೌರವ ತೋರಿದ್ದ ಭೂಮಾಪನ ಇಲಾಖೆಯ ವಿರುದ್ಧ ಸುಮೋಟೋ ದೂರು ದಾಖಲಿಸಿಕೊಂಡ ಉಪ ಲೋಕಾ ಯುಕ್ತರು ಪರವಾನಗಿ ಸರ್ವೇಯರ್ ಶಿವಾನಂದ್, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ, ಗುಬ್ಬಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ

ಗುಬ್ಬಿ: ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ(Former member of Rajya Sabha B.Jayashree) ಅವರ ಜಮೀನು ಸರ್ವೇ ಕಾರ್ಯ ಮಾಡುವಲ್ಲಿ ವಿಳಂಬ ಅನುಸರಿಸಿದ್ದಲ್ಲದೆ ಮೂರು ಬಾರಿ ಹಣ ಕಟ್ಟಿಸಿದ್ದು, ಜೊತೆಗೆ ಅವರಿಗೆ ಅಗೌರವ ತೋರಿದ್ದ ಭೂಮಾಪನ ಇಲಾಖೆಯ ವಿರುದ್ಧ ಸುಮೋಟೋ (Sumoto) ದೂರು ದಾಖಲಿಸಿಕೊಂಡ ಉಪ ಲೋಕಾಯುಕ್ತರು ಪರವಾನಗಿ ಸರ್ವೇಯರ್ ಶಿವಾನಂದ್, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ, ಗುಬ್ಬಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

ಲೋಕಾಯುಕ್ತ ಕಾಯಿದೆ ಕಲಂ 1984 ರ 2(2)(ಸಿ), ಕಲಂ 2(5), 2(10), ಭಾರತೀಯ ದಂಡ ಸಂಹಿತೆ ಅಧ್ಯಾಯ 9 ರ ಭ್ರಷ್ಟಾಚಾರ ತಡೆ ಕಾಯಿದೆಯಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ಮಾರ್ಚ್ 9 ರಂದು ಆಕ್ಷೇಪ ಸಲ್ಲಿಸಲು ಎಲ್ಲಾ ದಾಖಲಾತಿಯೊಂದಿಗೆ ಖುದ್ದು ಹಾಜರಾಗಲು ಉಪಲೋಕಾಯುಕ್ತ ಬಿ.ವೀರಪ್ಪ ಆದೇಶ ಹೊರಡಿಸಿದ್ದಾರೆ.

ಸರ್ವೇ ಕಾರ್ಯ ಮಾಡುವಲ್ಲಿ ವಿಳಂಬ: ಹಿನ್ನೆಲೆ

ರಾಜ್ಯಸಭಾ ಮಾಜಿ ಸದಸ್ಯೆ ಜಯಶ್ರೀ ರನ್ನು ಅಲೆದಾಡಿಸಿದ ಭೂ ಮಾಪನ ಇಲಾಖೆ..!!

ರಂಗ ಚಟುವಟಿಕೆಗೆ ಮುಡುಪಾದ ಜಿ.ವಿ.ಮಾಲತಮ್ಮ ಆರ್ಟ್ ಟ್ರಸ್ಟ್ ಹೆಸರಿನಲ್ಲಿ ಜಮೀನು ಖಾತೆ ಮಾಡಿಸಿಕೊಳ್ಳಲು ಅವಶ್ಯವಾದ ಸರ್ವೇ ಕೆಲಸಕ್ಕೆ ಕಳೆದ ಒಂದು ತಿಂಗಳಿಂದ ಮೂರು ಬಾರಿ ಹಣ ಸಂದಾಯ ಮಾಡಿಯೂ ಸರ್ವೇಯರ್ ಶಿವಾನಂದ್ ಅವರ ಕೈಗೆ ಸಿಗದೆ ಬೇಜವಾಬ್ದಾರಿ ತೋರಿ ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಾಧಿಕಾರಿಗಳ ಕೆಲಸ ಮುಖ್ಯ ಎಂದು ಹಾರಿಕೆ ಉತ್ತರ ನೀಡಿ ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಹಾಗೂ ರಂಗತಜ್ಞ ಅನಂದರಾಜ್ ಅವರನ್ನು ಅಲೆದಾಡಿಸಿದ್ದಾರೆ.

ಒಂದು ತಿಂಗಳ ಹಿಂದೆ ರಾಜ್ಯಸಭಾ ಮಾಜಿ ಸದಸ್ಯೆ ಜಯಶ್ರೀ ಅವರು ತಮ್ಮದೇ ಜಮೀನನ್ನು ರಂಗ ಚಟುವಟಿಕೆಗೆ ಬಳಸಲು ದಾನವಾಗಿ ಸುಮಾರು 5 ಗುಂಟೆ ಜಮೀನು ನೀಡಲು ಸಜ್ಜಾದರು. ಸರ್ಕಾರ ಸಹ ರಂಗ ಸಜ್ಜಿಕೆಗೆ ಅನುದಾನ ಮಂಜೂರು ಮಾಡಿದೆ. ಆದರೆ ದಾನ ಪ್ರಕ್ರಿಯೆ ನಡೆಸಲು ಅವಶ್ಯ ವಾದ ಸರ್ವೇ ಕೆಲಸ ಮಾಡಲು ಭೂ ಮಾಪನ ಇಲಾಖೆಗೆ ಮೂರು ಬಾರಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಮೂರು ಬಾರಿ ಕಟ್ಟಿದ್ದರು.

gubbi R

ಸಾಮಾನ್ಯ ಅರ್ಜಿ ಸೇರಿದಂತೆ ಎರಡು ಬಾರಿ ಸ್ವಾವಲಂಬಿ ಅರ್ಜಿ ಸಲ್ಲಿಸಿದ ನಂತರ ಈಗ ಆಗ ಎನ್ನು ತ್ತಲೇ ಗುರುವಾರ ಬರಲು ಸರ್ವೇಯರ್ ಶಿವಾನಂದ್ ಹೇಳಿದ್ದರು. ಮಾಜಿ ಸಂಸದೆ ಜಯಶ್ರೀ ಹೇಳಿದಂತೆ ಬೆಂಗಳೂರಿನಿಂದ ಗುಬ್ಬಿ ಕಚೇರಿಗೆ ಬಂದರೆ ಶಿವಾನಂದ್ ಬೇರೆಡೆ ಸರ್ವೇ ಕೆಲಸವಿದೆ. ನಮ್ಮ ಮೇಲಾಧಿಕಾರಿಗಳ ಕೆಲಸ. ಪೋನ್ ಕರೆ ಬಂದಿದೆ. ಆಗಾಗಿ ಆ ಕೆಲಸ ಮುಖ್ಯ. ನಿಮ್ಮದಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದು ಜಯಶ್ರೀ ಅವರಲ್ಲಿ ತೀವ್ರ ಬೇಸರ ತಂದಿದೆ. ಇಲ್ಲಿನ ವ್ಯವಸ್ಥೆ ಕರ್ತವ್ಯ ಲೋಪದ ಬಗ್ಗೆ ತೀವ್ರ ಅಸಮಾಧಾನ ಸಹ ವ್ಯಕ್ತಪಡಿಸಿದರು.

ಒಟ್ಟು ಮೂರು ಅರ್ಜಿಗಳನ್ನು ಸಲ್ಲಿಸಿ ಒಟ್ಟು 3,500 ರೂಗಳನ್ನು ಶುಲ್ಕ ಕಟ್ಟಿ ಹೇಳಿದ ಸಮಯಕ್ಕೆ ಕಚೇರಿ ಬಳಿ ಬಂದರೂ ಕೈಗೆ ಸಿಗದ ಸರ್ವೇಯರ್ ಉದ್ಧಟತನ ಮಾತುಗಳಾಡಿ ತೀವ್ರ ಬೇಸರ ಉಂಟು ಮಾಡಿದ್ದಾರೆ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕ್ಕೆ ಮನ್ನಣೆ ಸಿಗದಿದ್ದರೆ ಹೇಗೆ, ಮಾಜಿ ಸಂಸದೆ ನನಗೆ ಅಲೆದಾಡುವ ಈ ಗತಿ ಬಂದಿದೆ. ಸಾಮಾನ್ಯ ರೈತನ ಕತೆ ಏನು ಎಂದು ಪ್ರಶ್ನಿಸಿದರು. ಸರ್ವೇ ಮೇಲ್ವಿಚಾರಕ ನಿಜಗುಣಪ್ಪ ಅವರೊಂದಿಗೆ ನಮ್ಮ ಇಲಾಖೆಯ ಕಮಿಷನರ್ ಕಚೇರಿಯಿಂದ ಮೌಖಿಕ ಆದೇಶ ಬಂದ ಹಿನ್ನಲೆ ನಿಟ್ಟೂರು ಭಾಗಕ್ಕೆ ತೆರಳಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ ಪರವಾನಗಿ ಸರ್ವೇಯರ್ ಶಿವಾನಂದ್ ಅವರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಸ್ಥಳದಲ್ಲಿ ಒತ್ತಾಯಿಸಿದರು.

ಸ್ಥಳಕ್ಕೆ ಧಾವಿಸಿದ ಸರ್ವೇಯರ್ ದಿನೇಶ್ ಹಾಗೂ ಬಾಹುಬಲಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಶಿವಾನಂದ್ ಅವರು ಅರ್ಜಿಗೆ ಸಹಿ ಹಾಕಿಸಲು ಸೂಚಿಸಿದ್ದ ಮತ್ತೋರ್ವ ಸರ್ವೇಯರ್ ರಂಗಸ್ವಾಮಿ ಬಂದು ಸಹಿ ಪಡೆದರು. ಸಹಾಯಕ ನಿರ್ದೇಶಕ ತಿಮ್ಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ ಜಯಶ್ರೀ ಅವರು ಮಾಜಿ ಸಂಸದೆ ಸ್ಥಾನಕ್ಕೆ ಕೊಂಚ ಬೆಲೆ ನೀಡಬೇಕಿತ್ತು ಎಂದು ತಿಳಿಸಿ ಬೇಸರದಲ್ಲೇ ಕಚೇರಿಯಿಂದ ಹೊರ ನಡೆದರು.