Madhugiri News: ಅರ್ಹರಿಗೆ ನಿವೇಶನದ ಹಕ್ಕುಪತ್ರದ ಜತೆಗೆ ಮನೆ ಮಂಜೂರು: ಶಾಸಕ ಕೆ.ಎನ್. ರಾಜಣ್ಣ ಭರವಸೆ
Madhugiri News: ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಜನಸ್ಪಂದನಾ, ಖಾತಾ ಆಂದೋಲನ ಕಾರ್ಯಕ್ರಮ, ವಸತಿ ಅದೇಶ ಪತ್ರ ಹಾಗೂ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎನ್ ಜರುಗಿತು.

-

ಮಧುಗಿರಿ: ಸಾಗುವಳಿ ಚೀಟಿ ಕೊಟ್ಟಿದ್ದಾರೆ ಆದರೆ ಇನ್ನೂ ಖಾತೆ ಆಗಿಲ್ಲ, ಕೆಲವರಿಗೆ ಮಂಜೂರು ಆಗಿದೆ ಅವರಿಗೆ ಸಾಗುವಳಿ ಚೀಟಿ ನೀಡಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ, ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ (Madhugiri News) ಐ.ಡಿ.ಹಳ್ಳಿ ಹೋಬಳಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಜನಸ್ಪಂದನಾ, ಖಾತಾ ಆಂದೋಲನ ಕಾರ್ಯಕ್ರಮ, ವಸತಿ ಅದೇಶ ಪತ್ರ ಹಾಗೂ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಜನರ ಬಳಿಗೆ ಸರ್ಕಾರ ಬರುವುದೇ ಜನ ಸ್ಪಂದನ ಕಾರ್ಯಕ್ರಮದ ಉದ್ದೇಶವಾಗಿದೆ. ಮುಂದಿನ 15 ದಿನಗಳ ನಂತರ ಮಿಡಿಗೇಶಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು, ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸ್ಪಂದನಾ ಜತೆಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ಗ್ರಾಮದ ಎರಡನೇ ವಾರ್ಡ್ ವ್ಯಾಪ್ತಿಯ ನವಗ್ರಾಮ ಬಳಿ ನಿವೇಶನಗಳನ್ನು ರಚಿಸಿದ್ದು, ಯಾರು ಅರ್ಹ ಪಲಾನುಭವಿ ಇದ್ದಾರೋ ಅಂತಹವರಿಗೆ ಗುರುತಿಸಿ ನಿವೇಶನದ ಹಕ್ಕುಪತ್ರದ ಜತೆಗೆ ಮನೆಯನ್ನು ಸಹ ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಅವರು ಭರವಸೆ ನೀಡಿದರು.
ಜನ ಸಂಪರ್ಕ ಸಭೆಯಲ್ಲಿ ಹಕ್ಕು ಪತ್ರ, ಹೊಸ ಮನೆಗಳಿಗೆ ಕಾರ್ಯಾದೇಶ ಪತ್ರ, ಕಾರ್ಮಿಕ ಇಲಾಖೆ ವತಿಯಿಂದ ಕಿಟ್ ವಿತರಣೆ, ಪೌತಿ ಖಾತೆ, ಕೃಷಿ ಇಲಾಖೆಯಿಂದ ಸವಲತ್ತು, ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು.
ಈ ಸುದ್ದಿಯನ್ನೂ ಓದಿ | Karnataka Grameena Bank Recruitment 2025: ಪದವೀಧರರಿಗೆ ಗುಡ್‌ನ್ಯೂಸ್; ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1,425 ಹುದ್ದೆ
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಜಿ. ಶಿವಪ್ಪ, ತಹಸೀಲ್ದಾರ್ ಎಚ್. ಶ್ರೀನಿವಾಸ, ಇಒ ಲಕ್ಷ್ಮಣ್, ಸಿಪಿಐ ಹನುಮಂತ ರಾಯಪ್ಪ, ಐ.ಡಿ.ಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಹೋಬಳಿಯ ವ್ಯಾಪ್ತಿಯ ಪಂಚಾಯತಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಹಾಗೂ ಇತರರು ಭಾಗವಹಿಸಿದ್ದರು.