ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯಮಶೀಲತೆ ಸಮಾವೇಶ
ನವೋದ್ಯಮವನ್ನು ಸಹಾಯ ಮಾಡುವ ನಿಟ್ಟಿನಲ್ಲಿ, ಫುಡ್ ಚೈನ್ ಕ್ಯಾಂಪೇನ್‌ನ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆವಿಷ್ಕಾರ ಮತ್ತು ಅಂತಾರಾಷ್ಟ್ರೀಯ ಉದ್ಯಮ ಶೀಲತೆ ಮತ್ತು ವ್ಯಾಪಾರ ಸಲಹೆಯ ಸಮಾವೇಶ ಅವನ್ಯ ವನ್ನು ತುಮಕೂರು ವಿವಿ ಆವರಣದಲ್ಲಿ ಆಯೋಜಿಸಲಾಗಿತ್ತು.

-

ನ್ಯಾ.ಸಂತೋಷ್ ಹೆಗ್ಡೆ ಭಾಗಿ
ರಾಜ್ಯದ ಟಯರ್ 2 ನಗರಗಳಲ್ಲಿ ಉದ್ಯಮ ಬೆಳೆಸಲು ಸಲಹೆ
ನವೋದ್ಯಮವನ್ನು ಸಹಾಯ ಮಾಡುವ ನಿಟ್ಟಿನಲ್ಲಿ, ಫುಡ್ ಚೈನ್ ಕ್ಯಾಂಪೇನ್‌ನ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆವಿಷ್ಕಾರ ಮತ್ತು ಅಂತಾರಾಷ್ಟ್ರೀಯ ಉದ್ಯಮಶೀಲತೆ ಮತ್ತು ವ್ಯಾಪಾರ ಸಲಹೆಯ ಸಮಾವೇಶ ಅವನ್ಯ ವನ್ನು ತುಮಕೂರು ವಿವಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಮಾವೇಶದ ಉದ್ಘಾಟನೆಯನ್ನು ನ್ಯಾ.ಎನ್ ಸಂತೋಷ ಹೆಗ್ಡೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ನಿಶಾ ಯೋಗೀಶ್ವರ್, ಡಾ.ಎಚ್.ಜಿ.ಚಂದ್ರಶೇಖರ್ ಸೇರಿದಂತೆ ಇನ್ನೂ ಹಲವಾರು ಗಣ್ಯರು, ರಾಜ್ಯ ಹಲವು ಕಡೆಗಳಿಂದ ಆಗಮಿಸಿದ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾವೇಶದ ಉದ್ಘಾಟನೆ ಮಾಡಿ ಮಾತನಾಡಿದ ನ್ಯಾ ಸಂತೋಷ ಹೆಗ್ಡೆಯವರು, ರಾಜ್ಯ ದಲ್ಲಿ ಎಲ್ಲ ಕೆಲಸಕ್ಕೂ ಬೆಂಗಳೂರು ಒಂದನ್ನೇ ಕೇಂದ್ರ ಮಾಡಿದ್ದರಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿ ನಂಥ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಜಾಸ್ತಿಯಾಗಿ, ನಗರ ಪ್ರದೇಶಗಳಲ್ಲಿ ಜನದಟ್ಟನೆ ಉಂಟಾ ಗುತ್ತಿದೆ. ಹಾಗೇ ಬೇರೆ ನಗರಗಳಲ್ಲಿ ಅಭಿವೃದ್ಧಿ ಕಡಿಮೆಯಾಗುತ್ತಿದೆ ಎಂದು ಬೇಸರ ಪಟ್ಟರು.
ಇದನ್ನೂ ಓದಿ: Tumkur News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ
ಕಾರ್ಯಕ್ರಮದಲ್ಲಿ ಮಾತನಾಡಿದ ನಿಶಾ ಯೋಗೀಶ್ವರ್ ಅವರು, ʼಈ ದೇ಼ಶ ಅಭಿವೃದ್ಧಿಯಾಗ ಬೇಕಾದರೆ, ನಿರುದ್ಯೋಗ ಮತ್ತು ಬಡತನ ಕಡಿಮೆಯಾಗಗಬೇಕಾದರೆ, ಯುವರೆಲ್ಲ ತಮ್ಮದೇ ಸ್ವಂತ ಉದ್ಯಮವನ್ನು ಶುರುಮಾಡಬೇಕು. ಇದರಿಂದ ನಮ್ಮ ದೇಶದ ಎಕಾನಮಿ ಹೆಚ್ಚಿ, ಬೇರೆ ದೇಶಗಳ ಮೇಲೆ ನಮ್ಮ ಅವಲಂಬನೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಎರಡನೇ ದಿನದ ಕಾರ್ಯಕ್ರಮವನ್ನು ಪತ್ರಕರ್ತ ಗೌರೀಶ್ ಅಕ್ಕಿ ನೆರವೇರಿಸಿ, ದೊಡ್ಡ ಕೆಲಸವನ್ನು ಮಾಡಲು ದೊಡ್ಡ ಕನಸನ್ನು ಕಾಣಬೇಕು. ಗುರಿ ಸ್ಪಷ್ಟವಿದ್ದಷ್ಟೂ ಅದರ ಹತ್ತಿರಕ್ಕೆ ನಾವು ಹೋಗೇ ಹೋಗುತ್ತೇವೆ. ಜೀವನದಲ್ಲಿ ಸೋಲು ಬೀಳು ಸಹಜ ಆದರೆ, ಅದಕ್ಕೆಲ್ಲ ಧೃತಿಗೆಡದೆ ನಮ್ಮ ಕೆಲಸ ವನ್ನು ಮಾಡುತ್ತಿರಬೇಕು ಎಂದು ಹೇಳಿದರು.
ಉದ್ಘಾಟನೆಯ ನಂತರ ಉದ್ಯಮಿಗಳಿಗೆ ನೆರವಾಗುವಂಥ ಹಲವು ಕಾರ್ಯಕ್ರಮ ಹಾಗೂ ಸಂವಾದ ಗಳು ನಡೆದವು. ಈ ಕಾರ್ಯಕ್ರಮದಲ್ಲಿ ಫುಡ್ ಚೈನ್‌ನ ಸಂಸ್ಥಾಪಕರಾದ ಸೌರೀಶ್ ಹೆಗ್ಡೆ, ಯತೀಷ್ ತುಕಾರಾಂ, ಆನ್ಫಿಕ್ಸ್‌ನ ಸಂಸ್ಥಾಪಕರಾದ ಕುಮೈಲ್ ಅಬ್ಬಾಸ್, ಟಿಐಐಇಸಿಯ ಸಿಇಓ ಆದ ಸತೀಶ್ ಭವಂಕರ್ ಅವರು ವಿದ್ಯಾರ್ಥಿಗಳು ನೆರೆದಿದ್ದರು.
ಫುಡ್ ಚೈನ್‌ನ ಬಗ್ಗೆ
ಈ ಕಾರ್ಯಕ್ರಮದ ರೂವಾರಿಯಾದ ಫುಡ್ ಚೈನ್‌ನ ಮುಂದಿನ ಪೀಳಿಗೆಗೆ ಮತ್ತು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ತಿಳಿಸಿ, ಮತ್ತವರಲ್ಲಿ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವೈದ್ಯ ಪ್ರಾಧ್ಯಾಪಕರಾದ ಡಾ.ಸೌರೀಶ್ ಹೆಗ್ಡೆ ಮತ್ತು ಉದ್ಯಮಿಯಾದ ಯತೀಶ್ ಅವರು ಇದರ ರುವಾರಿ ಗಳಾಗಿದ್ದು. ರೈತರಲ್ಲಿ ಸಾವಯವ ಕೃಷಿ ಮತ್ತು ನೇರ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿಸುವ ಕೆಲಸ. ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ಮತ್ತು ಸಲಹೆಯನ್ನು ನೀಡುವ ಹಲವಾರು ಕಾರ್ಯಕ್ರಮಗಳನ್ನು ರಾಜ್ಯದ್ಯಂತ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.