ಮಧುಗಿರಿ, ಜ.16: ಪಟ್ಟಣದ (Madhugiri News) ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವದ ಅಂಗವಾಗಿ ಜ.22 ರಿಂದ ಫೆ. 4 ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಜ.22ರಂದು ಸಂಜೆ ವಿಶ್ವಕ್ ಸೇನಾ ಆರಾಧನೆ, ಪುಣ್ಯಾಹ, ಅಂಕುರಾರ್ಪಣ, ರಕ್ಷಾ ಬಂಧನ ಮತ್ತು ಹಂಸವಾಹನ ಸೇವೆ ಇರುತ್ತದೆ. 23ರಂದು ಬೆಳಗ್ಗೆ ಅಭಿಷೇಕ, ಕಳಶ ಸ್ಥಾಪನೆ, ಧ್ವಜಾರೋಹಣ, ಭೇರಿ ತಾಡನ, ಗಜೇಂದ್ರ ಮೋಕ್ಷ ಇರುತ್ತದೆ. 24ರಂದು ಬೆಳಗ್ಗೆ ಶ್ರೀ ಸ್ವಾಮಿಯವರಿಗೆ ಅಭಿಷೇಕ, ಮುತ್ತಂಗಿ ಸೇವೆ, ಸಹಸ್ರನಾಮಾರ್ಚನೆ, ಗರುಡೋತ್ಸವ, ಕಾಶಿಯಾತ್ರೆ, ಶ್ರೀ ಲಕ್ಷ್ಮಿ ಕಲ್ಯಾಣ ನಂತರ ಪ್ರಸಾದ ವಿನಿಯೋಗ ಇರುತ್ತದೆ.
ಜ.25ರಂದು ಬೆಳಗ್ಗೆ ಅಭಿಷೇಕ, ಸೂರ್ಯಮಂಡಲ ಉತ್ಸವ, ಪೂಲಂಗಿಸೇವೆ, ಶ್ರೀ ಸ್ವಾಮಿಯವರಿಗೆ ತೋಮಾಲೆ ಸೇವೆ, ಅಂತರ ಬ್ರಹ್ಮರಥೋತ್ಸವ ಇರುತ್ತದೆ. ಶ್ರೀ ರಾಮಾನುಜ ನಿವೇದನೆ, ರಥಾಂಗ ಹೋಮ ಇರುತ್ತದೆ. ಸಂಜೆ ಧೂಳೋತ್ಸವ, ಕನ್ನಡಿ ಮಂಟಪ ಆಸ್ಥಾನ ಪೂಜೆ, ವಾದ್ಯಸೇವೆ, ವಿಶೇಷ ಸೇವೆ ಇರುತ್ತದೆ.
26ರಂದು ಬೆಳಗ್ಗೆ ಅಭಿಷೇಕ, ಉಯ್ಯಾಲೋತ್ಸವ, ರಾತ್ರಿ ಪಾರ್ವಟೋತ್ಸವ, ಪ್ರಾಕಾರೋತ್ಸವ ಇರುತ್ತದೆ. 27ರಂದು ಬೆಳಗ್ಗೆ ಅಭಿಷೇಕ, ವಸಂತೋತ್ಸವ, ಅವಭೃತ ಸ್ನಾನ, ಧ್ವಜ ಅವರೋಹಣ, ಚಂದ್ರಪ್ರಭ ವಾಹನ ಇರುತ್ತದೆ. 28 ರಂದು ಬೆಳಗ್ಗೆ ಅಭಿಷೇಕ, ದ್ವಾದಶ ಆರಾಧನೆ, ಸಪ್ತಾವರಣ ಉತ್ಸವ, ಉಯ್ಯಾಲೋತ್ಸವ ಇರುತ್ತದೆ. 29ರಂದು ಬೆಳಗ್ಗೆ ಅಭಿಷೇಕ, ರಾಸ ಕ್ರೀಡೋತ್ಸವ ಹಾಗೂ ರಾತ್ರಿ ಶೇಷವಾಹನೋತ್ಸವ ಇರುತ್ತದೆ . 30ರಂದು ಬೆಳಗ್ಗೆ ಅಭಿಷೇಕ, ರಾತ್ರಿ ವೈಮಾಳಿಗೋತ್ಸವ ಇರುತ್ತದೆ. 31ರಂದು ಬೆಳಿಗ್ಗೆ ಅಭಿಷೇಕ, ವೈರಮುಡಿ ಉತ್ಸವ, ಪ್ರಕಾರೋತ್ಸವ ಇರುತ್ತದೆ.
Hampi Utsav 2026: ಫೆ.13ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ 'ಹಂಪಿ ಉತ್ಸವ-2026'
ಫೆ.1ರಂದು ಬೆಳಗ್ಗೆ ಪುಷ್ಪಯಾಗ, ಮೋಹಿನಿ ಉತ್ಸವ, ಸಂಜೆ ಶೇಷವಾಹನ ಇರುತ್ತದೆ. 2ರಂದು ಬೆಳಿಗ್ಗೆ ಹನುಮಂತ ವಾಹನೋತ್ಸವ ಇರುತ್ತದೆ. 3ರಂದು ಬೆಳಿಗ್ಗೆ ಅಭಿಷೇಕ, ರಾತ್ರಿ ಶಯನೋತ್ಸವ ಇರುತ್ತದೆ. 4ರಂದು ಬೆಳಿಗ್ಗೆ ಸುಪ್ರಭಾತ ಸೇವೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.