Madhugiri News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರ
Madhugiri News: ಮಧುಗಿರಿ ತಾಲೂಕಿನ ಪುರವರ ವಲಯದ ಕೊಡ್ಲಾಪುರ ಕಾರ್ಯ ಕ್ಷೇತ್ರದ ಮಾಸಾಶನ ಫಲಾನುಭವಿ ಗೋವಿಂದಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಿಕೊಟ್ಟಿರುವ ವಾತ್ಸಲ್ಯ ಮನೆಯನ್ನು ಮಂಗಳವಾರ ಹಸ್ತಾಂತರ ಮಾಡಲಾಯಿತು.

-

ಮಧುಗಿರಿ: ತಾಲೂಕಿನ ಪುರವರ ವಲಯದ ಕೊಡ್ಲಾಪುರ ಕಾರ್ಯ ಕ್ಷೇತ್ರದ (Madhugiri News) ಮಾಸಾಶನ ಫಲಾನುಭವಿ ಗೋವಿಂದಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಿಕೊಟ್ಟಿರುವ ವಾತ್ಸಲ್ಯ ಮನೆಯನ್ನು ಮಂಗಳವಾರ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಫಲಾನುಭವಿ ಗೋವಿಂದಪ್ಪ ಮಾತನಾಡಿ, ನನಗೆ ಮನೆ ಕಟ್ಟಿಕೊಟ್ಟು ಸ್ವತಃ ಕುಟುಂಬದಂತೆ ಬಂದು ನನ್ನನ್ನು ಹೊಸ ಮನೆಗೆ ಕರೆದುಕೊಂಡು ಹೋಗಿ ಹಬ್ಬದಂತೆ ಕಾರ್ಯಕ್ರಮ ಮಾಡಿ, ಗ್ರಾಮೀಣ ಭಾಗದಲ್ಲಿ ಇರುವವರನ್ನು ಗುರುತಿಸಿ ಸಹಾಯ ಮಾಡುತ್ತಿರುವ ಪರಮಪೂಜ್ಯ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ.ಹೇಮಾವತಿ.ವಿ.ಹೆಗ್ಗಡೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿದರು.
ಈ ಸುದ್ದಿಯನ್ನೂ ಓದಿ | Dasara Holidays: ಜಾತಿ ಸಮೀಕ್ಷೆ ಹಿನ್ನೆಲೆ ಶಾಲೆಗಳ ದಸರಾ ರಜೆ 10 ದಿನ ವಿಸ್ತರಿಸಿದ ಸರ್ಕಾರ
ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖಂಡ ಎಂ.ಜಿ. ಶ್ರೀನಿವಾಸ ಮೂರ್ತಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ ಲಾಲಪೇಟೆ, ಸದಸ್ಯ ಪುರವರ ಲಿಂಗರೆಡ್ಡಿ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತುಮಕೂರು 2 ಯೋಜನಾಧಿಕಾರಿ ದಿನೇಶ್ ಕುಮಾರ್, ಕೊಡ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ಪುಟ್ಟಹನುಮಂತಯ್ಯ, ಗ್ರಾಪಂ ಸದಸ್ಯ ನರಸಿಂಹಮೂರ್ತಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಮ್ಮ, ವಲಯ ಮೇಲ್ವಿಚಾರಕ ಸುಬ್ರಹ್ಮಣ್ಯ ಹಾಗೂ ಕೃಷಿ ಮೇಲ್ವಿಚಾರಕ ಕುಮಾರ್ ಟಿ.ಆರ್, ಸೇವಾ ಪ್ರತಿನಿಧಿ ಜಯಮ್ಮ, ಶಾಂತಮ್ಮ ಹಾಗೂ ತನುಜ, ಸಂಘದ ಸದಸ್ಯರಾದ ನಳಿನ, ಭಾಗ್ಯಲಕ್ಷ್ಮಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.