ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kichcha Sudeep: ಚಿಕ್ಕನಾಯಕನಹಳ್ಳಿಗೆ ಶನಿವಾರ ‘ಕಿಚ್ಚ’ನ ಲಗ್ಗೆ; ಹೊಸ ಚಿತ್ರದ ಟೈಟಲ್ ಟೀಸರ್ ಲಾಂಚ್

ನಟ ಸುದೀಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಡಿವಿಪಿ ಶಾಲಾ ಮೈದಾನದಲ್ಲಿ ಚಿತ್ರತಂಡದಿಂದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿಗೆ ಶನಿವಾರ ನಟ ಕಿಚ್ಚ ಸುದೀಪ್‌ ಭೇಟಿ

ಕಿಚ್ಚ ಸುದೀಪ್‌ -

Prabhakara R
Prabhakara R Feb 27, 2026 8:17 PM

ಚಿಕ್ಕನಾಯಕನಹಳ್ಳಿ: ಸ್ಯಾಂಡಲ್‌ವುಡ್‌ನ ಬಾದ್‌ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep ) ಅವರು ಇದೇ ಶನಿವಾರ (ಫೆ.28) ಪಟ್ಟಣದ ಡಿವಿಪಿ ಶಾಲಾ ಮೈದಾನಕ್ಕೆ ಆಗಮಿಸಲಿದ್ದು, ಅಶ್ವಿನ್ ಅವರ ಹೊಚ್ಚ ಹೊಸದಾದ ಪ್ರೊಡಕ್ಷನ್ ನಂ.01 ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡಲಿದ್ದಾರೆ. ಶಾಸಕ ಸಿ.ಬಿ. ಸುರೇಶ್‌ ಬಾಬು ಅರ್ಪಿಸುತ್ತಿರುವ ಈ ಚಿತ್ರವನ್ನು ಕಿರಣ್‌ ವಿಶ್ವನಾಥ್‌ ನಿರ್ದೇಶನ ಮಾಡುತ್ತಿದ್ದು, ಶಾಸಕ ಸಾರಾ ಮಹೇಶ್‌, ಸುಷ್ಮಾ ಅಶ್ವಿನ್‌ ನಿರ್ಮಾಣ ಮಾಡುತ್ತಿದ್ದಾರೆ.

ಸುದೀಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಡಿವಿಪಿ ಶಾಲಾ ಮೈದಾನದಲ್ಲಿ ಚಿತ್ರತಂಡದಿಂದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಮೈದಾನದ ಸುತ್ತಮುತ್ತ ಸುದೀಪ್ ಅವರ ಬೃಹತ್ ಕಟೌಟ್‌ಗಳು ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುವ ಸಾಧ್ಯತೆ ಇರುವುದರಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಸುಗಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಕೈಗೊಂಡಿದೆ. ಶನಿವಾರ ಸಂಜೆ ನಡೆಯಲಿರುವ ಈ ಸಮಾರಂಭದಲ್ಲಿ ಚಿತ್ರತಂಡದ ಇತರೆ ಪ್ರಮುಖ ಕಲಾವಿದರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

`ದಿ ಕೇರಳ ಸ್ಟೋರಿ 2' ಸಿನಿಮಾವನ್ನು ವೀಕ್ಷಿಸಲಿರುವ ಹೈಕೋರ್ಟ್‌ ನ್ಯಾಯಾಧೀಶರು; ನಿರ್ಮಾಪಕರಿಗೆ ಜಡ್ಜ್‌ ಕೇಳಿದ ಪ್ರಶ್ನೆಗಳೇನು?

image

"ನಮ್ಮ ನೆಚ್ಚಿನ ನಾಯಕ ಸುದೀಪ್ ಅವರು ಡಿವಿಪಿ ಮೈದಾನಕ್ಕೆ ಆಗಮಿಸುತ್ತಿರುವುದು ಇಡೀ ತಾಲೂಕಿನ ಅಭಿಮಾನಿಗಳಿಗೆ ಹೆಮ್ಮೆಯ ವಿಷಯ. ಇದು ಕೇವಲ ಟ್ರೈಲರ್ ಬಿಡುಗಡೆ , ಸಮಾರಂಭವಲ್ಲ, ನಮಗೆಲ್ಲರಿಗೂ ಒಂದು ದೊಡ್ಡ ಹಬ್ಬವಿದ್ದಂತೆ. ಕಿಚ್ಚನ ಅಭಿಮಾನಿಯಾಗಿ ಅವರನ್ನು ನಮ್ಮ ಪಟ್ಟಣದಲ್ಲಿ ಸ್ವಾಗತಿಸಲು ನಾವು ಕಾತರದಿಂದ ಕಾಯುತ್ತಿದ್ದೇವೆ."

ಭರತ್ ಪೂಜಾರ್, ಕೆಇಬಿ ಕಂಟ್ರಾಕ್ಟರ್ ಹಾಗೂ ಸುದೀಪ್ ಅಭಿಮಾನಿ.