ಕೊರಟಗೆರೆ, ನ.12: ಎರಡು ಚಿರತೆಗಳ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡು ಎರಡು ವರ್ಷದ ಗಂಡು ಚಿರತೆ ಮೃತಪಟ್ಟಿರುವ ಘಟನೆ ಕೊರಟಗೆರೆ (Koratagere News) ತಾಲೂಕಿನ ಕಸಬಾ ಹೋಬಳಿಯ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಚೀಲಗಾನಹಳ್ಳಿ-ಯಾದಗೆರೆ ಮಾರ್ಗದ ಹಳ್ಳದ ಸಮೀಪ ನಡೆದಿದೆ. ಎರಡು ಚಿರತೆಗಳ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗಂಡು ಚಿರತೆ ಮೃತಪಟ್ಟಿದೆ.
ಬಾಯಿಯ ಭಾಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಚಿರತೆಯ ಚಲನವಲನವನ್ನು ಪರೀಕ್ಷಿಸಿದಾಗ ಚಿರತೆ ಮೃತಪಟ್ಟಿರುವುದು ದೃಢವಾಗಿದೆ.
ಮೃತ ಚಿರತೆಯನ್ನು ಮರಣೋತ್ತರ ಪರೀಕ್ಷೆ ಮಾಡಿ ಮೇಲಧಿಕಾರಿಗಳ ಆದೇಶದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 26 ದಿನಗಳಲ್ಲಿ 5 ಮರಿಗಳ ಸಹಿತ 10 ಹುಲಿಗಳ ಸೆರೆ
ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಮಾಡಿ ಮೂವರನ್ನು ಬಲಿ ಪಡೆದ ನಂತರ ಅರಣ್ಯ ಇಲಾಖೆಯ ಹುಲಿ ಸೆರೆ ಕಾರ್ಯಾಚರಣೆಯ ಪಡೆ ಕಳೆದ 26 ದಿನಗಳಲ್ಲಿ 5 ಹುಲಿ ಮರಿಗಳು ಸೇರಿ 10 ಹುಲಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈ ಸುದ್ದಿಯನ್ನೂ ಓದಿ | Tiger Attack: ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ; ನಿಲ್ಲುತ್ತಿಲ್ಲ ವ್ಯಾಘ್ರನ ಅಟ್ಟಹಾಸ
ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ಹಾಗೂ ನಂಜನಗೂಡು ಭಾಗದ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಯಡಿಯಾಳ, ನುಗು, ಮೊಲೆಯೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅ. 16 ರಿಂದ ನಡೆದ ಹುಲಿ ದಾಳಿ ಪ್ರಕರಣದಲ್ಲಿ ಮೂವರು ರೈತರು ಮೃತ ಪಟ್ಟಿದ್ದರು. ಒಬ್ಬ ರೈತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೀತಿಯ ಹುಲಿ ದಾಳಿಗಳಿಂದ ಗ್ರಾಮದ ಜನರಲ್ಲಿ ಆತಂಕ ಉಂಟಾಗಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಹುಲಿಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಿ 10 ಹುಲಿಗಳನ್ನು ಸೆರೆ ಹಿಡಿದಿದೆ.