ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiger Attack: ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ; ನಿಲ್ಲುತ್ತಿಲ್ಲ ವ್ಯಾಘ್ರನ ಅಟ್ಟಹಾಸ

ಜಿಲ್ಲೆಯಲ್ಲಿ ಹುಲಿ ದಾಳಿಗೆ ರೈತರು ಬೆಚ್ಚಿ ಬಿದ್ದಿದ್ದಾರೆ. ಹುಲಿ ದಾಳಿಗೆ (Tiger Attack) ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಈ ಮೂಲಕ ಕಳೆದ 15 ದಿನಗಳಲ್ಲಿ ಒಟ್ಟು ಮೂರು ರೈತರುವ ಮೃತಪಟ್ಟಿದ್ದಾರೆ. ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದೆ.

ಹುಲಿ ದಾಳಿಗೆ ಮತ್ತೊಬ್ಬ ರೈತ  ಬಲಿ

ಸಾಂಧರ್ಬಿಕ ಚಿತ್ರ -

Vishakha Bhat
Vishakha Bhat Nov 8, 2025 8:54 AM

ಮೈಸೂರು : ಜಿಲ್ಲೆಯಲ್ಲಿ ಹುಲಿ ದಾಳಿಗೆ ರೈತರು ಬೆಚ್ಚಿ ಬಿದ್ದಿದ್ದಾರೆ. ಹುಲಿ ದಾಳಿಗೆ (Tiger Attack) ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಈ ಮೂಲಕ ಕಳೆದ 15 ದಿನಗಳಲ್ಲಿ ಒಟ್ಟು ಮೂರು ರೈತರುವ ಮೃತಪಟ್ಟಿದ್ದಾರೆ. ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದ್ದು, ದಂಡನಾಯ್ಕ ಅಲಿಯಾಸ್​ ಸ್ವಾಮಿ(58ವ) ಮೃತಪಟ್ಟಿದ್ದಾರೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವನ್ಯಜೀವಿ ಅರಣ್ಯಕ್ಕೆ ಹೊಂದಿಕೊಂಡಂತಿರುವ ಹಳೇ ಹೆಗ್ಗುಡಿಲು ಗ್ರಾಮದ ಜಮೀನಿನಲ್ಲಿ ದಂಡನಾಯಕ ಉಳುಮೆ ಮಾಡುತ್ತಿದ್ದರು. ಬೆಳಗ್ಗೆ 8.30ರ ಸಮಯದಲ್ಲಿ ಚಿಯಾ ಬೆಳೆ ನಾಟಿ ಮಾಡಲು ಉಳುಮೆ ಮಾಡುವಾಗ ಕಾಡಿನಿಂದ ಹೊರಬಂದ ಹುಲಿ ಏಕಾಏಕಿ ಇವರ ಮೇಲೆ ದಾಳಿ ಮಾಡಿದೆ. ದಂಡನಾಯಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಮನೆ ಯಜಮಾನನ್ನು ಹುಲಿ ಬಲಿ ಪಡೆದಿರುವುದು ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಬಡಗಲಪುರ ಗ್ರಾಮದಲ್ಲಿ ಅ. 16ರಂದು ಮಾದೇಗೌಡ ಎಂಬುವರ ಮೇಲೆ ಹುಲಿ ದಾಳಿ ಮಾಡಿತ್ತು. ನಂತರ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣ್ಣೆಗೆರೆ ಗ್ರಾಮದ ರಾಜಶೇಖರ್‌ ಎಂಬುವವರು ಅ. 26ರಂದು ಹುಲಿ ದಾಳಿಗೆ ಬಲಿಯಾಗಿದ್ದರು. ಕಳೆದ ಅ. 31ರಂದು ಮೊಳೆಯೂರು ವಲಯ ಅರಣ್ಯ ವ್ಯಾಪ್ತಿಯ ಕೂಡಗಿ ಗ್ರಾಮದ ದೊಡ್ಡನಿಂಗಯ್ಯ ಅವರು ಹುಲಿ ದಾಳಿಗೆ ಬಲಿಯಾಗಿದ್ದರು.

ಈ ಸುದ್ದಿಯನ್ನೂ ಓದಿ: Murder case: 15 ಲಕ್ಷಕ್ಕಾಗಿ ಗಂಡನಿಗೆ ವಿಷವಿಕ್ಕಿ ಕೊಂದು ಹುಲಿ ದಾಳಿಯಿಂದ ಸತ್ತ ಎಂದು ನಟಿಸಿದ ಹೆಂಡತಿ!

ಹೆಡಿಯಾಲ ವಲಯದ ಅರಣ್ಯದಂಚಿನ ಜಯಲಕ್ಷ್ಮಿಪುರ ಗ್ರಾಮದಲ್ಲಿ ಹೆಣ್ಣು ಹುಲಿಯೊಂದನ್ನು ಸೆರೆ ಹಿಡಿದ ವಾರದ ಬಳಿಕ ಬಡಗಲಪುರ ಗ್ರಾಮದಲ್ಲಿ ಮತ್ತೊಂದು ಹೆಣ್ಣು ಹುಲಿ ಸೆರೆ ಹಿಡಿಯಲಾಯಿತು. ನಂತರ ನಂಜನಗೂಡು ತಾಲೂಕಿನ ಅಂಜನಾಪುರದಲ್ಲಿ, ಹೊಸವೀಡು ಗ್ರಾಮದಲ್ಲಿ ಪ್ರತ್ಯೇಕವಾಗಿ ಎರಡು ಹೆಣ್ಣು ಹುಲಿ ಸೆರೆಯಲಾಗಿದೆ. ಬೆಣ್ಣೆಗೆರೆ ಗ್ರಾಮ, ಕೂಡಗಿ ಗ್ರಾಮ ಸೇರಿದಂತೆ ಐದು ಕಡೆ ಹುಲಿ ಸೆರೆಗೆ ಕೂಂಬಿಂಗ್‌ ಕಾರ್ಯಾಚರಣೆ ನಡೆಯುತ್ತಿದೆ. ಇದೇ ವೇಳೆ ಕೆಲ ಸ್ಥಳೀಯರು ಈ ಘಟನೆಗಳಿಗೆ ಒಂದೇ ಹುಲಿ ದಾಳಿ ಕಾರಣವಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ, ಮೊದಲ ಎರಡು ಘಟನೆಗಳಲ್ಲಿ ಪ್ರತ್ಯೇಕ ಹುಲಿ ದಾಳಿ ಮಾಡಿರುವುದು ಖಾತ್ರಿಯಾಗಿದೆ.