ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಧರ್ಮಸ್ಥಳ ಸಂಸ್ಥೆಯಿಂದ ಒಂದು ಕೋಟಿ ಅರವತ್ತು ಲಕ್ಷ ಮಾಶಾಸನ ವಿತರಣೆ

ಚತುರ್ಥನಗಳಿಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರದಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದೆಂದು ಮಾತೃಶ್ರೀ ಹೇಮಾವತಿ ಹೆಗಡೆ ಯವರ ಮಾರ್ಗದರ್ಶನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡು ತ್ತಿರುವ ಒಟ್ಟು ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕ ವಾದ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ

ಗುಬ್ಬಿ: ರಾಜ್ಯಾದ್ಯಂತ 18000 ಸಾವಿರ ಜನ ಮಾಶಾಸನ ಫಲಾನುಭವಿಗಳಿದ್ದು. ಪ್ರತಿ ತಿಂಗಳು ಒಂದು ಕೋಟಿ ಅರವತ್ತು ಲಕ್ಷ ರೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಮಾಶಾ ಸನ ನೀಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.

ತಾಲೂಕಿನ ಸಿಎಸ್ ಪುರ ವಲಯದ ಹುಲ್ಲೇಕೆರೆ ಗ್ರಾಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ, ವಿದ್ಯಾರ್ಥಿನಿ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ  ಉಚಿತವಾಗಿ ಪುಸ್ತಕ, ಬ್ಯಾಗ್ ಪೆನ್, ಬಟ್ಟೆರೈನ್ ಕೋಟ್, ವಿತರಿಸಿ ಮಾತನಾಡಿದ ಅವರು, ಚತುರ್ಥನಗಳಿಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರದಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದೆಂದು ಮಾತೃಶ್ರೀ ಹೇಮಾವತಿ ಹೆಗಡೆ ಯವರ ಮಾರ್ಗದರ್ಶನದಲ್ಲಿ  ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡು ತ್ತಿರುವ ಒಟ್ಟು ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ  ಯೋಜನಾಧಿಕಾರಿ ಜಯಂತಿ, ಒಕ್ಕೂಟ ಅಧ್ಯಕ್ಷರಾದ ರಮೇಶ್, ವಾಣಿ ಗಿರೀಶ್,  ಜ್ಞಾನವಿಕಾಸ ಸಮನ್ವಯಾ ಅಧಿಕಾರಿ ಜಯಲಕ್ಷ್ಮಿ, ಮೇಲ್ವಿಚಾರಕ ಅರುಣ್ ಕುಮಾರ್, ಸೇವಾ ಪ್ರತಿನಿಧಿ ನಳಿನ, ಮಾಯಮ್ಮ, ಶ್ರೀ ಲಕ್ಷ್ಮಿ, ಮುಖಂಡರಾದ ಗಂಗೇಶ್,  ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

ಇದನ್ನೂ ಓದಿ: Gubbi News: ಪಂಚವಟಿ, ನವಗ್ರಹ ಮತ್ತು ಶಿವಲಿಂಗ ದೇವಾಲಯಕ್ಕೆ ಗುದ್ದಲಿಪೂಜೆ