ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಗ್ರಾಮೀಣ ಜನರ ಆರೋಗ್ಯಕ್ಕೆ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಲೋಕಾರ್ಪಣೆ

ಲೋಕಾರ್ಪಣೆಗೊಳಿಸಿದ ತಹಶೀಲ್ದಾರ್ ಆರತಿ.ಬಿ ಮಾತನಾಡಿ, ಗ್ರಾಮೀಣ ಜನರಿಗೆ ದಂತ ಆರೋಗ್ಯ ಬಗ್ಗೆ ಅರಿವಿಲ್ಲ. ಮುಖ ಸೌಂದರ್ಯಕ್ಕೆ ದಂತ ಆರೋಗ್ಯ ಮುಖ್ಯ ಎಂಬ ಅರಿವು ಮೂಡಿಸಲು ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಶಿಬಿರ ನಡೆಸಿ ಜೊತೆಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಅರಿವು ಮೂಡಿಸುವ ಕೆಲಸ ಶ್ಲಾಘನೀಯ ಎಂದರು

ಗುಬ್ಬಿ: ಆರೋಗ್ಯವಂತ ದೈಹಿಕ ಸಾಮರ್ಥ್ಯಕ್ಕೆ ಮೂಲ ಬಾಯಿ ಮತ್ತು ದಂತ ಆರೋಗ್ಯ ಮುಖ್ಯ ಎಂಬ ಜಾಗೃತಿಯ ಶಿಬಿರಗಳು ತಾಲ್ಲೂಕಿನಲ್ಲಿ ನಿರಂತರ ನಡೆಸುವ ಜೊತೆಗೆ ಕಡಿಮೆ ವೆಚ್ಚದಲ್ಲಿ ದಂತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಟೆಕ್ನಾಲಜಿಯ ಸುಸಜ್ಜಿತ ನಿಶ್ವಿಕ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಲೋಕಾರ್ಪಣೆ ಗುಬ್ಬಿ ಪಟ್ಟಣದಲ್ಲಿ ಮಾಡಲಾಯಿತು.

ಪಟ್ಟಣದ ಎಂ.ಜಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ ನಿಶ್ವಿಕ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಎಕ್ಸರೇ, ರೂಟ್ ಕೆನಾಲ್, ಕೃತಕ ಹಲ್ಲು ಜೋಡಣೆ, ಮಕ್ಕಳ ದಂತ ಚಿಕಿತ್ಸೆ, ವಕ್ರದಂತ ಚಿಕಿತ್ಸೆ, ಸೌಂದರ್ಯ ವರ್ಧಕ ದಂತ ಚಿಕಿತ್ಸೆ, ಸ್ಕೇಲಿಂಗ್, ವಸಡಿನ ಚಿಕಿತ್ಸೆ, ತಂಬಾಕು ವ್ಯಸನಿಗಳಿಗೆ ತಂಬಾಕು ಸೇವನೆ ನಿಲ್ಲಿಸುವ ಚಿಕಿತ್ಸೆ ಹೀಗೆ ಅನೇಕ ಚಿಕಿತ್ಸಾ ಸೇವೆ ರಿಯಾಯತಿ ದರದಲ್ಲಿ ಹಳ್ಳಿಗಾಡಿ ನ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳ ಅಳವಡಿಸಲಾಗಿದೆ.

ಇದನ್ನೂ ಓದಿ: Gubbi News: ಸರ್ವ ರೋಗಕ್ಕೂ ಸಿರಿಧಾನ್ಯವೇ ಮದ್ದು : ಆಹಾರ ತಜ್ಞ ಡಾ.ಖಾದರ್

ಲೋಕಾರ್ಪಣೆಗೊಳಿಸಿದ ತಹಶೀಲ್ದಾರ್ ಆರತಿ.ಬಿ ಮಾತನಾಡಿ, ಗ್ರಾಮೀಣ ಜನರಿಗೆ ದಂತ ಆರೋಗ್ಯ ಬಗ್ಗೆ ಅರಿವಿಲ್ಲ. ಮುಖ ಸೌಂದರ್ಯಕ್ಕೆ ದಂತ ಆರೋಗ್ಯ ಮುಖ್ಯ ಎಂಬ ಅರಿವು ಮೂಡಿಸಲು ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ಉಚಿತ ದಂತ ತಪಾಸಣೆ ಶಿಬಿರ ನಡೆಸಿ ಜೊತೆಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಅರಿವು ಮೂಡಿಸುವ ಕೆಲಸ ಶ್ಲಾಘನೀಯ ಎಂದರು.

ದಂತತಜ್ಞೆ ಡಾ.ಎಸ್.ಎನ್.ಪ್ರಕೃತಿ ಮಾತನಾಡಿ, ನಾಲ್ಕು ವರ್ಷ ಬೆಂಗಳೂರಿನ ದೊಡ್ಡ ಆಸ್ಪತ್ರೆ ಯಲ್ಲಿ ಕೆಲಸ ಮಾಡಿ ಅಲ್ಲಿನ ವ್ಯವಸ್ಥಿತ ಯಂತ್ರಗಳ ಬಳಕೆ ನಮ್ಮ ಹಳ್ಳಿ ಜನರ ಆರೋಗ್ಯಕ್ಕೂ ಬಳಸುವ ಆಲೋಚನೆಯಲ್ಲಿ ಗುಬ್ಬಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಆರಂಭಿಸಿದ್ದೇವೆ. ಒಪಿಜಿ, ಇಂಟರ್ ನಲ್ ಸ್ಕ್ಯಾನರ್, ಲೇಸರ್, ಆರ್ ವಿಜಿ, ಇಂಟರ್ ನಲ್ ಕ್ಯಾಮರ ಹೀಗೆ ನೋವಿಲ್ಲದ ಚಿಕಿತ್ಸೆ ನೀಡುವ ಜೊತೆಗೆ ದಂತ ಆರೋಗ್ಯ ಬಗ್ಗೆ ಹಳ್ಳಿಗಳಲ್ಲಿ ಹಾಗೂ ಶಾಲೆಗಳಲ್ಲಿ ಕ್ಯಾಂಪ್ ನಡೆಸಿ ಜಾಗೃತಿ ಮೂಡಿಸಲು ನಮ್ಮದೇ ದಂತ ತಜ್ಞರ ತಂಡ ಬರಲಿದೆ. ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಿಶಾ ಸಮಿತಿಯ ಸದಸ್ಯರಾದ ಡಾ.ನವ್ಯಾಬಾಬು, ಅ.ನ.ಲಿಂಗಪ್ಪ, ತಾಪಂ ಮಾಜಿ ಸದಸ್ಯರಾದ ದಯಾನಂದ್, ಶಿವಣ್ಣ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಉಪ ನೋಂದಣಾ ಧಿಕಾರಿ ಎಂ.ವಿ.ಸತೀಶ್, ಪತ್ರ ಬರಹಗಾರ ಜಿ.ಎಸ್.ವಿಶ್ವನಾಥ್, ಮುಖಂಡರಾದ ಸಿದ್ಧಲಿಂಗ ಮೂರ್ತಿ (ಅಣ್ಣಿ), ಕೃಷ್ಣಜಟ್ಟಿ, ಗಂಗರಾಜು, ಈಶ್ವರಯ್ಯ, ನಂಜೇಗೌಡ, ನಿವೃತ್ತ ಉಪನ್ಯಾಸಕ ನಿಜಲಿಂಗಪ್ಪ, ಲೋಕೇಶ್, ಮಹೇಶ್ ಇನ್ನಿತರರು ಇದ್ದರು.