ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೋ ತುಮಕೂರಿಗೂ ವಿಸ್ತರಣೆ: ಬಿಎಂಆರ್‌ಸಿಎಲ್‌ನಿಂದ ಡಿಪಿಆರ್‌ ಆಹ್ವಾನ

Namma Metro to Tumakuru: ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಿಸುವ ಪ್ರಸ್ತಾವನೆಗೆ ಮತ್ತೆ ಚಾಲನೆ ದೊರೆತಿದೆ. ವಿವರವಾದ ಯೋಜನಾ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ ಟೆಂಡರ್ ಆಹ್ವಾನ ನೀಡಿದೆ. ನಮ್ಮ ಮೆಟ್ರೋ ಯೋಜನೆಯಿಂದ ಕೈಗಾರಿಕಾ ನಗರಿ ತುಮಕೂರಿನ ಆರ್ಥಿಕತೆಗೆ ಹೊಸ ವೇಗ ಸಿಗಬಹುದು ಎಂದು ಅಂದಾಜಿಸಲಾಗಿದೆ. 2024–25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಘೋಷಿಸಿದ್ದರು.

ನಮ್ಮ ಮೆಟ್ರೋ ತುಮಕೂರಿಗೆ ವಿಸ್ತಣೆಗೆ ಡಿಪಿಆರ್‌ ಆಹ್ವಾನ

ಬೆಂಗಳೂರು: ಬೆಂಗಳೂರಿನಿಂದ (Bengaluru) ತುಮಕೂರಿಗೆ (Tumakuru) ನಮ್ಮ ಮೆಟ್ರೋ (Namma Metro) ರೈಲು ಯೋಜನೆಗೆ ಚಟುವಟಿಕೆ ಈಗ ಅಧಿಕೃತವಾಗಿ ಶುರುವಾಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲು ಟೆಂಡರ್‌ ಆಹ್ವಾನಿಸಿದೆ. 2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಈ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆ ಕಾರ್ಯಗತಗೊಂಡರೆ ಇದು ರಾಜ್ಯದ ಮೊದಲ ಇಂಟರ್‌-ಸಿಟಿ ಮೆಟ್ರೋ ಯೋಜನೆಯಾಗಲಿದೆ.

ತುಮಕೂರಿನಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲಕರವಾಗುತ್ತದೆ. ಇನ್ನು ಟ್ರಾಫಿಕ್‌ನಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದ ಜನರಿಗೆ ಬಿಗ್‌ ರಿಲೀಫ್‌ ಸಿಗಲಿದೆ. ನಮ್ಮ ಮೆಟ್ರೋ ಯೋಜನೆಯಿಂದ ಕೈಗಾರಿಕಾ ನಗರಿ ತುಮಕೂರಿನ ಆರ್ಥಿಕತೆಗೆ ಹೊಸ ವೇಗ ಸಿಗಲಿದೆ. ಬೆಂಗಳೂರಿನಿಂದ ತುಮಕೂರಿನ ನಮ್ಮ ಮೆಟ್ರೋ ಯೋಜನೆ ಹೇಗಿರಲಿದೆ? ಎಲ್ಲೆಲ್ಲಿ ನಿಲ್ದಾಣಗಳು ಬರಲಿವೆ? ಎಂಬುದನ್ನು ನೋಡೋಣ.

ಈಗಾಗಲೇ ಮಾದಾವರದವರೆಗೂ ನಮ್ಮ ಮೆಟ್ರೋ ಓಡಾಡುತ್ತಿದೆ. ಅಲ್ಲಿಂದ ತುಮಕೂರುವರೆಗಿನ 59.6 ಕಿಲೋಮೀಟರ್ ಹಸಿರು ಮಾರ್ಗ ವಿಸ್ತರಣೆಗೆ ವಿವರವಾದ DPR ತಯಾರಿಗೆ ಟೆಂಡರ್ ಆಹ್ವಾನಿಸಿದೆ. ಅಂದಾಜು ವೆಚ್ಚ 20,649 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಡಿಪಿಆರ್ ಸಿದ್ಧವಾದ ನಂತರ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರದ ಅನುಮೋದನೆ ಪಡೆಯಬೇಕಿದೆ. ಈ ಮಾರ್ಗದಲ್ಲಿ ಒಟ್ಟು 26 ಎಲೆವೆಟೆಡ್‌ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ.

Bengaluru Metro Fare Hike: ಅಸಮಂಜಸವಾಗಿ ಮೆಟ್ರೋ ಟಿಕೆಟ್‌ ದರ ಏರಿಕೆ; ಬಿಎಂಆರ್‌ಎಸಿಎಲ್‌ಗೆ ಸಂಸದ ತೇಜಸ್ವಿ ಸೂರ್ಯ ಪತ್ರ

ಮಾದಾವರ (ಬಿಐಇಸಿ)–ತುಮಕೂರು ಮಾರ್ಗವು ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದ್ದು, ಯೋಜನೆಯ ಮೊದಲ ಹಂತಕ್ಕೆ 20,649 ಕೋಟಿ ರೂ.ವೆಚ್ಚವಾಗುವ ಅಂದಾಜು ಇದೆ. ಈ ಯೋಜನೆ 2024–25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಪ್ರಮುಖ ಸಾರಿಗೆ ಯೋಜನೆಗಳಲ್ಲಿ ಒಂದಾಗಿದೆ. ಮೆಟ್ರೋ ಲೈನ್ ವಿಸ್ತರಣೆಯಾದಲ್ಲಿ ಒಂದು ದಿಕ್ಕಿನಲ್ಲಿ ಪ್ರತೀ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಮಾದಾವಾರದ ಬಿಐಇಸಿಯಿಂದ ತುಮಕೂರುವರೆಗೆ ಪ್ರಮುಖವಾಗಿ 26 ಮೆಟ್ರೋ ನಿಲ್ದಾಣಗಳನ್ನು ಬರಲಿದ್ದು, ಎಲ್ಲವೂ ಎಲೆವೆಟೆಡ್‌ ಮಾದರಿಯ ನಿಲ್ದಾಣಗಳಾಗಿವೆ.

ನಮ್ಮ ಮೆಟ್ರೋ ಸಂಭಾವ್ಯ ನಿಲ್ದಾಣಗಳು:

ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ, ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಮತ್ತು ಶಿರಾ ಗೇಟ್‌.

Bomb threat: ನಮ್ಮ ಮೆಟ್ರೋಗೆ ಅಪರಿಚಿತನಿಂದ ಬಾಂಬ್‌ ಬೆದರಿಕೆ, ʼನಾನು ಉಗ್ರಗಾಮಿ ಇದ್ದಂತೆ...ʼ ಎಂದು ಇ-ಮೇಲ್

ಹರೀಶ್‌ ಕೇರ

View all posts by this author