Bomb threat: ನಮ್ಮ ಮೆಟ್ರೋಗೆ ಅಪರಿಚಿತನಿಂದ ಬಾಂಬ್ ಬೆದರಿಕೆ, ʼನಾನು ಉಗ್ರಗಾಮಿ ಇದ್ದಂತೆ...ʼ ಎಂದು ಇ-ಮೇಲ್
Namma Metro Bomb threat: ʼನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧʼ ಎಂದು ಇಮೇಲ್ ನಲ್ಲಿ ಬರೆಯಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವಿಲ್ಸನ್ ಗಾರ್ಡನ್ ಪೊಲೀಸರು, ಇಮೇಲ್ ಮಾಡಿದ ಅಪರಿಚಿತನಿಗಾಗಿ ಶೋಧ ನಡೆಸುತ್ತಿದ್ದಾರೆ.
-
ಬೆಂಗಳೂರು : ಬೆಂಗಳೂರಿನ (Bengaluru) ನಮ್ಮ ಮೆಟ್ರೋ (Namma Metro) ನಿಲ್ದಾಣ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ (bomb threat) ಇ-ಮೇಲ್ ಬಂದಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಬಿಎಂಆರ್‌ಸಿಎಲ್‌ಗೆ (BMRCL) ಅಪರಿಚಿತ ವ್ಯಕ್ತಿಯೊಬ್ಬ ಇ-ಮೇಲ್ ಸಂದೇಶ ರವಾನಿಸಿದ್ದು, ನವೆಂಬರ್ 14ರ ರಾತ್ರಿ 11.30ಕ್ಕೆ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ. ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಈ ಕುರಿತು ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಗೆ ಬಿಎಂಆರ್‌ಸಿಎಲ್ ದೂರು ನೀಡಿದೆ. ಇ-ಮೇಲ್ ಪರಿಶೀಲನೆ ನಡೆಸಿ ಬಿಎಂಆರ್‌ಸಿಎಲ್ ಅಧಿಕಾರಿ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಬ್ಯಾಗ್‌ಗಳ ಹಾಗೂ ಪ್ರಯಾಣಿಕರ ತಪಾಸಣೆ ಯಾವಾಗಲೂ ಇರುತ್ತಿದ್ದು, ಬಾಂಬ್ ಬೆದರಿಕೆಯ ಬಳಿಕ ತಪಾಸಣೆ ಬಿಗಿಗೊಳಿಸಲಾಗಿದೆ.
ʼನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧʼ ಎಂದು ಇಮೇಲ್ ನಲ್ಲಿ ಬರೆಯಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವಿಲ್ಸನ್ ಗಾರ್ಡನ್ ಪೊಲೀಸರು, ಇಮೇಲ್ ಮಾಡಿದ ಅಪರಿಚಿತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ ಕರೆಗಳ ಪ್ರಕರಣಗಳು ಹೆಚ್ಚುತ್ತಿದೆ. ಶಾಲೆಗಳು, ನಿಲ್ದಾಣಗಳು ಹಾಗೂ ರಾಜಕಾರಣಿಗಳ ಮನೆಗಳನ್ನ ಸ್ಫೋಟಿಸುವುದಾಗಿ ಹುಸಿ ಬಾಂಬ್ ಬೆದರಿಕೆ ಮೇಲ್ಗಳು ಬರುತ್ತಲೇ ಇದೆ. ಕಳೆದ ಒಂದು ತಿಂಗಳಿನಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಬೆದರಿಕೆ ಕರೆ ಬಂದಿತ್ತು. ಹೈಕೋರ್ಟ್ ಕಟ್ಟಡವನ್ನೂ ಸ್ಫೋಟಿಸುವುದಾಗಿ ಬೆದರಿಕೆ ಕರೆ ನೀಡಲಾಗಿತ್ತು. ಖಾಸಗಿ ಶಾಲೆಗಳು ಹಾಗೂ ಕಾಲೇಜುಗಳಿಗೆ ಸತತವಾಗಿ ಬೆದರಿಕೆಗಳು ಬರುತ್ತಲೇ ಇವೆ.
ಇದನ್ನೂ ಓದಿ: Basava Samskruti Abhiyana: ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ