ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಲಿಂಕ್ ಕೆನಾಲ್ ಬೇಡ, ಮುಖ್ಯನಾಲೆ ಅಗಲೀಕರಣ ಮಾಡಿ : ಶಾಸಕ ಎಸ್.ಆರ್.ಶ್ರೀನಿವಾಸ್

ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಶಿಕ್ಷಣ ಇಲಾಖೆಯಲ್ಲಿ 66 ಸಾವಿರ ಹುದ್ದೆಗಳು ಭರ್ತಿಯಾಗಬೇಕಿದೆ. ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಶೇ.97 ರಷ್ಟಿದೆ. ಮುಂದಿನ ವರ್ಷದಲ್ಲಿ ನೂರಕ್ಕೆ ನೂರು ಫಲಿತಾಂಶ ತರುವಂತೆ ಸೂಚನೆ ನೀಡಲಾಗಿದೆ. ಹೊಸದಾಗಿ ಕೆಪಿಎಸ್ ಶಾಲೆಗಳು ತಾಲ್ಲೂಕಿನಲ್ಲಿ ಏಳೆಂಟು ಕಡೆ ಆರಂಭ ವಾಗಲಿದೆ. ಅರ್ಹ ಶಿಕ್ಷಕರ ಶಾಲೆಗಳ ಬಗ್ಗೆ ಪೋಷಕರಲ್ಲಿ ಆಸಕ್ತಿ ಕಾಣುತ್ತಿಲ್ಲ

ಗುಬ್ಬಿ: ಹೇಮಾವತಿ ಲಿಂಕ್ ಕೆನಾಲ್ ಮೂಲಕ ಹೇಮಾವತಿ ಹರಿಸುವ ಎಕ್ಸ್ ಪ್ರೆಸ್ ಪೈಪ್ ಲೈನ್ ಕಾಮಗಾರಿ ವಿರೋಧ ನನ್ನದೂ ಇದೆ. ಇರುವ ಮುಖ್ಯನಾಲೆ ಅಗಲೀಕರಣ ಮಾಡಿ ಓಪನ್ ಚಾನಲ್ ಮೂಲಕ ನೀರು ಹರಿಸಿಕೊಳ್ಳಲಿ ಎಂಬ ಆಗ್ರಹ ನಾನು ಮಾಡುತ್ತಿದ್ದೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S.R. Srinivas) ತಿಳಿಸಿದರು.

ತಾಲ್ಲೂಕಿನ ಚೇಳೂರು ಹೋಬಳಿ ರಂಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 1.50 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲೆಯ ಪಾಲಿನ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನಾಲೆ ಅಗಲೀಕರಣ ಮಾಡಿ ಕುಣಿಗಲ್ ಕೆರೆಗೆ ಹರಿಕೊಳ್ಳಲಿ ಎಂದರು.

ಇದನ್ನೂ ಓದಿ: Gubbi News: ಕಳಪೆ ಪರಿವರ್ತಕ ವೈಂಡಿಂಗ್: ಬೆಸ್ಕಾಂ ವಿರುದ್ಧ ರೈತಸಂಘ ಆಕ್ರೋಶ

ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಶಿಕ್ಷಣ ಇಲಾಖೆಯಲ್ಲಿ 66 ಸಾವಿರ ಹುದ್ದೆಗಳು ಭರ್ತಿಯಾಗಬೇಕಿದೆ. ಈ ಬಾರಿಯ ಹತ್ತನೇ ತರಗತಿಯ ಫಲಿತಾಂಶ ಶೇ.97 ರಷ್ಟಿದೆ. ಮುಂದಿನ ವರ್ಷದಲ್ಲಿ ನೂರಕ್ಕೆ ನೂರು ಫಲಿತಾಂಶ ತರುವಂತೆ ಸೂಚನೆ ನೀಡಲಾಗಿದೆ. ಹೊಸದಾಗಿ ಕೆಪಿಎಸ್ ಶಾಲೆಗಳು ತಾಲ್ಲೂಕಿನಲ್ಲಿ ಏಳೆಂಟು ಕಡೆ ಆರಂಭ ವಾಗಲಿದೆ. ಅರ್ಹ ಶಿಕ್ಷಕರ ಶಾಲೆಗಳ ಬಗ್ಗೆ ಪೋಷಕರಲ್ಲಿ ಆಸಕ್ತಿ ಕಾಣುತ್ತಿಲ್ಲ. ದೂರದ ಬೆಟ್ಟ ನುಣ್ಣಗೆ ಎಂಬಂತೆ ಖಾಸಗಿಯತ್ತ ಮುಖ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸ ಆಸ್ಪತ್ರೆಗಳ ನಿರ್ಮಾಣ ಗ್ರಾಮೀಣ ಭಾಗದಲ್ಲಿ ನಡೆದಿದೆ. 68 ಲಕ್ಷ ರೂಗಳಲ್ಲಿ ಹೂವಿನಕಟ್ಟೆ ಹಾಗೂ ಅಂಕಸಂದ್ರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕೆಲಸಕ್ಕೆ ಪೂಜೆ ನಡೆಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸಿದ್ಧತೆ ಮಾಡಲಾಗಿದೆ. ಹೊರ ಗುತ್ತಿಗೆಯಲ್ಲಿ ಡಾಕ್ಟರ್ ಸೇರಿದಂತೆ ಎಲ್ಲಾ ತಂತ್ರಜ್ಞರನ್ನು ನೇಮಿಸಲಾಗಿದೆ. ಅವಶ್ಯ ಡಾಕ್ಟರ್ ಗಳ ನೇಮಕ ಕೂಡಲೇ ಆಗಲಿದೆ ಎಂದ ಅವರು ಉಪ ಚುನಾವಣೆ ಫಲಿತಾಂಶದಲ್ಲಿ ದಾವಣಗೆರೆ ನಾನು ಕೂಡ ಪ್ರಚಾರ ನಡೆಸಿದ್ದೆ. ಅಲ್ಲಿನ ವಾತಾವರಣ ಕಾಂಗ್ರೆಸ್ ಗೆಲುವು ತೋರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸಾತೇನಹಳ್ಳಿ ರಾಜಣ್ಣ, ರೇಣುಕಮ್ಮ ಕಾಂತರಾಜು, ಗಂಗಣ್ಣ , ಮುಖಂಡರಾದ ಜಗದೀಶ, ಜಯಣ್ಣ, ಮಲ್ಲೇಶ್, ಲಿಂಗಣ್ಣ, ಕುಮಾರ್, ರಮೇಶ, ಪಿಡಿಓ ಯುವರಾಜು ಇತರರು ಇದ್ದರು.