ಗುಬ್ಬಿ : ಕಾಂಗ್ರೆಸ್ ಸರ್ಕಾರ ಪತ್ರಕರ್ತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ನಮ್ಮ ಸರ್ಕಾರ ಪತ್ರಕರ್ತರ ಪರವಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಉದ್ಯಾನವನ ದತ್ತು ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು
ಈಗಾಗಲೇ ಅರ್ಹ ಪತ್ರಕರ್ತರಿಗೆ ಬಸ್ನಲ್ಲಿ ಸಂಚರಿಸಲು ಬಸ್ ಪಾಸ್ ಅನ್ನು ವಿತರಣೆ ಮಾಡುತ್ತಿದ್ದು, ಜೀವ ವಿಮೆ, ಹೆಲ್ತ್ ಕಾರ್ಡ್, ಯೋಜನೆಗಳನ್ನು ಹಾಕಿಕೊಂಡಿದೆ. ತಾಲೂಕಿನ ಪತ್ರಕರ್ತರಿಗಾಗಿ ಪತ್ರಿಕ ಭವನ ನಿರ್ಮಿಸಲು ಸಿಎ ನಿವೇಶನ ನೀಡಲು ಬದ್ಧನಾಗಿದ್ದೇನೆ. ಮುಂದಿನ ವರ್ಷಗಳಲ್ಲಿ ಪತ್ರಕರ್ತರಿಗೆ ಪತ್ರಿಕ ದಿನಾಚರಣೆ ಮಾಡಲು ತಾಲೂಕು ಆಡಳಿತದಿಂದ ಅನುದಾನ ನೀಡಲಾಗು ವುದು ಎಂದರು.
ಇದನ್ನೂ ಓದಿ: Gubbi News: ಧರ್ಮಸ್ಥಳ ಸಂಸ್ಥೆಯಿಂದ ಒಂದು ಕೋಟಿ ಅರವತ್ತು ಲಕ್ಷ ಮಾಶಾಸನ ವಿತರಣೆ
ಜ್ಞಾನ ಜಗತ್ತನ್ನು ಆಳುತ್ತದೆ ನೀವು ಓದಿದ ವಿದ್ಯೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ, ಈ ನಿಟ್ಟಿ ನಲ್ಲಿ ಯುವ ಸಮುದಾಯ ಮುನ್ನಡೆಯಬೇಕು. ಪತ್ರಿಕೆಗಳು ಹಾಗೂ ಮಾಧ್ಯಮಗಳು ನಿಷ್ಪಕ್ಷಪಾತ ವಾಗಿ ಪಾರದರ್ಶಕವಾಗಿ ಕೆಲಸ ಮಾಡಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಯುವ ಸಮುದಾಯ ಪತ್ರಿಕೆಗಳಲ್ಲಿ ಬರುವ ಸಂಪ್ರದಾಯಿಕ ಗಳನ್ನು ಓದುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್ ಮಾತನಾಡಿ ಪತ್ರಿಕಾ ದಿನವನ್ನು ಮೇ 3 ರಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ, ಕರ್ನಾಟಕದಲ್ಲಿ ಜು.1ರಂದು ಆಚರಣೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಮಹತ್ವ ದೊಡ್ಡದ್ದು, ಸಮಾಜದ ಅಂಕು ಡೊಂಕುಗಳನ್ನು ನಿರ್ಭೀತಿಯಿಂದ ಬರೆಯುತ್ತವೆ. ಪ್ರತಿಯೊಬ್ಬರು ಮನೆಗೆ ದಿನಪತ್ರಿಕೆ ಗಳನ್ನು ಹಾಕಿಸಿಕೊಳ್ಳಬೇಕು, ಪತ್ರಿಕೆಗಳನ್ನು ಓದುವುದರಿಂದ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಿಪಿಐ ರಾಘವೇಂದ್ರ ಮಾತನಾಡಿ ಪೊಲೀಸರು ಹಾಗೂ ಪತ್ರಕರ್ತರು ಸಮಾಜದ ಎರಡು ಕಣ್ಣು ಗಳಿದ್ದಂತೆ. ಇಬ್ಬರು ಒತ್ತಡದ ನಡುವೆ ಕೆಲಸ ಮಾಡುತ್ತಾರೆ ಪತ್ರಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪಿಎಸ್ಐ ರಾಜೇಶ್ವರಿ ಮಾತನಾಡಿ ಇಂದಿನ ಯುವ ಸಮುದಾಯಕ್ಕೆ ಅದರಲ್ಲೂ ಯುವತಿಯರಿಗೆ ಕಾನೂನಿನ ಅರಿವಿರಬೇಕು. ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ, ಇವುಗಳ ಬಗ್ಗೆ ಹೆಚ್ಚಿನ ಅರಿವು ಇರಬೇಕು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ರಾಂಶುಪಾಲ ಮಂಜುನಾಥ್ ಮಾತನಾಡಿ ಸ್ವಾತಂತ್ರ್ಯ ಹೋರಾಟವನ್ನು ದೇಶಕ್ಕೆ ತಿಳಿಸಲು ದಿನ ಪತ್ರಿಕೆಗಳು ಹೊರ ತೆರೆಯಲಾಯಿತು. ಇದು ಸತ್ಕಾಂತಿಕಾರಿ ಸ್ವತಂತ್ರ ಹೋರಾಟಕ್ಕೆ ಒಂದು ದೊಡ್ಡ ಹೆಜ್ಜೆಯಾಗಿತು. ಪರ್ತಕರ್ತರು ಎಐ, ಚಾಟ್ ಜಿಪಿಟಿ, ಜಿಮಿನಿಗಳನ್ನು ಸಮರ್ಥವಾಗಿ ಬಳಸಿಕೊಳ್ಳ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ, ಕೆಯುಡಬ್ಲ್ಯೂ ಜೆ ತಾಲೂಕ್ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ, ಜಿಲ್ಲಾ ನಿರ್ದೇಶಕ ಮೇಳೆಕಲ್ಲಹಳ್ಳಿ ಯೋಗೀಶ್, ಕೆಂಪರಾಜು, ಸಂಜಯ್, ಯಲ್ಲಪ್ಪ, ನರಸಿಂಹಮೂರ್ತಿ, ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.