ಪಾವಗಡ, ನ.1: ಆಂಧ್ರಪ್ರದೇಶದಿಂದ ಸುತ್ತುವರಿದ ಪಾವಗಡ ತಾಲೂಕಿನಲ್ಲಿ ತೆಲುಗು ಮಾತನಾಡುವ ಜನರಿದ್ದರೂ ಸಹ ಕನ್ನಡ ಭಾಷೆಯ ಬಗ್ಗೆ ಅಭಿಮಾನ ತೋರಿಸುತ್ತಿದ್ದಾರೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ತಿಳಿಸಿದರು. ತಾಲೂಕು ಆಡಳಿತ, ವಿವಿಧ ಇಲಾಖೆಗಳ ಸಹಯೋಗದಲ್ಲಿ (Pavagada News) ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜಿಗೆ ಐದು ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು ಡಿಪ್ಲೊಮಾ ಕಾಲೇಜನ್ನು ಸಹ ಪ್ರಾರಂಭಿಸಲಾಗುತ್ತದೆ, ತಿರುಮಣಿಯಲ್ಲಿ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್ ಇಂದ ಪಾವಗಡ ತಾಲೂಕು ಪ್ರಪಂಚದ ಭೂಪಟದಲ್ಲಿ ರಾರಾಜಿಸುತ್ತಿದೆ. ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಜಂಗಮರಹಳ್ಳಿ ಮುದ್ದ ವೀರಪ್ಪ ಮಾತನಾಡಿ, ಕರ್ನಾಟಕವನ್ನು ಚಾಲುಕ್ಯರು, ಹೊಯ್ಸಳರು, ರಾಜ ಮಹಾರಾಜರು ಆಳಿ ಹೋದಂತ ನಾಡು ನಮ್ಮದಾಗಿದ್ದು, ಪಾವಗಡ ತಾಲೂಕಿನ ನಿಡಗಲ್ ಅನ್ನು ತಿರುಚನಾಪಳ್ಳಿಯ ಚೋಳರು ಆಳ್ವಿಕೆ ನಡೆಸಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವೆಗಾಗಿ ರಾಮ್ ಪ್ರಸಾದ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಂಗಭೂಮಿ, ಇತರೆ ಕ್ಷೇತ್ರಗಳಲ್ಲಿನ 28 ಸಾಧಕರಿಗೆ ಮತ್ತು ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಪತ್ರಕರ್ತ ಸತ್ಯ ಲೋಕೇಶ್ ಪ್ರಧಾನ ಕಾರ್ಯದರ್ಶಿಯಾಗಿರುವ ಶಮಿ ವೃಕ್ಷ ಅಭಿವೃದ್ಧಿ ಟ್ರಸ್ಟಿಗೆ ಶಾಸಕರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವೈ ರವಿ, ತಾ.ಪಂ ಇಓ ಬಿ.ಕೆ. ಉತ್ತಮ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹ ಮೂರ್ತಿ, ಬಿಇಓ ರೇಣುಕಮ್ಮ ಮಾತನಾಡಿದರು.
ಈ ಸುದ್ದಿಯನ್ನೂ ಓದಿ | Namma Metro: ಕನ್ನಡ ರಾಜ್ಯೋತ್ಸವಕ್ಕೆ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಹಳದಿ ಮಾರ್ಗದಲ್ಲಿ ಇನ್ಮುಂದೆ ಪ್ರತಿ 15 ನಿಮಿಷಕ್ಕೊಂದು ರೈಲು
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಸುದೇಶ್ ಬಾಬು, ಉಪಾಧ್ಯಕ್ಷೆ ಮಾಲೀನ್ ತಾಜ್, ಪುರಸಭಾ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ, ವೇಲುರಾಜ್, ಸದಸ್ಯರಾದ ಕಲ್ಪವೃಕ್ಷ ರವಿ, ಆರ್.ಎ. ಹನುಮಂತರಾಯಪ್ಪ, ಮಹಮ್ಮದ್ ಇಮ್ರಾನ್, ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ, ಪೂಜಾರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ. ರವಿ ಕುಮಾರ್, ನಗರ ಸಿ.ಪಿ.ಐ. ಸುರೇಶ್, ಬಿಆರ್‌ಸಿ ವೆಂಕಟೇಶ್, ಐಎ ನಾರಾಯಣಪ್ಪ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ಹಾಜರಿದ್ದರು.