Namma Metro: ಕನ್ನಡ ರಾಜ್ಯೋತ್ಸವಕ್ಕೆ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಹಳದಿ ಮಾರ್ಗದಲ್ಲಿ ಇನ್ಮುಂದೆ ಪ್ರತಿ 15 ನಿಮಿಷಕ್ಕೊಂದು ರೈಲು
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಮ್‌ಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ನವೆಂಬರ್.1ರ ಇಂದಿನಿಂದ ಹೆಚ್ಚುವರಿಯಾಗಿ ಐದು ರೈಲುಗಳು ವಾಣಿಜ್ಯ ಸಂಚಾರ ಆರಂಭಿಸಲಿವೆ. ಹೀಗಾಗಿ ಪ್ರತಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಲಿವೆ ಎಂದು ಬಿಎಮ್‌ಆರ್‌ಸಿಎಲ್ ತಿಳಿಸಿದೆ. ಸದ್ಯ 4 ರೈಲುಗಳು ಸಂಚಾರ ನಡೆಸುತ್ತಿದ್ದು, 19 ನಿಮಿಷ ಅಂತರದಲ್ಲಿ ರೈಲು ಸೇವೆ ಲಭ್ಯವಿತ್ತು. ಈ ಹೊಸ ರೈಲಿನ ಚಾಲನೆಯಿಂದ, ಹಳದಿ ಮಾರ್ಗದಲ್ಲಿ ಪ್ರಯಾಣ ಅನುಕೂಲಕರವಾಗಲಿದೆ. ಸಾವಿರಾರು ಜನರಿಗೆ ಅನುಕೂಲವಾಗಿರುವ ಹಳದಿ ಮೆಟ್ರೋ ಮಾರ್ಗದ ವಿಸ್ತರಣೆಗೆ ಸರ್ಕಾರ ಚಿಂತನೆ ನಡೆಸಿದೆ.
-
Vishakha Bhat
Nov 1, 2025 8:06 AM
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ (Namma Metro) ಬಿಎಮ್‌ಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ನವೆಂಬರ್.1ರ ಇಂದಿನಿಂದ ( Kannada Rajyotsava) ಹೆಚ್ಚುವರಿಯಾಗಿ ಐದು ರೈಲುಗಳು ವಾಣಿಜ್ಯ ಸಂಚಾರ ಆರಂಭಿಸಲಿವೆ. ಹೀಗಾಗಿ ಪ್ರತಿ 15 ನಿಮಿಷಕ್ಕೊಂದು ರೈಲುಗಳು ಸಂಚರಿಸಲಿವೆ ಎಂದು ಬಿಎಮ್‌ಆರ್‌ಸಿಎಲ್ ತಿಳಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯೋತ್ಸವದ 70 ನೇ ವರ್ಷದ ಆಚರಣೆಯ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL), ದಿನಾಂಕ 1ನೇ ನವೆಂಬರ್ 2025ರಿಂದ ಹಳದಿ ಮಾರ್ಗದಲ್ಲಿ (Yellow Line) ಐದನೇ ಮೆಟ್ರೋ ರೈಲನ್ನು ವಾಣಿಜ್ಯ ಸೇವೆಗೆ ಒಳಪಡಿಸುತ್ತಿದೆ ಎಂದು ತಿಳಿಸಲಾಗಿದೆ.
ಈ ಹೊಸ ರೈಲಿನ ಸೇರ್ಪಡೆಯೊಂದಿಗೆ, ಹಳದಿ ಮಾರ್ಗದಲ್ಲಿ ಪೀಕ್ ಅವರ್‌ನಲ್ಲಿ ರೈಲುಗಳ ಆವರ್ತನವು 19 ನಿಮಿಷಗಳಿಗೆ ಬದಲಾಗಿ ಪ್ರತಿ 15 ನಿಮಿಷಕ್ಕೆ ರೈಲುಗಳು ಚಲಿಸಲಿವೆ ಎಂದು ಅದು ಹೇಳಿದೆ. ಇದರಿಂದಾಗಿ ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ಸುಗಮ ಮತ್ತು ನಿರಂತರ ಸೇವೆ ನೀಡಲು ಸಹಾಯಕವಾಗಲಿದೆ. ಈ ಬದಲಾವಣೆಯು ಎಲ್ಲ ದಿನಗಳಿಗೆ ಅನ್ವಯವಾಗುತ್ತದೆ' ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.
BMRCL ಅಧಿಕೃತ ಹೇಳಿಕೆ
ನವೆಂಬರ್ 1, 2025ರಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ.
— ನಮ್ಮ ಮೆಟ್ರೋ (@OfficialBMRCL) October 31, 2025
5th Metro Train to commence operations on Yellow Line from November 1, 2025. Check the media release for more details. pic.twitter.com/HDo6N3ID39
ಸದ್ಯ 4 ರೈಲುಗಳು ಸಂಚಾರ ನಡೆಸುತ್ತಿದ್ದು, 19 ನಿಮಿಷ ಅಂತರದಲ್ಲಿ ರೈಲು ಸೇವೆ ಲಭ್ಯವಿತ್ತು. ಈ ಹೊಸ ರೈಲಿನ ಚಾಲನೆಯಿಂದ, ಹಳದಿ ಮಾರ್ಗದಲ್ಲಿ ಪ್ರಯಾಣ ಅನುಕೂಲಕರವಾಗಲಿದೆ. ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್‌ಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆಯುವಂತೆ ಎಂದು ನಿಗಮ ಸೂಚಿಸಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಲ್ಲಿ ಬಿಎಂಆರ್‌ಸಿಎಲ್ ನಾಲ್ಕನೇ ರೈಲು ಅನ್ನು ಹಳದಿ ಮಾರ್ಗದಲ್ಲಿ ಸೇರಿಸಿತ್ತು. ಅದರಿಂದ ರೈಲುಗಳ ಪ್ರಯಾಣದ ಅಂತರ 25 ನಿಮಿಷಗಳಿಂದ 19 ನಿಮಿಷಗಳಿಗೆ ಇಳಿಕೆಯಾಗಿತ್ತು. ಈಗ ಐದನೇ ರೈಲು ಸೇರ್ಪಡೆಯೊಂದಿಗೆ, ಆ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ಸುದ್ದಿಯನ್ನೂ ಓದಿ: Viral News: ಎಲ್ಲಿ ನೋಡಿದರಲ್ಲಿ ಕಾಂಡೋಮ್ಸ್... ಮೆಟ್ರೋ ನಿಲ್ದಾಣದ ಈ ಫೊಟೋ ಫುಲ್ ವೈರಲ್
ಮಾರ್ಗ ವಿಸ್ತರಿಸಲು ಚಿಂತನೆ
ಸಾವಿರಾರು ಜನರಿಗೆ ಅನುಕೂಲವಾಗಿರುವ ಹಳದಿ ಮೆಟ್ರೋ ಮಾರ್ಗದ ವಿಸ್ತರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಈ ಹಳದಿ ಮಾರ್ಗವನ್ನು 10 ರಿಂದ 12 ಕಿ.ಮೀವರೆಗೂ ವಿಸ್ತರಣೆ ಮಾಡಲು ಸರ್ಕಾರ ಮುಂದಾಗಿದೆ. ಹೈದರಾಬಾದ್ ಮೂಲಕ ಸಂಸ್ಥೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡೆಸುವ ಜವಾಬ್ದಾರಿ ನಡೆದಿದೆ. ಮಾರ್ಗ ಸಮೀಕ್ಷೆ ಕಾರ್ಯಗಳು ನಡೆಯುತ್ತಿದೆ. ಎಲ್ಲಾ ಅಂದುಕೊಂಡತೆ ಆದರೆ, ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಇರುವ ಹಳದಿ ಮಾರ್ಗವು ಚಂದಾಪುರ ಮೂಲಕ ಅತ್ತಿಬೆಲೆವರೆಗೂ ವಿಸ್ತರಣೆಯಾಗಲಿದೆ.