ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ದಾರ್ಶನಿಕರ ಜಯಂತಿ ಸ್ವಾಗತಾರ್ಹ ಆದರೆ ಆಚರಣೆಯ ವೈಭವೀಕರಣಕ್ಕೆ ಟೀಕೆ

ಗಣಿ ನಿಧಿಯ ಅಡಿಯಲ್ಲಿ ತಕ್ಷಣವೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂದು ಆಗ್ರಹಿಸಿ ದರು. ಸಮರ್ಪಕ ಆರೋಗ್ಯ ಸೌಲಭ್ಯಗಳ ಕೊರತೆಯಿಂದ ತಾಲ್ಲೂಕಿನ ಜನರು ತುರ್ತು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಇದನ್ನು ತಪ್ಪಿಸಲು ನಿಧಿಯಲ್ಲಿನ ಹಣ ಬಳಸಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು.

ಚಿಕ್ಕನಾಯಕನಹಳ್ಳಿ: ಸರ್ವ ದಾರ್ಶನಿಕರ ಜಯಂತಿ ಆಚರಣೆ ನಡೆಯಬೇಕು. ಇದು ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ತಿಳಿಸಲು ಅಗತ್ಯ. ಆದರೆ ಶಾಸಕರ ಮತ್ತು ಆಯೋಜಕರ ಆಚರಣಾ ವಿಧಾನವು ದಾರ್ಶನಿಕರ ಸರಳತೆಯ ತತ್ವಕ್ಕೆ ವಿರುದ್ದವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಉಪ್ಪಾರ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲೇಶ್ ಖಂಡಿಸಿದರು.

ಪತ್ರಿಕಾ ಹೇಳಿಕೆ ನೀಡಿದ ಅವರು ಜಯಂತಿ ಎಂದರೆ ಮೆರವಣಿಗೆ ಮಾಡಿ ಹಣ ವ್ಯರ್ಥ ಮಾಡುವುದಲ್ಲ. ಬದಲಿಗೆ ಅವರ ತತ್ವಗಳ ಕುರಿತು ಚರ್ಚೆಯಾಗಬೇಕು. ಅನಗತ್ಯ ದುಂದು ವೆಚ್ಚ ಮತ್ತು ತೋರಿಕೆಯ ಪ್ರದರ್ಶನಕ್ಕೆ, ಆಡಂಬರಕ್ಕೆ ಜಯಂತಿ ಸೀಮಿತವಾಗಿದೆ ಎಂದು ಟೀಕಿಸಿದರು. ಈ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣ ಅಥವಾ ದಾರ್ಶನಿಕರ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆಗೆ ಬಳಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Chikkanayakanahalli News: ರಾಜಣ್ಣ ವಜಾ ಏಜೆಂಟರ ಸೂಚನೆ ಕಾರಣ: ಡಾ. ಸಾಸಲು ಸತೀಶ್ ವಾಗ್ದಾಳಿ

ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ, ಶಾಸಕ ಸಿ.ಪುಟ್ಟ ರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ. ಪುಟ್ಟ ರಂಗಶೆಟ್ಟಿ ಅವರು ರಾಜ್ಯದ ಪ್ರಮುಖ ಉಪ್ಪಾರ ಸಮುದಾಯಕ್ಕೆ ಸೇರಿದವರಾಗಿದ್ದು ಅವರ ರಾಜಕೀಯ ಅನುಭವ ಮತ್ತು ಸೇವೆ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮುಖ್ಯ ಮಂತ್ರಿಗಳನ್ನು ಮನವಿ ಮಾಡಿದರು. ಕಳೆದ ಅವಧಿಯಲ್ಲಿ ಅವರು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದು ಈ ಬಾರಿಯೂ ಅವರ ಅನುಭವವನ್ನು ಸರಕಾರ ಬಳಸಿಕೊಳ್ಳುವ ಮೂಲಕ ಉಪ್ಪಾರ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಬೇಕು ಎಂದು ಆಗ್ರಹಿಸಿದರು.

ಗಣಿ ಹಣ ಬಳಸಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ

ಗಣಿ ನಿಧಿಯ ಅಡಿಯಲ್ಲಿ ತಕ್ಷಣವೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂದು ಆಗ್ರಹಿಸಿ ದರು. ಸಮರ್ಪಕ ಆರೋಗ್ಯ ಸೌಲಭ್ಯಗಳ ಕೊರತೆಯಿಂದ ತಾಲ್ಲೂಕಿನ ಜನರು ತುರ್ತು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಇದನ್ನು ತಪ್ಪಿಸಲು ನಿಧಿಯಲ್ಲಿನ ಹಣ ಬಳಸಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು. ಈ ಬಗ್ಗೆ ಸಂಬಂಧಪಟ್ಟ ತಾಲ್ಲುಕು ಆಡಳಿತ ಮತ್ತು ಶಾಸಕರು ತುರ್ತಾಗಿ ಗಮನ ಹರಿಸಿ, ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ

ತಹಸೀಲ್ದಾರರು ಕಚೇರಿ ಕೆಲಸ ಬಿಟ್ಟು ಅನಗತ್ಯ ಸಭೆಗಳು ಅಥವಾ ವೈಯಕ್ತಿಕ ಪ್ರವಾಸ ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರು ಕಚೇರಿಯಲ್ಲಿ ನಿಯಮಿತವಾಗಿ ಲಭ್ಯ ವಿರುವುದಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಹಸೀಲ್ದಾರ್ ಪುರಂದರ ಅವರು ಕಚೇರಿಯಲ್ಲಿ ಕಡ್ಡಾಯವಾಗಿ ಲಭ್ಯವಿರುವಂತೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.