ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

H D Kumaraswamy: ನೇಮಕಾತಿ ಅಕ್ರಮದ ಆರೋಪಗಳಿಂದ ಪ್ರಿಯಾಂಕ್ ಖರ್ಗೆ ಪಲಾಯನ: ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

​ಒಎಂಆರ್ ಶೀಟ್ ತಿದ್ದುಪಡಿ ಪ್ರಕರಣದಲ್ಲಿ ಸರ್ಕಾರದ ಹಂತದಲ್ಲೇ ಅಕ್ರಮ ಸಾಬೀತಾಗಿದ್ದು, ಕಾರ್ಯ ದರ್ಶಿಗಳ ಅಮಾನತಿಗೆ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ತಲುಪಿತ್ತು. ಇತ್ತೀಚೆಗೆ ನಡೆದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಕಳಪೆ ಅಂಕ ಪಡೆದವರಿಗೆ ರ್ಯಾಂಕ್ ನೀಡಿ ಅರ್ಹರಿಗೆ ಅನ್ಯಾಯ ಎಸಗಲಾಗಿದೆ ಎಂದರು.

ತುಮಕೂರು: ​ರಾಜ್ಯದಲ್ಲಿ ಸಾಲು ಸಾಲು ನೇಮಕಾತಿ ಅಕ್ರಮಗಳು ನಡೆಯುತ್ತಿದ್ದರೂ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಚಿವ ಪ್ರಿಯಾಂಕ್ ಖರ್ಗೆ ಪಲಾಯನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy)ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಹಿತ ಎತ್ತಿದ ಪ್ರಶ್ನೆಗಳಿಗೆ ನೇರ ಉತ್ತರ ನೀಡದೆ, ಮಾಧ್ಯಮಗಳನ್ನು ಎದುರಿಸಲಾಗದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವ ಮೂಲಕ ಸಚಿವರು ವಿಷಯಾಂತರ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

​​ಪ್ರಿಯಾಂಕ್ ಖರ್ಗೆ(Priyank Kharge) ಅವರು ಪಂಚಾಯತ್ ರಾಜ್ ಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ 24 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ.

ಇದನ್ನೂ ಓದಿ: HD Kumaraswamy: ಮೈಶುಗರ್ ಶಾಲೆ ಅಭಿವೃದ್ಧಿಗೆ 10 ಕೋಟಿ ರೂ. ಶೀಘ್ರ ರಿಲೀಸ್‌- HDK ಭರವಸೆ

​ಒಎಂಆರ್ ಶೀಟ್ ತಿದ್ದುಪಡಿ ಪ್ರಕರಣದಲ್ಲಿ ಸರ್ಕಾರದ ಹಂತದಲ್ಲೇ ಅಕ್ರಮ ಸಾಬೀತಾಗಿದ್ದು, ಕಾರ್ಯದರ್ಶಿಗಳ ಅಮಾನತಿಗೆ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ತಲುಪಿತ್ತು. ಇತ್ತೀಚೆಗೆ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಕಳಪೆ ಅಂಕ ಪಡೆದವರಿಗೆ ರ್ಯಾಂಕ್ ನೀಡಿ ಅರ್ಹರಿಗೆ ಅನ್ಯಾಯ ಎಸಗಲಾಗಿದೆ ಎಂದರು.

​ದೇವೇಗೌಡರ ಪತ್ರದ ಕುರಿತು ಸ್ಪಷ್ಟನೆ ನೀಡಿದ ಸಚಿವರು ​2011ರ 362 ಕೆಪಿಎಸ್‌ಸಿ ಅಭ್ಯರ್ಥಿಗಳ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೆಸರನ್ನು ಎಳೆದು ತರುತ್ತಿರುವುದು ಸರಿಯಲ್ಲ. ದೇವೇಗೌಡರು ಎಂದಿಗೂ ಅಕ್ರಮಕ್ಕೆ ಬೆಂಬಲ ನೀಡಿದವರಲ್ಲ.

​ಕುಣಿಗಲ್ ತಾಲೂಕಿನ ದೃಷ್ಟಿಹೀನ ಬಡ ಅಭ್ಯರ್ಥಿಯೊಬ್ಬನಿಗೆ ಕೆಪಿಎಸ್‌ಸಿ(KPSC)ಯಲ್ಲಿ ಆದ ಅನ್ಯಾಯ ವನ್ನು ಸರಿಪಡಿಸುವಂತೆ ಕೋರಿ ದೇವೇಗೌಡರು ಆಗಿನ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಮನವಿ ಪತ್ರ ಬರೆದಿದ್ದರು.

​ಅನ್ಯಾಯಕ್ಕೊಳಗಾಗಿದ್ದ ಅದೇ ಅಭ್ಯರ್ಥಿ ಇಂದು ಯುಪಿಎಸ್‌ಸಿ (UPSC)ತೇರ್ಗಡೆಯಾಗಿ ಪಶ್ಚಿಮ ಬಂಗಾಳದಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ. ಬಡವರಿಗೆ ನ್ಯಾಯ ಕೊಡಿಸಲು ಬರೆದ ಪತ್ರವನ್ನು ಅಕ್ರಮಕ್ಕೆ ಹೋಲಿಸುವುದು ಸಚಿವರ ಬೇಜವಾಬ್ದಾರಿ ಎಂದರು.

ರಾಜಕೀಯ ಲಾಭಕ್ಕಾಗಿ ಹಾಗೂ ತೆವಲಿಗಾಗಿ ಯುವಜನರ ಬದುಕಿನ ಜೊತೆ ಚೆಲ್ಲಾಟವಾಡುವು ದನ್ನು ಸಹಿಸಲು ಸಾಧ್ಯವಿಲ್ಲ. ಕೆಪಿಎಸ್‌ಸಿ ಅಕ್ರಮದಲ್ಲಿ ಕೋರ್ಟ್ ತೀರ್ಪು ಬಂದಿದ್ದರೂ ತಪ್ಪಿತಸ್ಥರ ಮೇಲೆ ಸರಿಯಾದ ಚಾರ್ಜ್‌ಶೀಟ್ ಹಾಕಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೋರ್ಟ್ ತೀರ್ಪನ್ನು ಸರ್ಕಾರ ಮೊದಲು ಸರಿಯಾಗಿ ಓದಲಿ ಎಂದು ಕಿಡಿಕಾರಿದರು.

​ನಾನು ಎತ್ತಿರುವ ನೇರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಸಚಿವರು ದಿಕ್ಕು ತಪ್ಪಿಸುತ್ತಿದ್ದಾರೆ. ಅಕ್ರಮ ವೆಸಗಿದವರನ್ನು ರಿಸಾರ್ಟ್‌ಗಳಲ್ಲಿ ಕೂರಿಸಿ, ಈಗ ಅವರಿಗೆ ಉನ್ನತ ಹುದ್ದೆಗಳ ಬಡ್ತಿ ನೀಡಲಾಗುತ್ತಿದೆ. ಮೇಲಧಿಕಾರಿಗಳನ್ನು ಹಾಗೂ ಅಕ್ರಮ ಎಸಗಿದವರನ್ನು ರಕ್ಷಿಸಲು ಐಎಎಸ್ ಅಧಿಕಾರಿಗಳನ್ನು ಬೆದರಿಸಿ ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

​ತಮ್ಮ ಆಡಳಿತಾವಧಿಯನ್ನು ಸ್ಮರಿಸಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ 56,000 ಶಿಕ್ಷಕರ ನೇಮಕಾತಿ ಸೇರಿದಂತೆ ಸಾವಿರಾರು ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡಿದ್ದೆ. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗೂ ಭಯ-ಭಕ್ತಿ ಇಲ್ಲದಂತಾಗಿದೆ. ರಾಜ್ಯದ ಜನತೆ ಹಾಗೂ ಮಾಧ್ಯಮಗಳ ಬೆಂಬಲದೊಂದಿಗೆ ಈ ಭ್ರಷ್ಟ ಸರ್ಕಾರದ ವಿರುದ್ಧದ ಹೋರಾಟ ನಿರಂತರವಾಗಿ ನಡೆಯಲಿದೆ" ಎಂದು ಎಚ್ಚರಿಕೆ ನೀಡಿದರು.

​ಮಾಧ್ಯಮಗಳನ್ನು ಎದುರಿಸುವ ಧೈರ್ಯವಿಲ್ಲ: ​ಪತ್ರಿಕಾಗೋಷ್ಠಿಗಳಲ್ಲಿ ಕೇಳಿದ ಸ್ಪಷ್ಟ ಪ್ರಶ್ನೆ ಗಳಿಗೆ ಸಚಿವ ಖರ್ಗೆ ಬಳಿ ಉತ್ತರವೇ ಇಲ್ಲ. ಮೈಕ್ ಮುಂದೆ ಮಾತನಾಡಲು ಧೈರ್ಯವಿಲ್ಲದೆ ಮನೆಗೆ ತೆರಳಿ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

​ಸರ್ಕಾರದ ವಿರುದ್ಧ ದಾಖಲೆ ಸಹಿತ ಅಕ್ರಮಗಳನ್ನು ಎತ್ತಿಹಿಡಿದಾಗ ಬಿಜೆಪಿ, ಆರ್‌ಎಸ್‌ಎಸ್ ಅಥವಾ ದೇವೇಗೌಡರ ಹೆಸರು ಹೇಳಿ ವಿಷಯಾಂತರ ಮಾಡುವುದು ಸಚಿವರ ಅಭ್ಯಾಸವಾಗಿದೆ.

​ತಮ್ಮ ಬಳಿ ಎಲ್ಲ ಅಕ್ರಮಗಳಿಗೂ ದಾಖಲೆಗಳಿದ್ದು, ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೈತಿಕತೆ ಇದ್ದರೆ ದಾಖಲೆಗಳ ಆಧಾರದ ಮೇಲೆ ನೇರ ಚರ್ಚೆಗೆ ಬರಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು

image

ಕೆಪಿಎಸ್‌ಸಿ ಅಕ್ರಮಗಳ ಮೂಲಕ ರಾಜ್ಯ ಸರ್ಕಾರ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡು ತ್ತಿದ್ದು, ದುರಾಡಳಿತ ಮತ್ತು ಅಕ್ರಮಗಳನ್ನು ಮುಚ್ಚಿಡಲು ಯತ್ನಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ