ಗುಬ್ಬಿ: ಈ ಹಳ್ಳಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು ಇಲ್ಲಿ ಮದುವೆಯೋ, ಇನ್ಯಾವುದೋ ಜಾತ್ರೆಯ ಸಂಭ್ರಮವಲ್ಲ ಅದು ಗೋಮಾತೆ ಲಕ್ಷ್ಮಿಯ ವಿಶೇಷ ಸೀಮಂತ ಕಾರ್ಯಕ್ರಮ ಇಡೀ ಗ್ರಾಮದ ರೈತರು, ಮಹಿಳೆಯರು,ಸಂಬಂದಿಗಳು ಸ್ನೇಹಿತರು ಎಲ್ಲರೂ ಒಟ್ಟುಗೂಡಿ ಲಕ್ಷ್ಮಿ ಯ ಸೀಮಂತ ಕಾರ್ಯಕ್ರಮವನ್ನು ಮಾಡುತ್ತಿದ್ದ ಕಾರ್ಯಕ್ರಮ.
ಭಾರತ ದೇಶದ ಸಂಸ್ಕೃತಿ ಸಂಸ್ಕಾರದಲ್ಲಿ ಗೋವಿಗೆ ತನ್ನದೇ ಆದ ಪವಿತ್ರತೆ ಇದೆ ಹೆಣ್ಣು ತನ್ನ ತಾಯ್ತನವನ್ನು ಅನುಭವಿಸುವುದಕ್ಕೋ ಮುಂಚೆ ಗಂಡನ ಮನೆಯಲ್ಲಿ ಸೀಮಂತ ಮಾಡಿ ತವರು ಮನೆಗೆ ಕಳುಹಿಸುವುದು ವಾಡಿಕೆ.
ಇದನ್ನೂ ಓದಿ: Gubbi News: ಕೆಪಿಎಸ್ಸಿ ಹಗರಣಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಶಾಸಕ ಎಂ.ಟಿ. ಕೃಷ್ಣಪ್ಪ
ಆದರೆ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದ ರೈತ ಕರೇಗೌಡ ಅವರ ಕುಟುಂಬ ಅವರ ಮನೆ ಮಗಳಾದ ಗೋವು ಲಕ್ಷ್ಮಿಗೆ ಸಡಗರ ಸಂಭ್ರಮದಿಂದ ಸೀಮಂತವನ್ನು ಮಾಡುವ ಮೂಲಕ ಇನ್ನಿತ ರರಿಗೆ ಆದರ್ಶವಾಗಿದ್ದಾರೆ. ಕರೇಗೌಡ ಅವರ ಮನೆಯಲ್ಲಿ ಇಂದು ಹೋಳಿಗೆಯ ಸಿಹಿ ಊಟ ಸುಮಾರು 300ಕ್ಕೂ ಹೆಚ್ಚು ರೈತರು ಸಾರ್ವಜನಿಕರು ಆಗಮಿಸಿ ಗೋವು ಲಕ್ಷ್ಮಿಗೆ ವಿಶೇಷ ಪೂಜೆ ಆರತಿ, ಮಡಿಲು ತುಂಬುವ ಕೆಲಸವನ್ನು ಮಾಡಿದ್ದಾರೆ.
ಇದೆ ಸಂದರ್ಭದಲ್ಲಿ ಮಾತನಾಡಿದ ರೈತ ಕರೆಗೌಡ ನಮ್ಮ ಮನೆಯ ಹೆಣ್ಣು ಮಗುವಿನಂತೆ ನಾವು ನಮ್ಮ ಮನೆಯ ಗೋಮಾತೆ ಲಕ್ಷ್ಮಿಗೆ ವಿಶೇಷ ಮಡಿಲು ತುಂಬುವ ಕೆಲಸವನ್ನು ಮಾಡಿದ್ದೇವೆ.
ಸುಮಾರು 10-12 ವರ್ಷಗಳಿಂದಲೂ ಸಹ ನಮ್ಮ ಮನೆಯಲ್ಲಿ ಯಾವುದೇ ಹಸು ಗರ್ಭ ಧರಿಸಿದರೂ ಇಂತಹ ವಿಶೇಷ ಶ್ರೀಮಂತ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಇದು ನಮಗೆ ಹೆಚ್ಚಿನ ಖುಷಿ ನೀಡಿದೆ ಮತ್ತು ಗೋಮಾತೆ ನಮಗೆ ಸಕಲ ಸಂಪತ್ತು ಐಶ್ವರ್ಯವನ್ನು ನೀಡುತ್ತಾ ಬಂದಿದ್ದಾಳೆ.
ಇಂದು ನಮ್ಮೂರಿನ ರೈತರು, ಸಂಬಂದಿಗಳು,ಸ್ನೇಹಿತರು, ಎಲ್ಲರೂ ಆಗಮಿಸಿ ತಾಯಿ ಲಕ್ಷ್ಮಿಗೆ ವಿಶೇಷ ಶ್ರೀಮಂತ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗಂಗಣ್ಣ ಕಾಳಮ್ಮ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ನೆಂಟರುಷ್ಟರು ಹಾಜರಿದ್ದರು.