ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿದ್ಧಿವಿನಾಯಕ ಸೇವಾ ಸಮಿತಿಯ 50ನೇ ವರ್ಷದ ಗಣಪತಿ ಪೂಜೆ; ಮುತ್ತೈದೆಯರಿಗೆ ಬಾಗಿನ ನೀಡಿ ಗೌರವ

Tumkur News: ತುಮಕೂರು ನಗರದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ 50ನೇ ವರ್ಷದ ಗಣಪತಿ ಪೂಜಾ ಮಹೋತ್ಸವದಲ್ಲಿ, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದರು. ಈ ಕುರಿತ ವಿವರ ಇಲ್ಲಿದೆ.

ತುಮಕೂರು‌, ಸೆ.28: ನಗರದ ಸಿದ್ಧಿವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ 50ನೇ ವರ್ಷದ ಗಣಪತಿ ಪೂಜಾ ಮಹೋತ್ಸವದಲ್ಲಿ, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರು ಮುತ್ತೈದೆಯರಿಗೆ ಬಾಗಿನ ನೀಡಿ ಗೌರವಿಸಿದರು. ಕಳೆದ ಐದು ವರ್ಷಗಳಿಂದ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಮುತೈದೆಯರಿಗೆ ಮಡಿಲು ತುಂಬುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಸಹ ಹೆಸರು ನೋಂದಾಯಿಸಿಕೊಂಡ 15ಕ್ಕೂ ಹೆಚ್ಚು ಮಹಿಳೆಯರಿಗೆ ಸಾಂಪ್ರದಾಯಿಕ ಬದ್ಧತೆಯೊಂದಿಗೆ ಮಡಿಲು ತುಂಬುವ ಎಲ್ಲಾ ಪರಿಕರಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಮಾತೃತ್ವ ಮತ್ತು ಮುತ್ತೈದೆ ಸಂಸ್ಕೃತಿಯ ಎರಡು ಪ್ರಮುಖ ಕಣ್ಣುಗಳಾಗಿದ್ದು, ಕುಟುಂಬ ನಿರ್ವಹಣೆಯೊಂದಿಗೆ ದೇಶವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಹಿರಿದಾದದ್ದು ಎಂದು ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.

ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ಕಳೆದ 50 ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಿಶೇಷ ಸ್ಪರ್ಧೆಗಳು

ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳಿಂದ ಆರಂಭವಾದ ಈ ಗಣೇಶ ಪ್ರತಿಷ್ಠಾಪನೆಗೆ ಈಗ 50 ವರ್ಷ ತುಂಬಿದ್ದು, ಪೂಜೆ ನಡೆಯುವ ದಿನಗಳಲ್ಲಿ ಮಡಿಲು ತುಂಬುವುದು, ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ಹಾಗೂ ಮಾದರಿ ಅತ್ತೆ-ಸೊಸೆ ಸ್ಪರ್ಧೆಯಂತಹ ವಿನೂತನ ಕಾರ್ಯಕ್ರಮಗಳು ನಡೆಯುತ್ತಿವೆ.

ಮದ್ಯವರ್ಜನ ಶಿಬಿರದಿಂದ ನೊಂದವರ ಸಂಸಾರದಲ್ಲಿ ನೆಮ್ಮದಿಯ ಬೆಳಕು: ಶ್ರದ್ಧಾ ಅಮಿತ್

ಕಾರ್ಯಕ್ರಮದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಪ್ರಭು, ಕಾರ್ಯದರ್ಶಿ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ನಟರಾಜು, ನಿರ್ದೇಶಕರಾದ ಅನುಸೂಯಮ್ಮ, ಕೊಪ್ಪಳ್ ನಾಗರಾಜು, ಸಿದ್ಧರಾಜು, ಸುಮ ಪ್ರಸನ್ನಕುಮಾರ್ ಸೇರಿದಂತೆ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.