ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

K M Suresh: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಗುಬ್ಬಿಯಲ್ಲಿ ಮತದಾರರ ಸಭೆ

ಜೆಡಿಎಸ್(JDS) ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಶೇಕಡಾ 50 ಕ್ಕೂ ಅಧಿಕ ಮತಗಳು ಶಿಕ್ಷಕದ್ದಾಗಿದೆ. ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರ ತಂದಿದೆ. ಗ್ಯಾರಂಟಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ತೋರಿದೆ. ಹಿಂದಿನ ಬಾಗಿಲಲ್ಲಿ ಲೂಟಿ ಮಾಡುವ ಈ ಕಾಂಗ್ರೆಸ್ ಸರ್ಕಾರ ವೈಫಲ್ಯ ಈ ಚುನಾವಣೆಯಲ್ಲಿ ಮತದಾರರು ತೋರಲಿದ್ದಾರೆ ಎಂದರು.

ಗುಬ್ಬಿ: ಆಗ್ನೇಯ ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್(K M Suresh) ಪರ ಪ್ರಚಾರ ನಡೆಸಿರುವ ಬಿಜೆಪಿ ಜೆಡಿಎಸ್ ಮೈತ್ರಿ(BJP-JDS Coalision) ಮುಖಂಡರು ಪಟ್ಟಣದ ಎಸ್ಎಲ್ ವಿ ಕಂಫರ್ಟ್ ಸಭಾಂಗಣದಲ್ಲಿ ಪದವೀಧರ ಮತದಾರರ ಸಭೆ ನಡೆಸಿ ಮತಯಾಚನೆ ಮಾಡಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಈಗಾಗಲೇ ಜನರಿಗೆ ಬೇಸರ ತಂದಿದೆ. ನಮ್ಮ ಜಿಲ್ಲೆಗೆ ಹೇಮಾವತಿ ವಿಚಾರದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಪದವೀಧರ ಮತದಾರರು ತಮ್ಮ ಬುದ್ಧಿವಂತಿಕೆಯನ್ನು ಈ ಆಗ್ನೇಯ ಪದವೀಧರ ಚುನಾವಣೆಯಲ್ಲಿ ತೋರಬೇಕು. 3800ಕ್ಕೂ ಅಧಿಕ ಮತಗಳು ತಾಲ್ಲೂಕಿನಲ್ಲಿದೆ. ಈ ಪೈಕಿ ನಗರ ಮತ್ತು ಕಸಬ ಹೋಬಳಿ 1200 ಮತ ಹೊಂದಿದೆ. ಆಲೋಚಿಸಿ ಮೊದಲ ಪ್ರಾಶಸ್ತ್ಯ ಮತವನ್ನು ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Gubbi News: ಚೇಳೂರು ಜಿಪಂ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು

ಜೆಡಿಎಸ್(JDS) ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಶೇಕಡಾ 50 ಕ್ಕೂ ಅಧಿಕ ಮತಗಳು ಶಿಕ್ಷಕದ್ದಾಗಿದೆ. ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರ ತಂದಿದೆ. ಗ್ಯಾರಂಟಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ತೋರಿದೆ. ಹಿಂದಿನ ಬಾಗಿಲಲ್ಲಿ ಲೂಟಿ ಮಾಡುವ ಈ ಕಾಂಗ್ರೆಸ್ ಸರ್ಕಾರ ವೈಫಲ್ಯ ಈ ಚುನಾವಣೆಯಲ್ಲಿ ಮತದಾರರು ತೋರಲಿದ್ದಾರೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಕಳೆದ 30 ವರ್ಷದಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸರಳ ಸಜ್ಜನಿಕೆಯ ವ್ಯಕ್ತಿ ಕೆ.ಎಂ.ಸುರೇಶ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಉದ್ಯೋಗ ಸಮಸ್ಯೆ, ಪದವೀಧರರ ಸಂಕಷ್ಟ ಬಗೆಹರಿಸುವ ನಿಟ್ಟಿನಲ್ಲಿ ಭರವಸೆಯ ವ್ಯಕ್ತಿಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಗಳನ್ನು ಅವರಿಗೆ ಮೊದಲ ಪ್ರಾಶಸ್ತ್ಯ ರೀತಿಯಲ್ಲಿ ಕೊಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಉಮಾ ಮಹೇಶ್, ಶಂಕರ್, ಡಿ.ರಘು, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಚೇತನ್ ನಾಯಕ್, ಯುವಮೋರ್ಚಾ ವಿಶ್ವನಾಥ್, ಜೆಡಿಎಸ್ ಶಿವಾನಂದ್, ಎಚ್.ಎನ್.ಲೋಕೇಶ್, ಉದಯ್, ಲೋಕೇಶ್ ಇತರರು ಇದ್ದರು.

image

ಪದವೀಧರರಿಗೆ ಅವಶ್ಯ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಸಮಾಲೋಚನೆ ಹೀಗೆ ಅನೇಕ ಕಾರ್ಯಕ್ರಮವನ್ನು ಈಗಾಗಲೇ ನಡೆಸಿಕೊಂಡು ಬಂದಿರುವ ಅಭ್ಯರ್ಥಿ ಸುರೇಶ್ ಅವರು ಮೂರು ದಶಕದಿಂದ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಗೆಲುವು ಮೈತ್ರಿ ಪಕ್ಷ ಎನ್ ಡಿಎ ಗೆ ಒಂದು ಶಕ್ತಿ ಬರಲಿದೆ.

-ಜಿ.ಎನ್.ಅಣ್ಣಪ್ಪಸ್ವಾಮಿ, ಮಾಜಿ ಅಧ್ಯಕ್ಷರು, ಪಪಂ, ಗುಬ್ಬಿ.