ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tumkur News: ಆಮಿಷಗಳಿಂದ ದೂರವಿರಲು ಗುರಿಯ ಹಠ ಅಗತ್ಯ: ನ್ಯಾಯಾಧೀಶ ಜಯಂತ ಕುಮಾರ್‌

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸುವ ಹಠ ಮತ್ತು ಸ್ವಯಂಪ್ರೀತಿಯ ಪರಿಕಲ್ಪನೆಯನ್ನು ಹೊಂದಿದ್ದರೆ, ಇತರರು ಒಡ್ಡುವ ಆಮಿಷಗಳಿಗೆ ಬಲಿಬೀಳಲು ಸಾಧ್ಯವಿಲ್ಲ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ ಕುಮಾರ್‌ ತಿಳಿಸಿದರು.

​ತುಮಕೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸುವ ಹಠ ಮತ್ತು ಸ್ವಯಂಪ್ರೀತಿಯ ಪರಿಕಲ್ಪನೆಯನ್ನು ಹೊಂದಿದ್ದರೆ, ಇತರರು ಒಡ್ಡುವ ಆಮಿಷಗಳಿಗೆ ಬಲಿಬೀಳಲು ಸಾಧ್ಯವಿಲ್ಲ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ ಕುಮಾರ್‌ ತಿಳಿಸಿದರು.

​ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೋಕ್ಸೋ ಕಾಯ್ದೆ ಮತ್ತು ಮಾದಕ ವಸ್ತು ನಿಷೇಧ ಕಾಯ್ದೆ' ಕುರಿತ ಕಾನೂನು ಅರಿವು ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Tumkur News: ಶತಮಾನದ ಇತಿಹಾಸವಿರುವ ಸರಕಾರಿ ಶಾಲೆಯ ಜಾಗ ಉಳಿಸಲು ಒತ್ತಾಯ

​ಕಾರ್ಯಕ್ರಮದ ಮುಖ್ಯಾಂಶಗಳು:

​ಅನಗತ್ಯ ನಿರ್ಧಾರಗಳಿಗಳಿಂದ ದೂರ: ಪರಿಚಯವಿಲ್ಲದವರೊಂದಿಗೆ ಅತಿಯಾದ ಸಲುಗೆ ಬೇಡ ಹಾಗೂ ಹಿಂದುಮುಂದು ಯೋಚಿಸದೆ ನಿರ್ಧಾರ ತೆಗೆದುಕೊಂಡು ತೊಂದರೆಗಳನ್ನು ಆಹ್ವಾನಿಸ ಬೇಡಿ.

​ತಂತ್ರಜ್ಞಾನದ ಸದುಪಯೋಗ: ಮೊಬೈಲ್ ಅನ್ನು ಅನಗತ್ಯ ರೀಲ್ಸ್‌ಗಳನ್ನು ನೋಡಲು ಬಳಸದೆ ವಿದ್ಯಾಭ್ಯಾಸಕ್ಕೆ ಮಾತ್ರ ಪೂರಕವಾಗಿ ಬಳಸಿ. ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವು ದರಿಂದ ಆಪತ್ತು ಕಟ್ಟಿಟ್ಟಬುತ್ತಿ.

​ಮಾದಕ ವಸ್ತುಗಳ ಅಪಾಯ: ಯುವಸಮೂಹವನ್ನು ಮಾದಕವಸ್ತುಗಳ ದಾಸರನ್ನಾಗಿ ಮಾಡಿದರೆ ಇಡೀ ದೇಶವೇ ಸರ್ವನಾಶವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.‌ ಶಶಿಧರ ಶೆಟ್ಟಿ ಎಚ್ಚರಿಸಿದರು.

WhatsApp Image 2026-09-27 at 15.10.13 (1)

​ಸ್ವಯಂ ಅರಿವು: ವಿದ್ಯಾರ್ಥಿಗಳು ಮೊದಲು ತಮ್ಮನ್ನು ತಾವು ಅರ್ಥಮಾಡಿಕೊಳ್ಳಬೇಕು. ಪೋಕ್ಸೋ ಅಥವಾ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.‌ ಬಿ. ಪ್ರದೀಪ್‌ ಕುಮಾರ್‌ ತಿಳಿಸಿದರು.

​ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಬಿ.ಜಯಂತ ಕುಮಾರ್‌ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಲೋಕೇಶ ಧನಪಾಲ ಹವಲೆ, ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಎಸ್.‌ ಆರ್., ಉಪಪ್ರಾಂಶುಪಾಲರಾದ ವೇದಮೂರ್ತಿ, ಪೂರ್ಣಗಂಗಾ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

​ವಿದ್ಯಾರ್ಥಿ ವಿಭವ ಆರ್.‌ ಕ್ರಮಧಾರಿ ವಂದೇಮಾತರಂ ಮತ್ತು ನಾಡಗೀತೆ ಹಾಡಿದರು. ಉಪನ್ಯಾಸಕಿ ಶ್ರೀಗೌರಿ ಮಠದ್‌ ಸ್ವಾಗತಿಸಿದರೆ, ಇಂಗ್ಲಿಷ್‌ ಉಪನ್ಯಾಸಕಿ ಡಾ.ಆರತಿ ಪಟ್ರಮೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.