Murder Case: ತಂದೆಯನ್ನು ಕೊಂದು ಶಾರ್ಟ್ ಸರ್ಕ್ಯೂಟ್ ಎಂದು ಬಿಂಬಿಸಿದ ಮಗ; ಸುಳಿವು ನೀಡಿದ ಸಿಸಿಟಿವಿ
Murder Case: ಮೇ 11 ರಂದು ಕುಣಿಗಲ್ ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕಾ ಘಟಕದಲ್ಲಿ ಮಾಲೀಕ ನಾಗೇಶ್ ಭಾನುವಾರ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ಸಾವು ಎನ್ನಲಾಗಿತ್ತು. ಆದರೆ ನಾಗೇಶ್ ಅವರನ್ನು ಮಗನೇ ಕೊಂದಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.


ಕುಣಿಗಲ್: ಪಟ್ಟಣದಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ಸಾವು ಪ್ರಕರಣಕ್ಕೆ (Murder Case) ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಂದೆಯನ್ನು ಸ್ವಂತ ಮಗನೇ ಕೊಂದು, ಬಳಿಕ ಅದನ್ನು ಶಾರ್ಟ್ ಸರ್ಕ್ಯೂಟ್ ಎಂದು ಬಿಂಬಿಸಿದ್ದ ಎಂದು ತಿಳಿದುಬಂದಿದೆ. ಮೇ 11 ರಂದು ಕುಣಿಗಲ್ ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕಾ ಘಟಕದಲ್ಲಿ ಮಾಲೀಕ ನಾಗೇಶ್ ಭಾನುವಾರ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ಸಾವು ಎನ್ನಲಾಗಿತ್ತು. ಆದರೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು, ನಾಗೇಶ್ ಅವರನ್ನು ಮಗನೇ ಕೊಂದಿರುವ ವಿಚಾರ ಬಯಲಿಗೆ ಬಂದಿದೆ.
ಐಸ್ ಕ್ರಿಂ ತಯಾರಿಕಾ ಘಟಕದಲ್ಲಿ ಮಾಲೀಕ ನಾಗೇಶ್ ಮೃತಪಟ್ಟಿದ್ದರಿಂದ, ಸಂಬಂಧಿಕರು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದ ಪೊಲೀಸರು, ಕೊನೆಗೂ ಕೊಲೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ ನಾಗೇಶ್ ಅವರ ಮಗ ಸೂರ್ಯ (19) ಮತ್ತು ಸ್ನೇಹಿತ ಸೇರಿ ಕೊಲೆ ಮಾಡಿರುವ ಸಾಕ್ಷ್ಯ ಲಭ್ಯವಾಗಿವೆ.
ಸುಳಿವು ನೀಡಿದ ಸಿಸಿಟಿವಿ
ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಘಟನೆ ನಡೆದ ದಿನ ನಾಗೇಶ್(55) ತನ್ನ ಮಗನಿಗೆ ಕಪಾಳಮೋಕ್ಷ ಮಾಡಿದ್ದರು. ಅಲ್ಲದೆ ಚಪ್ಪಲಿ ತೆಗೆದು ಅದರಿಂದ ಮಗ ಸೂರ್ಯನಿಗೆ ಹೊಡೆಯುತ್ತಾರೆ. ನಂತರ ನಾಗೇಶ್ ಸೂರ್ಯನನ್ನು ಹೊಡೆಯಲು ಕೋಲನ್ನು ಎತ್ತಿಕೊಳ್ಳುತ್ತಾರೆ. ಈ ವೇಳೆ ಮಗ ಸೂರ್ಯ, ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಾನೆ.
ಬಳಿಕ ಮಗ ಸೂರ್ಯ ಬಿಳಿ ಬಟ್ಟೆಯಿಂದ ತಂದೆಯ ಕುತ್ತಿಗೆಗೆ ಬಿಗಿದು ಕೊಂದು ಹಾಕಿದ್ದಾನೆ. ಈ ವೇಳೆ ಸೂರ್ಯನ ಸ್ನೇಹಿತ ಕೂಡ ಅಲ್ಲಿಯೇ ಇದ್ದು ಬಳಿಕ ನಾಗೇಶ್ ಅವರ ಶವವನ್ನು ಹಾಸಿಗೆ ಮೇಲೆ ಇರಿಸಿ ಅವರ ಬೆರಳುಗಳನ್ನು ಸ್ವಿಚ್ ಬೋರ್ಡ್ ತಾಗಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದೇ ವಿಡಿಯೋ ಈಗ ಅಪರಾಧಿಗಳನ್ನು ಹಿಡಿದುಕೊಟ್ಟಿದ್ದು, ಪ್ರಸ್ತುತ ಕೊಲೆ ಆರೋಪಿ ಸೂರ್ಯನನ್ನು ಬಂಧಿಸಿದ್ದು, ಆತನಿಗೆ ನೆರವು ನೀಡಿದ ಸ್ನೇಹಿತ ಪರಾರಿಯಲ್ಲಿದ್ದಾನೆ. ಅವನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ | Sofia Qureshi: ಕರ್ನಲ್ ಸೋಫಿಯಾ ಖುರೇಷಿ ಮನೆ ಮೇಲೆ RSS ದಾಳಿ ಎಂದು ಫೇಕ್ ಪೋಸ್ಟ್; ಕಿಡಿಗೇಡಿ ಅನೀಸ್ ಸ್ಥಳ ಪತ್ತೆ
ಬೆಳಗಾವಿಯಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ
ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರ (Physical Abuse) ಎಸಗಿರುವ ಘಟನೆ ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಆಕ್ರೋಶ ಹೊರಹಾಕಿದ್ದರು. ಸದ್ಯ ಈ ಘಟನೆ ಕುರಿತಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.