Child Death: ಮೂರು ವರ್ಷದ ಮಗು ನೀರಿನ ತೊಟ್ಟಿಗೆ ಬಿದ್ದು ಸಾವು
ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮಗು ಹೆತ್ತವರ ಗಮನ ತಪ್ಪಿಸಿ ನೀರಿನ ಟ್ಯಾಂಕ್ ಕಡೆಗೆ ಹೋಗಿ ಆಯತಪ್ಪಿ ಬಿದ್ದು ಮುಳುಗಿದೆ.
ತುಮಕೂರು: ಮನೆಯ ಮುಂದೆ ಆಟವಾಡುತ್ತಿದ್ದ 3 ವರ್ಷದ ಮಗುವೊಂದು ನೀರಿನ ತೊಟ್ಟಿಗೆ ಬಿದ್ದು (drowned) ಸಾವನ್ನಪ್ಪಿರುವ (Child Death) ಘಟನೆ ತುಮಕೂರು (Tumkur news) ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಡೆದಿದೆ.
ಜಿ. ಹೊಸಹಳ್ಳಿ ಗ್ರಾಮದ ಅಂಗಡಿ ಮಂಜಣ್ಣ ಎಂಬುವರ ಪುತ್ರ ಕುಶಾಲ್ (3) ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮನೆಯ ಮುಂದಿನ ನೀರಿನ ತೊಟ್ಟಿಗೆ ಮಗು ಬಿದ್ದಿದೆ. ಮಗು ಸುಮಾರು ಹೊತ್ತಾದರೂ ಕಾಣದೆ ಇದ್ದಾಗ ಕುಟುಂಬ ಸದಸ್ಯರು ಮಗುವಿನ ಹುಡುಕಾಟಕ್ಕೆ ಮುಂದಾಗಿದ್ದಾರೆ. ಆಗ ನೀರಿನ ತೊಟ್ಟಿಯಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ. ಪೋಷಕರು ಗುಬ್ಬಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡದಲ್ಲಿ ಗರ್ಭ ಧರಿಸಿದ ಹಸುವಿನ ತಲೆ ಕಡಿದು ಕ್ರೌರ್ಯ
ಕಾರವಾರ: ಬೆಂಗಳೂರಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಘಟನೆ ನಡೆದ ಬೆನ್ನಲ್ಲೇ ಹೊನ್ನಾವರದ ಸಾಲ್ಕೋಡಿನ ಕೊಂಡಕುಳಿಯಲ್ಲಿ ದುರುಳರು, ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ವಿಕೃತಿ ಮರೆದಿರುವುದು ನಡೆದಿದೆ.
ಕೊಂಡಕುಳಿ ಕೃಷ್ಣ ಆಚಾರಿ ಎಂಬುವವರ ಹಸು ಮೇವಿಗಾಗಿ ಹೊರಗಡೆ ಹೋಗಿತ್ತು. ಆದರೆ ರಾತ್ರಿ ಹಸು ಬಾರದ ಹಿನ್ನೆಲೆಯಲ್ಲಿ ಮಾಲೀಕ ಹುಡುಕಾಡಿದ್ದಾರೆ. ಆಗ ಹಸು ಹುಡುಕಲು ಹೋದ ಮಾಲೀಕನಿಗೆ ಆಘಾತ ಕಾದಿತ್ತು. ಕಿರಾತಕರು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ, ದೇಹ ತೆಗೆದುಕೊಂಡು ಹೋಗಿದ್ದಾರೆ. ತನ್ನ ಹಸುವಿನ ರುಂಡ ನೋಡಿದ ಮಾಲೀಕ ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ಹೊನ್ನಾವರ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.