ತಿಪಟೂರು, ಸೆ.1: ಕಲ್ಪತರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ) ವತಿಯಿಂದ KIT SPOC ಇನ್ನೋವೇಶನ್ - 2026 ನ್ಯಾಷನಲ್ ಇನ್ನೋವೇಶನ್ ಹ್ಯಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “Campus Ideas to National Innovation” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ನವೀನ ಆಲೋಚನೆಗಳು ಮತ್ತು ತಾಂತ್ರಿಕ ಕೌಶಲ್ಯಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿತು.
12 ಗಂಟೆಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ಈ ಹ್ಯಾಕಥಾನ್‌ನಲ್ಲಿ ವಿವಿಧ ತಂಡಗಳು ಭಾಗವಹಿಸಿ, ತಮ್ಮ ನವೀನ ಆಲೋಚನೆಗಳನ್ನು ತಾಂತ್ರಿಕ ಪರಿಹಾರಗಳಾಗಿ ರೂಪಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಂಡದ ಸಹಕಾರ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವಲ್ಲಿ ಕಾರ್ಯಕ್ರಮವು ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ಇಸ್ರೋದ U.R. Rao Satellite Centre (URSC) ಯ ECAD Facility/ACA/DF/AMFF ವಿಭಾಗದ ಟಿ.ಪಿ.ಕೃಷ್ಣಮೂರ್ತಿ, ಸುಮಂತ್ ವಿ. ಹಾಗೂ ಆರ್. ಕಿರಣ್ ಕುಮಾರ್ ಅವರು ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಮತ್ತು ತಾಂತ್ರಿಕ ಕ್ಷೇತ್ರದ ಕುರಿತು ಮಾರ್ಗದರ್ಶನ ನೀಡಿದರು.
ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ತೀರ್ಪುಗಾರರ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಹ್ಯಾಕಥಾನ್‌ನಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನಗಳನ್ನು ನೀಡಲಾಯಿತು.
Tumkur News: ಓದುವ ಸಂಸ್ಕೃತಿಯಿಂದ ವ್ಯಕ್ತಿತ್ವ ವಿಕಸನ: ವೀರೇಶಾನಂದ ಸ್ವಾಮೀಜಿ
ಪ್ರಥಮ ಬಹುಮಾನ ₹8,000 ನಗದನ್ನು ಲಕ್ಷ್ಮಿ ರವರ ತಂಡ,ದ್ವಿತೀಯ ಬಹುಮಾನ ₹5,000 ನಗದನ್ನು ಹರ್ಷಿತಾ ರವರ ತಂಡ, ಹಾಗೂ ತೃತೀಯ ಬಹುಮಾನ ₹3,000 ನಗದನ್ನು ನಂದಿನಿ ಅವರ ತಂಡ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕೆಐಟಿ ಪ್ರಾಂಶುಪಾಲ ಡಾ.ಎಚ್.ಸಿ. ಸತೀಶ್ ಕುಮಾರ್, ಡಾ.ಎಸ್. ನಂದಿನಿ, ದಿವ್ಯಾ ಸಿ ಕುಮಾರ್ ಸೇರಿದಂತೆ ಉಪನ್ಯಾಸಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.