ತುಮಕೂರು: ನಗರದ ಪ್ರಸಿದ್ಧ ‘ದೇಶದ ಗರಡಿಮನೆ’ಯ ಪ್ರತಿಭಾವಂತ ಕುಸ್ತಿಪಟು ಸಂತೋಷ್ ಯು ಅವರು ತುಮಕೂರು ದಸರಾ(Tumkur Dasara) ಕುಸ್ತಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಮೂಲಕ ಕಣಕ್ಕಿಳಿದ ಸಂತೋಷ್ ಯು, ಪಂದ್ಯದುದ್ದಕ್ಕೂ ಗಮನಾರ್ಹ ತಾಂತ್ರಿಕ ಕೌಶಲ ಮೆರೆದು ಎದುರಾಳಿಗಳನ್ನು ಮಣಿಸಿ ವಿಜಯ ಶಾಲಿಯಾದರು. ಇವರ ಈ ಸಾಧನೆಯು ತುಮಕೂರು ನಗರದ ಕ್ರೀಡಾ ಲೋಕಕ್ಕೆ, ಅದರಲ್ಲೂ ವಿಶೇಷವಾಗಿ ಸಾಂಪ್ರದಾಯಿಕ ಕುಸ್ತಿಪಟುಗಳಿಗೆ ಹೆಮ್ಮೆಯ ಕ್ಷಣವಾಗಿದೆ.
ಗೆಲುವು ಸಾಧಿಸಿರುವ ಕುಸ್ತಿಪಟು ಸಂತೋಷ್ ಯು ಅವರಿಗೆ ಕ್ರೀಡಾಭಿಮಾನಿಗಳು, ಗರಡಿಮನೆಯ ಗುರುಗಳು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.