ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತುಮಕೂರಲ್ಲಿ ಲವ್‌, ಮ್ಯಾರೇಜ್‌, ದೋಖಾ ಪ್ರಕರಣ; ಗರ್ಭಿಣಿ ಪತ್ನಿಯನ್ನು ಬಿಟ್ಟು ಮತ್ತೊಂದು ಮದುವೆಗೆ ಮುಂದಾದ ಪತಿ

Tumkur News: ಗರ್ಭಿಣಿ ಪತ್ನಿಯನ್ನು ಬಿಟ್ಟು ಪತಿ ಮತ್ತೊಂದು ಮದುವೆಯಾಗಲು ಹೊರಟು ಸಿಕ್ಕಿಬಿದ್ದಿರುವ ಘಟನ ತಮಕೂರಿನಲ್ಲಿ ನಡೆದಿದೆ. ತುಮಕೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿರುವ ಸಂತ್ರಸ್ತೆ ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆಯ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಚಾಟ್‌ಜಿಪಿಟಿ ರಚಿತ ಚಿತ್ರ

ತುಮಕೂರು, ಮೇ 6: ಅವರಿಬ್ಬರು ವರ್ಷಗಳ ಕಾಲ ಜತೆಗಿದ್ದರು. ಸುಮಾರು 7 ವರ್ಷಗಳ ಪ್ರೀತಿ. ಮನೆಯವರ ವಿರೋಧ ನಡುವೆಯೂ ಮದುವೆಯಾದರು. ಇದೀಗ ಪ್ರೀತಿಯ ಅಮಲು ತಲೆಯಿಂದ ಇಳಿದಿದ್ದು, ಗರ್ಭಿಣಿ ಪತ್ನಿಯನ್ನು ಬಿಟ್ಟು ಪತಿ ಮತ್ತೊಂದು ಮದುವೆಯಾಗಲು ಹೊರಟು ಸಿಕ್ಕಿಬಿದ್ದಿದ್ದಾನೆ. ಹೀಗೆ ವರ್ಷಗಳ ಕಾಲದ ಲವ್‌ ಸ್ಟೋರಿಯೊಂದು ಕುಸಿದುಬಿದ್ದಿದೆ. ಪತಿಯ ವರ್ತನೆಯಿಂದ ಕಂಗಾಲಾದ ಪತ್ನಿ ಇದೀಗ ಕಾನೂನು ಸಮರಕ್ಕೆ ಮುಂದಾಗಿದ್ದಾಳೆ. ತುಮಕೂರಿನಲ್ಲಿ (Tumkur News) ಈ ಘಟನೆ ನಡೆದಿದೆ.

ಸಂತ್ರಸ್ತೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಮೂಲದವಳು. ಆಕೆ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಬೆನ್ನು ಬಿದ್ದು ಜೆರಾಕ್ಸ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬೊಮ್ಮಾ ನಾಯಕ್ ಪ್ರೀತಿಸುತ್ತಿದ್ದ. ಕೊನೆಗೆ ಆಕೆಯೂ ಆತನನ್ನು ಲವ್‌ ಮಾಡತೊಡಗಿದಳು. ಹೀಗೆ 7 ವರ್ಷಗಳ ಕಾಲ ಇವರು ಪ್ರೇಮಪಕ್ಷಿಗಳಂತೆ ಓಡಾಡಿದರು.

ಪ್ರಿಯಕರನ ಜತೆ ಹೆಂಡತಿ ಪರಾರಿಯಾಗಿದ್ದಕ್ಕೆ ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ

ವಿರೋಧದ ನಡುವೆಯೂ ಮದುವೆ

ಒಂದೂವರೆ ವರ್ಷಗಳ ಹಿಂದ ಇವರಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಬಿತ್ತು. ಮನೆಯವರ ವಿರೋಧದ ನಡುವೆಯೂ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ಆಕೆ ಗರ್ಭಿಣಿಯಾಗಿದ್ದು, ಬೊಮ್ಮಾ ನಾಯಕ್‌ ಆಕೆಗೆ ಕೈಕೊಟ್ಟು ಮತ್ತೊಂದು ಮದುವೆಯಾಗಲು ಮುಂದಾಗಿದ್ದಾನೆ. ಇದರಿಂದ ಮನನೊಂದು ಸಂತ್ರಸ್ತೆ ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ.

ಗರ್ಭಿಣಿಯಾಗುತ್ತಲೇ ಈ ಮದುವೆಗೆ ತನ್ನ ಮನೆಯವರ ವಿರೋಧ ಇದೆ ಎಂದು ನೆಪವೊಡ್ಡಿ ಬೇರೊಂದು ಮದುವೆಯಾಗಲು ಹೊರಟಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ʼʼನಾವಿಬ್ಬರೂ 7 ವರ್ಷ ಪ್ರೀತಿಸುತ್ತಿದ್ದೆವು. ಬೇರೆ ಬೇರೆ ಜಾತಿಯಾದ್ದರಿಂದ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಮದುವೆಯಾದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಇದೀಗ ನಾನು ಗರ್ಭಿಣಿಯಾಗುತ್ತಿದ್ದಂತೆ​ ಕಿರುಕುಳ ಕೊಡುತ್ತಿದ್ದಾನೆ. ಆತನ ಮನೆಯವರು ಬೇರೊಂದು ಹುಡುಗಿ ನೋಡಿದ್ದು, ಈತ ಮದುವೆಯಾಗಲು ಮುಂದಾಗಿದ್ದಾನೆʼʼ ಎಂದು ಆರೋಪಿಸಿದ್ದಾಳೆ.

ಎಂಟು ಮಂದಿಯನ್ನು ವಿವಾಹವಾಗಿ ಯಾಮಾರಿಸಿದ ಖತರ್ನಾಕ್ ಮಹಿಳೆ; ಒಂಭತ್ತನೇ ಮದುವೆ ವೇಳೆ ಬಯಲಾಯ್ತು ವಂಚಕಿಯ ಮುಖವಾಡ

ತುಮಕೂರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿರುವ ಸಂತ್ರಸ್ತೆ ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆಯ ಪ್ರಕರಣ ದಾಖಲಿಸಿದ್ದಾಳೆ. ʼʼನಾನು ಈಗ 6 ತಿಂಗಳ ಗರ್ಭಿಣಿ. ನನಗೆ ಪತಿ ಬೇಕು. ನ್ಯಾಯ ಬೇಕು. ಹುಟ್ಟುವ ಮಗುವಿಗೆ ಅಪ್ಪ ಬೇಕು. ನ್ಯಾಯ ಕೊಡಿಸಿ'' ಎಂದು ಮನವಿ ಮಾಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಬೊಮ್ಮಾ ನಾಯಕ್, ಆತನ ತಾಯಿ ಕರಿಯಮ್ಮ ಸೇರಿದಂತೆ ನಾಲ್ವರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author