ಎಂಟು ಮಂದಿಯನ್ನು ವಿವಾಹವಾಗಿ ಯಾಮಾರಿಸಿದ ಖತರ್ನಾಕ್ ಮಹಿಳೆ; ಒಂಭತ್ತನೇ ಮದುವೆ ವೇಳೆ ಬಯಲಾಯ್ತು ವಂಚಕಿಯ ಮುಖವಾಡ
marriage scam: ಎಂಟು ಬಾರಿ ಮದುವೆಯಾಗಿದ್ದ ವಂಚಕಿಯೊಬ್ಬಳು, 9ನೇ ವಿವಾಹವೂ ಆದಳು. ಈ ವೇಳೆ ಆಕೆಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದರು. ಆದರೆ, ಮದುವೆಯಾದ ಸ್ವಲ್ಪ ಸಮಯದ ನಂತರ, ವಧುವಿನ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಅನುಮಾನಗಳು ಹುಟ್ಟಿಕೊಂಡವು.
ಎಂಟು ಮಂದಿಯನ್ನು ವಿವಾಹವಾಗಿ ವಂಚಿಸಿದ ಖತರ್ನಾಕ್ ಮಹಿಳೆ -
ಮುಂಬೈ, ಮೇ 6: ವಂಚನೆ ಮಾಡುವ ಮೂಲಕ ಮದುವೆಯಾಗಿ ಜನರನ್ನು ಲೂಟಿ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಎಂಟು ಬಾರಿ ಮದುವೆಯಾಗಿದ್ದ ವಂಚಕಿಯೊಬ್ಬಳು, (Crime News) 9ನೇ ವಿವಾಹವೂ ಆದಳು. ಒಂಭತ್ತನೇ ಮದುವೆ ಬಳಿಕ ಆಕೆಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬೀಡ್‌ನ ಉಮಾಪುರ ಗ್ರಾಮದ ವ್ಯಕ್ತಿಯನ್ನು ಮದುವೆಯಾದ ನಂತರ ವಂಚಕಿಯ ಬಣ್ಣ ಬಯಲಾಗಿದೆ.
ಈ ಜಾಲದ ಹಲವಾರು ಏಜೆಂಟರು ಆ ವ್ಯಕ್ತಿಯನ್ನು ವೈವಾಹಿಕ ಬಲೆಗೆ ಬೀಳಿಸಿ, ಮದುವೆಯ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದರು. ಆದರೆ, ಮದುವೆಯಾದ ಸ್ವಲ್ಪ ಸಮಯದ ನಂತರ, ವಧುವಿನ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಅನುಮಾನಗಳು ಹುಟ್ಟಿಕೊಂಡವು. ಆಕೆ ಈಗಾಗಲೇ ಎಂಟು ಪುರುಷರನ್ನು ವಂಚಿಸಿ ವಿವಾಹವಾಗಿದ್ದು, ಪ್ರತಿಯೊಬ್ಬರನ್ನೂ ಲೂಟಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ವಂಚನೆ ಬಯಲಾಗುತ್ತಿದ್ದಂತೆ, ಸಂತ್ರಸ್ತ ವ್ಯಕ್ತಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಸಂಪರ್ಕಿಸಿದರು. ನಂತರ ಪೊಲೀಸರು ಈ ವಿಷಯದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಗ್ಯಾಂಗ್‌ನ ಇತರ ಸದಸ್ಯರಿಗಾಗಿ ಹುಡುಕಾಟ ನಡೆಯುತ್ತಿದೆ.
ನನ್ನ ಸ್ವಂತ ಮನೆಗೆ ಭೇಟಿ ನೀಡಲು ಅನುಮತಿ ಬೇಕೆ? ಪಿತೃ ಪ್ರಧಾನ ಮದುವೆ ಸಂಪ್ರದಾಯದ ವಿರುದ್ಧ ಯುವತಿ ಆಕ್ರೋಶ
ಮದುವೆ ಮುಗಿಯುತ್ತಿದ್ದಂತೆಯೇ ಪತಿ ಬಳಿ ಭರ್ಜರಿ ಡಿಮ್ಯಾಂಡ್ ಇಟ್ಟ ಪತ್ನಿ
ವಧುವೊಬ್ಬಳು ತನ್ನ ಮದುವೆಯ ಮೊದಲ ರಾತ್ರಿ ಗಂಡನಿಗೆ ವಿಶಿಷ್ಟ ಬೇಡಿಕೆಯಿಟ್ಟಿದ್ದಳು. ಮುಖಕ್ಕೆ ಹಾಕಿರುವ ಮುಸುಕು ತೆಗೆಯಬೇಕೆಂದರೆ 90 ಲಕ್ಷ ರುಪಾಯಿ ಕೊಡಬೇಕೆಂದು ಆಗ್ರಹಿಸಿದ್ದಳು. ಪತಿ 90 ಲಕ್ಷ ರುಪಾಯಿ ನೀಡುವವರೆಗೂ ಆತನೊಂದಿಗೆ ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದಲು ಪತ್ನಿ ನಿರಾಕರಿಸಿದ್ದಳು ಎಂದು ಆರೋಪಿಸಲಾಗಿತ್ತು. ಉತ್ತರ ಪ್ರದೇಶದ ಆಗ್ರಾದಲ್ಲಿ ಘಟನೆ ನಡೆದಿತ್ತು.
ಆಗ್ರಾ ನಿವಾಸಿಗಳಾದ ಗೌರವ್ ಮತ್ತು ಕಲ್ಪನಾ ಸುಮಾರು ಒಂದು ವರ್ಷದ ಹಿಂದೆ ಏಪ್ರಿಲ್ 29ರಂದು ವಿವಾಹವಾದರು. ಆದರೆ ಫಸ್ಟ್ ನೈಟ್ ಒಂದು ದಿನವೂ ನಡೆಯಲಿಲ್ಲ. ಗೌರವ್‌ನ ಸಹೋದರಿ ಮುಸ್ಕಾನ್ ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಕಲ್ಪನಾ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದ್ದಾಳೆ. ಬದಲಾಗಿ ಆತನನ್ನು ಅವಮಾನಿಸಿದ್ದಾಳೆ ಎಂದು ವಿವರಿಸಲಾಗಿತ್ತು.