ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುವ ಬಾಕ್ಸರ್ ಪ್ರಕುಲ್ ಸಾಯಿಗೆ ಐಸಿಎಸ್‍ಇ ಪ್ರಾದೇಶಿಕ ಕ್ರೀಡಾಕೂಟದಲ್ಲಿ ಚಿನ್ನ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

Tumkur News: ತುಮಕೂರು ನಗರದ ಬಿಷಪ್ ಸಾರ್ಜೆಂಟ್ ಶಾಲೆಯ ವಿದ್ಯಾರ್ಥಿ ಹಾಗೂ ತುಮಕೂರು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಉದಯೋನ್ಮುಖ ಬಾಕ್ಸರ್ ಪ್ರಕುಲ್ ಸಾಯಿ ಎಂ., ಇದೇ ಸೆಪ್ಟೆಂಬರ್ 3 ಮತ್ತು 4 ರಂದು ನಡೆದ ಯು-17 ಐಸಿಎಸ್‍ಇ ಪ್ರಾದೇಶಿಕ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತುಮಕೂರು, ಸೆ.09: ನಗರದ ಬಿಷಪ್ ಸಾರ್ಜೆಂಟ್ ಶಾಲೆಯ ವಿದ್ಯಾರ್ಥಿ ಹಾಗೂ ತುಮಕೂರು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಉದಯೋನ್ಮುಖ ಬಾಕ್ಸರ್ ಪ್ರಕುಲ್ ಸಾಯಿ ಎಂ., ಇದೇ ಸೆಪ್ಟೆಂಬರ್ 3 ಮತ್ತು 4 ರಂದು ನಡೆದ ಯು-17 ಐಸಿಎಸ್‍ಇ ಪ್ರಾದೇಶಿಕ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ತುಮಕೂರು ಜಿಲ್ಲೆಗೆ (Tumkur News) ಕೀರ್ತಿ ತಂದಿದ್ದಾರೆ.

ತೂಕದ ವಿಭಾಗ: 52–54 ಕೆಜಿ ವಿಭಾಗ

ಯು-17 ಐಸಿಎಸ್‍ಇ ಪ್ರಾದೇಶಿಕ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆದ ತುಮಕೂರಿನ ಮೊದಲ ಬಾಕ್ಸರ್ ಎಂಬ ಐತಿಹಾಸಿಕ ದಾಖಲೆಯನ್ನು ಪ್ರಕುಲ್ ಬರೆದಿದ್ದಾರೆ. ಇವರು ತುಮಕೂರು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯಲ್ಲಿ ಕೋಚ್ ಮೋನಿಕಾ ಕೆ. ಅವರ ತರಬೇತಿಯಲ್ಲಿ ತಮ್ಮ ಕೌಶಲವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.

ಗಣ್ಯರ ಅಭಿನಂದನೆ

ಪ್ರಕುಲ್ ಸಾಯಿ ಅಪರೂಪದ ಸಾಧನೆಗೆ ತುಮಕೂರು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ಚಂದ್ರ ಕುಮಾರ್ ಬಿ.ಕೆ. ಅವರು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಯ ಶಿಸ್ತು, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿ ಮುಂಬರುವ ರಾಷ್ಟ್ರ ಮಟ್ಟದ ಸ್ಪರ್ಧೆಗಾಗಿ ಶುಭ ಹಾರೈಸಿದ್ದಾರೆ.

ತುಮಕೂರಿನಲ್ಲಿ ‘ಹಾರ್ಟ್ ಸೇಫ್ ತುಮಕೂರು'-ಸಿಪಿಆರ್ ಜಾಗೃತಿಗೆ ಡಾ.ಜಿ.ಪರಮೇಶ್ವರ್‌ ಚಾಲನೆ

ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ತುಮಕೂರು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಈ ಹೆಮ್ಮೆಯ ಕ್ಷಣವು, ಜಿಲ್ಲೆಯಲ್ಲಿ ಬಾಕ್ಸಿಂಗ್ ಕ್ರೀಡೆಯ ಭವಿಷ್ಯ ಮತ್ತಷ್ಟು ಉಜ್ವಲಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಪ್ರಕುಲ್ ಸಾಯಿ ಎಂ. ಅವರು ಮತ್ತಷ್ಟು ಪದಕಗಳನ್ನು ಗೆದ್ದು ತುಮಕೂರಿಗೆ ಹೆಮ್ಮೆ ತರಲಿ ಎಂದು ಕ್ರೀಡಾಪಟುಗಳು ಹಾರೈಸಿದ್ದಾರೆ.