ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರಿನಲ್ಲಿ ‘ಹಾರ್ಟ್ ಸೇಫ್ ತುಮಕೂರು'-ಸಿಪಿಆರ್ ಜಾಗೃತಿಗೆ ಡಾ.ಜಿ.ಪರಮೇಶ್ವರ್‌ ಚಾಲನೆ

Dr G Parameshwar: ತುಮಕೂರು ಜಿಲ್ಲೆಯಾದ್ಯಂತ ಸಿಪಿಆರ್ ಕುರಿತು ಜಾಗೃತಿ ಜಾಥಾ ಮತ್ತು ಸಾರ್ವಜನಿಕವಾಗಿ ತರಬೇತಿಯನ್ನು ನೀಡುವ ಉದ್ದೇಶದಿಂದ 'ಹಾರ್ಟ್ ಸೇಫ್ ತುಮಕೂರುʼ ಅಭಿಯಾನಕ್ಕೆ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಚಾಲನೆ ನೀಡಿದ್ದಾರೆ.

ತುಮಕೂರಿನಲ್ಲಿ ಸಿಪಿಆರ್ ಜಾಗೃತಿಗೆ ಡಾ.ಜಿ.ಪರಮೇಶ್ವರ್‌ ಚಾಲನೆ

-

Profile
Siddalinga Swamy Sep 8, 2026 7:15 PM

ತುಮಕೂರು, ಸೆ.08: ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಹಾರ್ಟ್ ಸೆಂಟರ್ ಹಾಗೂ ಕಾರ್ಡಿಯೋಥೊರಾಸಿಕ್ ಮತ್ತು ತುಮಕೂರು ಜಿಲ್ಲಾಡಳಿತ ವತಿಯಿಂದ ಜಿಲ್ಲೆಯಾದ್ಯಂತ ಜನರಿಗೆ ನೇರವಾಗಿ ಸಿಪಿಆರ್ ಕುರಿತಾದ ಅರಿವು ಮತ್ತು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ತಲುಪಿಸುವ ಉದ್ದೇಶದಿಂದ ರೂಪಿಸಲಾದ 'ಹಾರ್ಟ್ ಸೇಫ್ ತುಮಕೂರುʼ ಎಂಬ ಘೋಷಣೆಯೊಂದಿಗೆ ಮಾಸಿಕ ಸಾರ್ವಜನಿಕ ಆರೋಗ್ಯ ಅಭಿಯಾನಕ್ಕೆ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಜಿ. ಪರಮೇಶ್ವರ್ (Dr G Parameshwar) ಚಾಲನೆ ನೀಡಿದರು.

ಈ ಮಾಸಿಕ ಅಭಿಯಾನವು ಸೆಪ್ಟೆಂಬರ್‌ 7ರಿಂದ ಅಕ್ಟೋಬರ್ 2ರಂದು ಆಚರಿಸಲಾಗುವ 'ವಿಶ್ವ ಹೃದಯ ದಿನ'ದವರೆಗೆ ನಡೆಯಲಿದೆ. ತುಮಕೂರು ಜಿಲ್ಲೆಯಾದ್ಯಂತ ಸಿಪಿಆರ್ ಕುರಿತು ಜಾಗೃತಿ ಜಾಥಾ ಮತ್ತು ಸಾರ್ವಜನಿಕವಾಗಿ ತರಬೇತಿಯನ್ನು ನೀಡುವ ಉದ್ದೇಶದಿಂದ 'ಹಾರ್ಟ್ ಸೇಫ್ ತುಮಕೂರುʼ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಸಂಚಾರಿ ಅಭಿಯಾನವು ತುಮಕೂರಿನ ವಿವಿಧ ಜನ ಸಮುದಾಯಗಳನ್ನು ತಲುಪಲಿದೆ. ಸೆ.7ರಿಂದ ಆರಂಭಗೊಂಡು ಅಕ್ಟೋಬರ್ 2 ರಂದು ಮುಕ್ತಾಯವಾಗಲಿದೆ.

ʼಹಾರ್ಟ್ ಸೇಫ್ ತುಮಕೂರು' ಸಿಪಿಆರ್ ಅಭಿಯಾನಕ್ಕೆ ಚಾಲನೆ ನೀಡಿದ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಹಠಾತ್ ಹೃದಯಾಘಾತ ಸಂಭವಿಸಿದಾಗ ಆಸ್ಪತ್ರೆಗೆ ತಲುಪುವ ಮೊದಲು ನೀಡುವ ಸಿಪಿಆರ್ ಪ್ರಾಣ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ 'ಹಾರ್ಟ್ ಸೇಫ್ ತುಮಕೂರು' ಅಭಿಯಾನದ ಮೂಲಕ 320 ಗ್ರಾಮ ಪಂಚಾಯಿತಿಗಳ ಯುವಜನರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಪಿಆರ್ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕಾರ್ಡಿಯೋಥೊರಾಸಿಕ್ ಮುಖ್ಯಸ್ಥರಾದ ಡಾ. ತಮೀಮ್ ಅಹ್ಮದ್ ಹಾಗೂ ಅವರ ವೈದ್ಯಕೀಯ ತಂಡ ನೀಡುತ್ತಿರುವ ಸೇವೆಯನ್ನು ಪ್ರಶಂಸಿಸದರು. ಇದುವರೆಗೂ ಈ ಕೇಂದ್ರದಿಂದ 10 ಸಾವಿರಕ್ಕೂ ಹೆಚ್ಚು ಪ್ರಕಿಯೆಗಳು, 500ಕ್ಕೂ ಹೆಚ್ಚು ಯಶಸ್ವಿ ಓಪನ್ ಹಾರ್ಟ್ ಸರ್ಜರಿಗಳು ನಡೆದು ಸಾವಿರಾರು ಜನರ ಪ್ರಾಣ ಉಳಿದಿದೆ ಎಂದು ಹೇಳಿದರು. ‌

ಶೀಘ್ರದಲ್ಲೇ ಇನ್ನೂ 25 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆ: ಡಿಸಿಎಂ ಡಾ.ಜಿ.ಪರಮೇಶ್ವರ್‌

ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕಾರ್ಡಿಯೋಥೊರಾಸಿಕ್ ಮುಖ್ಯಸ್ಥರಾದ ಡಾ. ತಮೀಮ್ ಅಹ್ಮದ್ ಅಭಿಯಾನದ ನೇತೃತ್ವ ವಹಿಸಿ ಮಾತನಾಡಿದರು. ಎಸ್‌ಪಿ ಅಶೋಕ್, ಸಿಇಒ ಅಶ್ವಿಜಾ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ. ಲಿಂಗೇಗೌಡ, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರ ಡಾ.ವಿವೇಕ್ ವೀರಯ್ಯ, ಪ್ರಾಂಶುಪಾಲ ಡಾ. ಸಾಣಿಕೊಪ್ಪ, ಉಪ ಪಾಂಶುಪಾಲ ಡಾ. ಪ್ರಭಾಕರ್, ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಆಸ್ಪತೆಯ ಪಾಂಶುಪಾಲ ಡಾ. ಪ್ರವೀಣ್ ಡಿ.ಕುಡುವ, ಅಧೀಕ್ಷಕ ಡಾ.ವೆಂಕಟೇಶ್, ತುಮಕೂರು ರೋಟರಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.