ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಅಂಬೇಡ್ಕರ್ ಜಯಂತೋತ್ಸವ ದೇಶಾದ್ಯಂತ ನಡೆಯುವ ದಲಿತರ ಹಬ್ಬ : ಗೂಳೂರು ಸಿದ್ದರಾಜು

ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಯುವ ಪೀಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಆದರ್ಶವನ್ನು ಪಾಲಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಒಳ ಮೀಸಲಾತಿ (Inner Reservation) ಜಾರಿಗೊಳಿಸಲು ತಾಲೂಕಿನ ಎಲ್ಲಾ ದಲಿತ ಬಂಧು ಗಳು ಒಗ್ಗಟ್ಟಿನ ಪ್ರದರ್ಶನ ತೋರಿಸಬೇಕು

ಗುಬ್ಬಿ: ಲಿಖಿತವಾಗಿ ಸಂವಿಧಾನ ರಚಿಸಿ ವಿಶ್ವವೇ ಮೆಚ್ಚಿದ ಮಹಾನ್ ನಾಯಕ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಜಯಂತೋತ್ಸವ ದೇಶಾದ್ಯಂತ ನಡೆಯುವ ದಲಿತರ ಹಬ್ಬ ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ತಿಳಿಸಿದರು. 

ಪಟ್ಟಣದಲ್ಲಿ ದಲಿತ ಸೇನೆ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟಗಳ ವತಿಯಿಂದ ನಡೆದ 135ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ 118ನೇ ಡಾ.ಬಾಬು ಜಗಜೀವನ ರಾಮ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ ದರು.

ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಯುವ ಪೀಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಆದರ್ಶವನ್ನು ಪಾಲಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಒಳ ಮೀಸಲಾತಿ (Inner Reservation) ಜಾರಿಗೊಳಿಸಲು ತಾಲೂಕಿನ ಎಲ್ಲಾ ದಲಿತ ಬಂಧು ಗಳು ಒಗ್ಗಟ್ಟಿನ ಪ್ರದರ್ಶನ ತೋರಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Gubbi News: ಏ.22 ಹಾಗೂ 23 ರಂದು ಗುಬ್ಬಿ ಶ್ರೀ ಮಹೇಶ್ವರಮ್ಮ ದೇವಿ ದೇವಾಲಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ

ದಸಂಸ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಒಳ ಮೀಸಲಾತಿ ವಿಚಾರ ವಾಗಿ 101 ಜಾತಿಗಳಲ್ಲಿ ಎಲ್ಲರಿಗೂ ಕೂಡ ಸರಿಸಮಾನವಾಗಿ ಹಂಚಿಕೆ ಮಾಡಲು ಸರ್ಕಾರ ಆಯೋಗ ರಚನೆ ಮಾಡಿ 'ನಾಳೆ ಬಾ' ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇದೇ ತಿಂಗಳ 24 ನೇ ತಾರೀಖಿನಂದು ಸಚಿವ ಸಂಪುಟ ಸಭೆ ಕರೆದು ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಅತಿ ವೇಗವಾಗಿ ಸಮಸ್ಯೆ ಪರಿಹಾರ ಮಾಡಬೇಕು. ಸರ್ಕಾರ ಜಾತಿಗಳ ಮಧ್ಯೆ ಗೊಂದಲ ಸೃಷ್ಟಿಸುವ ವಾತಾವರಣ ಮಾಡಬಾರದು ಎಂದರು.

ಇದೇ ಸಂದರ್ಭದಲ್ಲಿ ಕಲಾವಿದ ಎಚ್ ಸಿ ನರಸಿಂಹಮೂರ್ತಿ ಹೊಸಕೆರೆ, ಎಂ ಕೆ ಮೋಹನ್ ಕುಮಾರ್, ನವೀನ್ ಕುಮಾರ್ ತಂಡದವರಿಂದ ಕ್ರಾಂತಿ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ದಲಿತ ಸೇನೆ ತಾಲೂಕು ಅಧ್ಯಕ್ಷ ಶಿವರಾಜು, ಡಿಎಸ್ಎಸ್ ಮುಖಂಡರಾದ ದೊಡ್ಡಯ್ಯ ಗುಬ್ಬಿ, ಆಟೋ ಮಂಜುನಾಥ್, ಅದಲಗೆರೆ ಈಶ್ವರಯ್ಯ, ನಟರಾಜು ಕುಂದರನಹಳ್ಳಿ, ಬಸವರಾಜು, ವಿಜಯಮ್ಮ, ಶಿವಮ್ಮ ರಾಘವೇಂದ್ರ, ಕುಮಾರ್, ಮನೋಹರ್, ರಾಜಪ್ಪ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಚರಣ್ , ಹನುಮಂತರಾಯ, ಹಾಜರಿದ್ದರು.