ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಲ್ಲೂರಿನ ವಿಶೇಷ ಪೂಜೆ, ಉಡುಪಿ ಮಠದಲ್ಲಿ ಪರ್ಯಾಯ ಪೀಠಾಧೀಶರಿಂದ ಆಶೀರ್ವಾದ ಪಡೆದ ಅನಂತ್ ಅಂಬಾನಿ

ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಅವರು ಭಾನುವಾರ ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ಮತ್ತು ರಾತ್ರಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಸಂಗ್ರಹ ಚಿತ್ರ

ಉಡುಪಿ: ರಾಜ್ಯದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ (Kollur Mookambika Temple) ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ (Sri Krishna Math) ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Ananth Ambani) ಅವರು ಭಾನುವಾರ ಭೇಟಿ ನೀಡಿದರು. ಅವರ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅವರು ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪಯಣಿಸಿದ್ದರು. ದೇವಸ್ಥಾನದಲ್ಲಿ ಅವರನ್ನು ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಮತ್ತು ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಮಂಗಳಾರತಿ ಮತ್ತು ಪವಿತ್ರ ಪ್ರಸಾದವನ್ನು ಸ್ವೀಕರಿಸಿದರು. ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗ ಮತ್ತು ನಿತ್ಯಾನಂದ ಅಡಿಗ, ಅರ್ಚಕರಾದ ವಿಘ್ನೇಶ್ ಅಡಿಗ ಮತ್ತು ಸುರೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ವಿಶೇಷ ವಿಧಿವಿಧಾನಗಳು ಮತ್ತು ಪ್ರಾರ್ಥನೆಗಳನ್ನು ನಡೆಸಲಾಯಿತು.

ಬೆಚ್ಚನೆ ಅಪ್ಪುಗೆ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯ ಸ್ವಾಗತ ಕೋರಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌

ಬಳಿಕ ದೇವಾಲಯದ ಆಡಳಿತ ಮಂಡಳಿಯ ಪರವಾಗಿ ಆಡಳಿತ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಟಗರ್ಸೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಅನಂತ್ ಅಂಬಾನಿ ಅವರನ್ನು ಸನ್ಮಾನಿಸಿ, ದೇವಾಲಯದ ಪ್ರಸಾದವನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಾಲಯ ನಿರ್ವಹಣಾ ಸಮಿತಿ ಸದಸ್ಯರಾದ ಡಾ. ಪಿ.ವಿ. ಅಭಿಲಾಷ್, ಯು. ರಾಜೇಶ್ ಕಾರಂತ್, ಆಲೂರು ರಘುರಾಮ್ ದೇವಾಡಿಗ, ಸುರೇಂದ್ರ ಶೆಟ್ಟಿ, ಧನಾಕ್ಷಿ ಪೂಜಾರಿ ಮತ್ತು ಸುಧಾ ಬೈಂದೂರು ಉಪಸ್ಥಿತರಿದ್ದರು.

anan

ಕೊಲ್ಲೂರಿನಿಂದ ಉಡುಪಿ ಶ್ರೀಕೃಷ ಮಠಕ್ಕೆ ಆಗಮಿಸಿದ ಅನಂತ್ ಅಂಬಾನಿ ಶ್ರೀ ಕೃಷ್ಣನ ದರ್ಶನ ಪಡೆದು ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಆಶೀರ್ವಾದ ಪಡೆದರು.

ಶಿರೂರು ಮಠದ ದಿವಾನ್ ಉದಯ್ ಕುಮಾರ್ ಸರಳತ್ತಾಯ, ಪಂಡಿತ್ ಚಂದ್ರಶೇಖರ ಶರ್ಮಾ, ಕರ್ನಾಟಕ ರಿಲಯನ್ಸ್ ಜಿಯೋ ವ್ಯವಸ್ಥಾಪಕ ಧನಂಜಯ ಆರ್., ಶಿವಾನಂದ ಯು.ಎಸ್., ಮುಂಬೈ ಮೂಲದ ಉದ್ಯಮಿಗಳಾದ ಮಾಧವ ಶಾನಭಾಗ್, ಜಯಪ್ರಕಾಶ್ ಶೆಟ್ಟಿ ಮತ್ತು ಉಮೇಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಭಕ್ತಿಪೂರ್ವಕವಾಗಿ ಬೆಳ್ಳಿಯ ಖಡ್ಗ ಅರ್ಪಿಸಿದ್ದರು. ಇದೀಗ ಅನಂತ್ ಅಂಬಾನಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅನಂತ್ ಅಂಬಾನಿ ಜೊತೆ ಅವರ ಕುಟುಂಬದ ಗುರೂಜಿ ಕೂಡ ದೇವಿಯ ದರ್ಶನಕ್ಕೆ ಆಗಮಿಸಿದ್ದರು.

ಅನಂತ್ ಅಂಬಾನಿ ಅವರು ಜೂನ್ 13ರಂದು ಕೊಲ್ಲೂರಿಗೆ ಬರುವ ಯೋಜನೆ ಹಾಕಿಕೊಂಡಿದ್ದರು. ಆದರೆ ಅದು ಮುಂಬೈನಲ್ಲಿ ಭಾರಿ ಮಳೆಯಾಗಿದ್ದರಿಂದ ಅವರ ಪ್ರವಾಸ ಮುಂದೂಡಲಾಗಿತ್ತು.

ಟಿಎಂಸಿಯ ಪ್ರಮುಖ ಹುದ್ದೆಯಿಂದ ಸಾಯೋನಿ ಘೋಷ್, ಮಾಲಾ ರಾಯ್ ವಜಾ; ಆಂತರಿಕ ಬಿಕ್ಕಟ್ಟಿನ ನಡುವೆ ಮಮತಾ ಬ್ಯಾನರ್ಜಿ ದೃಢ ನಿರ್ಧಾರ

ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗನಾಗಿರುವ ಅನಂತ್ ಅಂಬಾನಿ ಅವರು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್, ರಿಲಯನ್ಸ್ ರಿಟೇಲ್ ವೆಂಚರ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಮಂಡಳಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಇವರು ಆರ್‌ಐಎಲ್‌ನ ನವೀಕರಿಸಬಹುದಾದ ಇಂಧನ ವಿಭಾಗದ ನೇತೃತ್ವ ವಹಿಸಿದ್ದಾರೆ. ಇದರೊಂದಿಗೆ ಸೌರಶಕ್ತಿ ಮತ್ತು ಸಂಗ್ರಹಣಾ ಉತ್ಪಾದನೆಯನ್ನು ಒಳಗೊಂಡಿರುವ ಜಾಮ್‌ನಗರದಲ್ಲಿರುವ ಧೀರೂಭಾಯಿ ಅಂಬಾನಿ ಹಸಿರು ಇಂಧನ ಗಿಗಾ ಸಂಕೀರ್ಣದ ಅಭಿವೃದ್ಧಿಗೆ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author