ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MAHE: ʼಎಐ ಯುಗದಲ್ಲಿ ಮರುಅನ್ವೇಷಣೆʼ: ಮಾಹೆಯ 33ನೇ ಘಟಿಕೋತ್ಸವದಲ್ಲಿ ಕಿವಿಮಾತು

ಎರಡನೇ ದಿನದ ಘಟಿಕೋತ್ಸವದಲ್ಲಿ, 48 ಪಿಎಚ್‌ಡಿ ಪದವೀಧರರು ಸೇರಿ ಒಟ್ಟು 1,651 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಮೂರು ವಿದ್ಯಾರ್ಥಿಗಳು ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕವನ್ನು ಮುಡಿ ಗೇರಿಸಿ ಕೊಂಡರು.

ಘಟಿಕೋತ್ಸವದ ಎರಡನೇ ದಿನ, 1,651 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

  • 48 ವಿದ್ಯಾರ್ಥಿಗಳು ಪಿಎಚ್‌ಡಿ (PhD) ಪದವಿ.
  • ಅತ್ಯತ್ತಮ 3 ವಿದ್ಯಾರ್ಥಿಗಳಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ

ಮಣಿಪಾಲ್‌: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾ ಲಯ ( Manipal Academy of Higher Education (MAHE) University) ಎಂದು ಪರಿಗಣಿತ ವಾದ ಉತ್ಕೃಷ್ಟ ಸಂಸ್ಥೆಯು 33ನೇ ಘಟಿಕೋತ್ಸವದ ಸಂಭ್ರಮದಲ್ಲಿದ್ದು, ಮಣಿಪಾಲದಲ್ಲಿ ನಡೆದ ಎರಡನೇಯ ದಿನದ ಸಮಾರಂಭವು ವಿದ್ಯಾರ್ಥಿಗಳ ಸಾಧನೆ, ಕನಸುಗಳ ಅನಾವರಣಕ್ಕೆ ವೇದಿಕೆಯಾಗಿತ್ತು.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ-2025ರಲ್ಲಿ (ಎನ್‌ಐಆರ್‌ಎಫ್‌) ವಿಶ್ವವಿದ್ಯಾ ಲಯಗಳ ವಿಭಾಗದಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ಮಾಹೆಯು ಭಾರತೀಯ ಉನ್ನತ ಶಿಕ್ಷಣದಲ್ಲಿ ತನ್ನ ನಾಯಕತ್ವವನ್ನು ಪುನರುಚ್ಚರಿಸಿದೆ. ಮಾಹೆ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ವಸಂತಿ ಆರ್‌. ಪೈ, ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್‌ ಮತ್ತು ಅತಿಥಿಗಳು ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಎರಡನೇ ದಿನದ ಘಟಿಕೋತ್ಸವದಲ್ಲಿ, 48 ಪಿಎಚ್‌ಡಿ ಪದವೀಧರರು ಸೇರಿ ಒಟ್ಟು 1,651 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಮೂರು ವಿದ್ಯಾರ್ಥಿಗಳು ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕವನ್ನು ಮುಡಿಗೇರಿಸಿ ಕೊಂಡರು.

ಇದನ್ನೂ ಓದಿ: Manipal Hospital: ಸಂಗೀತದ ಮೂಲಕ ಮೆದುಳಿನ‌ ಪುನಃಶ್ಚೇತನ: ಮಣಿಪಾಲ್ ಹಾಸ್ಪಿಟಲ್ಸ್‌ನಿಂದ ವಿಶೇಷ ಚಿಕಿತ್ಸಾ ಕ್ರಮ!

ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ, ಗೂಗಲ್ ಕ್ಲೌಡ್‌ನ ಏಷ್ಯಾ ಪೆಸಿಫಿಕ್ ಕಾರ್ಯ ತಂತ್ರ ಕಾರ್ಯಕ್ರಮಗಳ ಉಪಾಧ್ಯಕ್ಷರು ಹಾಗೂ ಮಾಹೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ ಯಾದ ಬಿಕ್ರಂ ಸಿಂಗ್ ಬೇಡಿ ಅವರು ಮಣಿಪಾಲದಿಂದ ಪದವಿ ಪಡೆದು ಪ್ರಮುಖ ಸಂಸ್ಥೆಗಳ ನಾಯಕತ್ವ ವಹಿಸುವವರೆಗಿನ ತಮ್ಮ ಪಯಣವನ್ನು ನೆನಪಿಸಿಕೊಂಡರು. ಕೃತಕ ಬುದ್ಧಿ ಮತ್ತೆ (ಎಐ) ಪ್ರತಿಯೊಂದು ಉದ್ಯಮವನ್ನೂ ಬದಲಿಸುತ್ತಿರುವ ಕಾಲದಲ್ಲಿ ನೀವು ಪದವಿ ಪಡೆದು ವೃತ್ತಿ ಜೀವನಕ್ಕೆ ಪ್ರವೇಶಿಸುತ್ತಿದ್ದು, ಈ ಯುಗದಲ್ಲಿ ತಮ್ಮನ್ನು ತಾವು ಹೊಸದಾಗಿ ರೂಪಿಸಿಕೊಳ್ಳುವ ಮಹತ್ವವನ್ನುʼ ಅವರು ಒತ್ತಿ ಹೇಳಿದರು.

ʼಎಐ ಮತ್ತು ತಂತ್ರಜ್ಞಾನಗಳ ಸವಾಲುಗಳು ತಾಂತ್ರಿಕತೆಯನ್ನು ಮೀರಿದ್ದಾಗಿದೆ. ನೈತಿಕ, ಸಾಮಾಜಿಕ, ಮತ್ತು ಮಾನವೀಯ ಅಂಶವನ್ನು ಹೊಂದಿದೆ. ಹಾಗಾಗಿ ಪದವೀಧರರು ಕೇವಲ ತಂತ್ರಜ್ಞಾನವನ್ನು ನಿರ್ಮಿಸುವುದು ಅಥವಾ ಬಳಸುವುದರ ಬದಲು, "ನಾವು ಅದನ್ನು ನಿರ್ಮಿಸಬೇಕೇ ಅಥವಾ ಬಳಸಬೇಕೇ?" ಎಂಬ ನೈತಿಕ ಪ್ರಶ್ನೆಯನ್ನು ಕೇಳುವ ಮೂಲಕ ಜವಾಬ್ದಾರಿಯುತವಾಗಿ ವರ್ತಿಸಬೇಕು.

ತಮ್ಮ ಕೌಶಲಗಳನ್ನು ಕೇವಲ ವೈಯಕ್ತಿಕ ಯಶಸ್ಸಿಗಾಗಿ ಅಲ್ಲದೆ, ಸಾಮಾಜಿಕ ಪ್ರಗತಿಗಾಗಿ ಬಳಸಬೇಕು. ನನ್ನ ಕಾಲಮಾನದವರ ಸಾಧನೆಗಿಂತಲೂ, ಈಗೀನ ಪೀಳಿಗೆಯವರು ಏನೆಲ್ಲ ಸಾಧಿಸುತ್ತಾರೆ ಎನ್ನುವ ಬಗ್ಗೆ ನನಗೆ ಹೆಚ್ಚು ಕೌತುಕವಿದೆ. ಏಕೆಂದರೆ, ನಮ್ಮಲ್ಲಿ ಇಲ್ಲದ ವಿಶಿಷ್ಟ ಶಕ್ತಿಯೊಂದು ನಿಮ್ಮಲ್ಲಿದೆ. ಅದೆಂದರೆ, ಭಿನ್ನವಾಗಿ ಪ್ರಶ್ನಿಸುವ ಪ್ರಜ್ಞೆ, ಹಳೆಯ ಅತಾರ್ತಿಕ ನಿಲವುಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ನಮ್ಮ ಕಲ್ಪನೆಗೂ ಮೀರಿದ ಪರಿಹಾರ ಸೂಚಿಸುವ ತಂತ್ರಜ್ಞಾನಗಳುʼ ಎಂದು ಹೇಳಿದರು.

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು ಮಾತನಾಡಿ, ‘ಹೊಸ ಆವಿಷ್ಕಾರಗಳು, ಉದ್ಯಮಶೀಲ ಮನೋಭಾವ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣದ ಆಶಯವನ್ನೊಳಗೊಂಡ ಭವಿಷ್ಯದ ಮಾರ್ಗಸೂಚಿ ಯನ್ನು ಪ್ರಸ್ತುತಪಡಿಸಿದರು.

ಮಾಹೆಯು ಸಂಶೋಧನೆಗೆ ಪ್ರಮುಖ್ಯತೆ ನೀಡುವ ಜತೆಗೆ, ಎಲ್ಲರನ್ನೂ ಒಳಗೊಳ್ಳುವ, ಸ್ಥಳೀಯ ಸಮುದಾಯಕ್ಕೆ ಬೆಂಬಲಿಸುವ ಮತ್ತು ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಬಗ್ಗೆಯೂ ಮಾಹೆ ಗಮನ ಹರಿಸಿದೆ. ಎಐ ಕ್ರಾಂತಿಯಿಂದ ಎದುರಾಗುತ್ತಿರುವ ಸವಾಲು ಮತ್ತು ಅವಕಾಶಗಳ ನಡುವೆ ಜಾಗ್ರತೆಯಿಂದ ಉತ್ತಮ ಮತ್ತು ಪರಿಸರ ಸ್ನೇಹಿ ನಾಳೆಗಳನ್ನು ಕಟ್ಟುವಲ್ಲಿ ವಿಶ್ವವಿದ್ಯಾಲಯದ ಮಹತ್ವದ್ದಾಗಿದೆʼ ಎಂದು ಹೇಳಿದರು.

ರಾಶಿ ಗೋಯೆಲ್ (ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಎಂಐಟಿ ಮಣಿಪಾಲ್‌), ನೇಹಾ ಶ್ರೀಕುಮಾರ್ (ಬಿ.ಎಸ್ಸಿ ನರ್ಸಿಂಗ್, ಎಂಸಿಒಎನ್ ಮಣಿಪಾಲ್‌) ಮತ್ತು ಮಂದಿರಾ (ಬಿ.ಎ. ಮೀಡಿಯಾ ಮತ್ತು ಕಮ್ಯುನಿಕೇಷನ್, ಎಂಐಸಿ ಮಣಿಪಾಲ್‌) ಇವರಿಗೆ ತಮ್ಮ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಳಿಗಾಗಿ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಚಿನ್ನದ ಪದಕ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು, ʼಈ ಯಶಸ್ಸಿನ ಹಿಂದೆ ನಮ್ಮ ಗೊಂದಲದ ದಿನಗಳಿವೆ, ಹಗಲು-ರಾತ್ರಿ ಅಧ್ಯಯನ ಮಾಡಿದ ಕ್ಷಣಗಳಿವೆ, ಅಷ್ಟೇ ಅಲ್ಲದೇ ಛಲ ಬಿಡದ ಪ್ರಯತ್ನವಿದೆ. ಈ ಚಿನ್ನದ ಪದಕ ಕೇವಲ ಸಾಧನೆಯ ಸಂಕೇತವಲ್ಲ, ಬದಲಿಗೆ ಕಷ್ಟಗಳಲ್ಲಿ ಕುಗ್ಗದೆ ಮುನ್ನುಗ್ಗುವ ಧೈರ್ಯ, ಒತ್ತಡದಲ್ಲಿ ಸೃಜನಾತ್ಮಕವಾಗಿ ಯೋಚಿಸುವ ಸಾಮರ್ಥ್ಯ ಮತ್ತು ಸವಾಲು ಎಷ್ಟೇ ದೊಡ್ಡದಿದ್ದರೂ ಮುಂದುವರಿಯುವ ದೃಢ ನಂಬಿಕೆ ಯನ್ನು ಪ್ರತೀಕವಾಗಿದೆ. ತಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಬೇಕೆಂದರೆ ಅದರ ಹಿಂದೆ ಒಳ್ಳೆಯ ಕಲಿಕೆಯ ವಾತಾವರಣ, ಗುರುಗಳ ಮಾರ್ಗದರ್ಶನ ಹಾಗೂ ಅವಕಾಶಗಳನ್ನು ತೆರೆದಿಡುವಂತ ಶಿಕ್ಷಣ ಸಂಸ್ಥೆ ಅತ್ಯಗತ್ಯʼ ಎಂದು ಅಭಿಪ್ರಾಯಪಟ್ಟರು.

ಎರಡನೇ ದಿನದ ಕಾರ್ಯಕ್ರಮವು ಪದವೀಧರರ, ಚಿನ್ನದ ಪದಕ ಮುಡಿಗೇರಿಸಿಕೊಂಡವರ, ಹೆಮ್ಮೆಯ ಪೋಷಕರ ಹಾಗೂ ಅಧ್ಯಪಕರ ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಈ ಸಮಾರಂಭವು ಪದವೀಧರರ ಸಾಧನೆಗಳನ್ನು ಸಂಭ್ರಮಿಸುವ ಜತೆಗೆ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಸಾಧ್ಯವಾಗುವಂತೆ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ವಿಶ್ವ ವಿದ್ಯಾಲಯಕ್ಕಿರುವ ಬದ್ಧತೆಯನ್ನು ನೆನಪಿಸುವ ಮೂಲಕ ತೆರೆ ಕಂಡಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ:

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯಾಗಿದೆ. ಮಾಹೆ ಆರೋಗ್ಯ ವಿಜ್ಞಾನ (HS), ಮ್ಯಾನೇಜ್‌ ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ (T&S) ಸ್ಟ್ರೀಮ್‌ಗಳಾದ್ಯಂತ ಮಣಿಪಾಲ, ಮಂಗಳೂರು, ಬೆಂಗಳೂರು, ಜೆಮ್‌ಷೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಘಟಕ ಘಟಕಗಳ ಮೂಲಕ 400 ವಿಶೇಷತೆಗಳನ್ನು ನೀಡುತ್ತದೆ.

ಶೈಕ್ಷಣಿಕ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ಗಮನಾರ್ಹ ಕೊಡುಗೆ ಗಳಲ್ಲಿ ಗಮನಾರ್ಹವಾದ ದಾಖಲೆಯೊಂದಿಗೆ, MAHE ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) 4 ನೇ ಸ್ಥಾನದಲ್ಲಿದೆ, ಮಾಹೆ ಪರಿವರ್ತಕ ಕಲಿಕೆಯ ಅನುಭವ ಮತ್ತು ಶ್ರೀಮಂತ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆ ಯಾಗಿದೆ, ಹಾಗೆಯೇ ಉನ್ನತ ಪ್ರತಿಭೆಗಳನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹು-ರಾಷ್ಟ್ರೀಯ ಕಾರ್ಪೊರೇಟ್‌ಗಳಿಗೆ.