ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Rai death: ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಹರೀಶ್‌ ರಾಯ್‌ ಅಂತ್ಯಕ್ರಿಯೆ

Harish Rai funeral: ಉಡುಪಿಯಲ್ಲಿ ಹುಟ್ಟಿ ಬೆಳೆದಿದ್ದ ಹರೀಶ್‌ ರಾಯ್ ಅವರು ಬಳಿಕ ಅಲ್ಲಿಂದ ಮುಂಬಯಿಗೆ ಓಡಿಹೋಗಿದ್ದರು. ನಂತರ ಬೆಂಗಳೂರಿಗೆ ಬಂದು ಕನ್ನಡ ಚಿತ್ರೋದ್ಯಮಕ್ಕೆ ಸೇರಿಕೊಂಡಿದ್ದರು. ಹರೀಶ್‌ ಅವರ ಬಂಧುಬಾಧವರು ಇಲ್ಲಿದ್ದಾರೆ. ನಿನ್ನೆ ರಾತ್ರಿ ಅವರ ಪಾರ್ಥಿವ ಶರೀರವನ್ನು ಉಡುಪಿಗೆ ಕೊಂಡೊಯ್ಯಲಾಗಿತ್ತು. ಇಂದು ಉಡುಪಿಯಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿತು.

ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಹರೀಶ್‌ ರಾಯ್‌ ಅಂತ್ಯಕ್ರಿಯೆ

ಉಡುಪಿಯಲ್ಲಿ ಹರೀಶ್‌ ರಾಯ್‌ ಅಂತ್ಯಕ್ರಿಯೆ -

ಹರೀಶ್‌ ಕೇರ
ಹರೀಶ್‌ ಕೇರ Nov 7, 2025 10:43 AM

ಉಡುಪಿ : ನಿನ್ನೆ ರಾಜಧಾನಿಯಲ್ಲಿ ಸಾವಿಗೀಡಾದ ಸ್ಯಾಂಡಲ್‌ವುಡ್ ಖಳನಟ ಹರೀಶ್ ರಾಯ್ (Harish Rai death) ಅವರ ಅಂತ್ಯಕ್ರಿಯೆ (Funeral) ವಿಧಿವಿಧಾನಗಳು ಇಂದು ಕರಾವಳಿಯ ಉಡುಪಿಯಲ್ಲಿ (Udupi) ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಹರೀಶ್ ಆಚಾರ್ಯ ಆಪ್ತರು, ಕುಟುಂಬದವರು ಭಾಗಿಯಾಗಿದ್ದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಬಹಳ ದಿನಗಳಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್‌ ರಾಯ್‌ (55) ನಿನ್ನೆ ನಿಧನರಾಗಿದ್ದರು.

ಉಡುಪಿಯಲ್ಲಿ ಹುಟ್ಟಿ ಬೆಳೆದಿದ್ದ ಅವರು ಬಳಿಕ ಅಲ್ಲಿಂದ ಮುಂಬಯಿಗೆ ಓಡಿಹೋಗಿದ್ದರು. ನಂತರ ಬೆಂಗಳೂರಿಗೆ ಬಂದು ಕನ್ನಡ ಚಿತ್ರೋದ್ಯಮಕ್ಕೆ ಸೇರಿಕೊಂಡಿದ್ದರು. ಹರೀಶ್‌ ಅವರ ಬಂಧುಬಾಧವರು ಇಲ್ಲಿದ್ದಾರೆ. ನಿನ್ನೆ ರಾತ್ರಿ ಅವರ ಪಾರ್ಥಿವ ಶರೀರವನ್ನು ಉಡುಪಿಗೆ ಕೊಂಡೊಯ್ಯಲಾಗಿತ್ತು.

ʻಕೆಜಿಎಫ್‌ʼ ಸಿನಿಮಾದಲ್ಲಿ ಮಾಡಿದ ಚಾಚಾ ಪಾತ್ರದಂದ ʻಕೆಜಿಎಫ್‌ ಚಾಚಾʼ ಎಂದೇ ಖ್ಯಾತರಾದ ಸ್ಯಾಂಡಲ್‌ವುಡ್ ಖ್ಯಾತ ಖಳನಟ ಹರೀಶ್‌ ರಾಯ್‌ (55) ಹಲವು ದಶಕಗಳಿಂದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ಓಂ’ ಚಿತ್ರದಲ್ಲಿನ ‘ರಾಯ್’ ಭೂಗತ ಡಾನ್‌ ಪಾತ್ರದಿಂದ ಗಮನ ಸೆಳೆದವರು ಇವರು. ಇದು ಮುತ್ತಪ್ಪ ರೈ ಹೋಲುವ ಪಾತ್ರ ಆಗಿತ್ತು. ಆ ಮೂಲಕ, ಅದುವರೆಗೆ ಹರೀಶ್‌ ಆಚಾರ್ಯ ಆಗಿದ್ದ ಅವರು, ಹರೀಶ್‌ ರಾಯ್‌ ಎನಿಸಿಕೊಂಡಿದ್ದರು.

ಇದನ್ನೂ ಓದಿ: Harish Rai Death: ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ

ನಂತರ ಸಾಕಷ್ಟು ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಅಂಡರ್ ವರ್ಲ್ಡ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫ‌ರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ, ಕೆಜಿಎಫ್ ಚಾಪ್ಟ‌ರ್ 1 ಹಾಗೂ ಕೆಜಿಎಫ್ ಚಾಪ್ಟರ್ 2ರಲ್ಲಿ ಅಭಿನಯಿಸಿದ್ದಾರೆ.

ಉಡುಪಿಯಿಂದ ಮುಂಬಯಿಗೆ ಓಡಿ ಹೋಗಿ ಅಲ್ಲಿದ್ದ ಕಾಲದಲ್ಲಿ ಇವರು ಭೂಗತ ಲೋಕದ ಸಂಪರ್ಕ ಹೊಂದಿದ್ದೆ ಎಂದು ಹೇಳಿಕೊಂಡಿದ್ದರು. ಆಗ ಇವರ ಮೇಲೆ ಕೆಲವು ಪ್ರಕರಣಗಳೂ ಇದ್ದವು. ಬೆಂಗಳೂರಿಗೆ ಬಂದು ಸಿನಿಮಾ ಉದ್ಯಮ ಸೇರಿಕೊಂಡು ಬಳಿಕ ಬದಲಾಗಿದ್ದರು. ಉಪೇಂದ್ರ ಅವರ ʼಓಂʼ ಸಿನಿಮಾ ಅವರ ಬದಲಾವಣೆಗೆ ಸಾಧ್ಯತೆಯನ್ನು ನೀಡಿತ್ತು. ಇತ್ತೀಚೆಗೆ ಥೈರಾಯ್ಡ್‌ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಒಂದೊಂದು ಇಂಜೆಕ್ಷನ್‌ಗೂ ಹಲವು ಲಕ್ಷ ರೂ.ಗಳ ವೆಚ್ಚ ಆಗುತ್ತಿತ್ತು. ಯಶ್‌, ಧ್ರುವ, ದರ್ಶನ್‌ ಸೇರಿದಂತೆ ಹಲವರು ಅವರಿಗೆ ನೆರವಾಗಿದ್ದರು.

ಇದನ್ನೂ ಓದಿ: Yash: ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ನಟನ ಪುತ್ರನಿಗೆ ಹಣ ಸಹಾಯ ಮಾಡಿದ ರಾಕಿಂಗ್‌ ಸ್ಟಾರ್‌