ಉಡುಪಿ: ಟೋಲ್ ಪಾವತಿ ವಿಚಾರದಲ್ಲಿ ಮಾಜಿ ಸೈನಿಕರೊಬ್ಬರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಡುಪಿ (Udupi) ಜಿಲ್ಲೆಯ ಸಾಸ್ಥಾನ ಟೋಲ್ ಪ್ಲಾಜಾದ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಮಾಜಿ ಸೈನಿಕರ ಮೇಲೆ ಯಾವುದೇ ಆರೋಪ ಹೊರಿಸಿಲ್ಲ ಎಂದು ಎಸ್ಪಿ ಹರಿರಾಮ್ (viral video) ಶಂಕರ್ ಹೇಳಿದ್ದಾರೆ. ಸಂಬಂಧಪಟ್ಟ ಟೋಲ್ ಸಿಬ್ಬಂದಿ ಕ್ಷಮೆಯಾಚಿಸುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಭಾಗಿಯಾಗಿರುವ ಎಲ್ಲಾ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆಸಿ ಸೂಕ್ತ ನಡವಳಿಕೆಯ ಬಗ್ಗೆ ಅರಿವು ಮೂಡಿಸಲಾಗಿದೆ. ವಿಶೇಷವಾಗಿ ಮಾಜಿ ಸೈನಿಕರೊಂದಿಗೆ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸೇವೆ ಸಲ್ಲಿಸುವಾಗ ಹೇಗೆ ವರ್ತಿಸಬೇಕು ಎಂದು ತಿಳಿಸಲಾಗಿದೆ ಎಂದು ಎಸ್ಪಿ ಹೇಳಿದರು.
Ex Soldier Hunger strike: ಕಾರ್ಗಿಲ್ ವಿಜಯೋತ್ಸವದ ದಿವಸಾ ಜಮೀನಿಗಾಗಿ ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ವಿಡಿಯೊದಲ್ಲಿ, 21 ಪ್ಯಾರಾ ಸ್ಪೆಷಲ್ ಫೋರ್ಸಸ್‍ನ ಕಮಾಂಡೋ ಶ್ಯಾಮರಾಜ್ ಎಂದು ಗುರುತಿಸಲ್ಟಟ್ಟ ಮಾಜಿ ಸೈನಿಕ, ವ್ಹೀಲ್‍ಚೇರ್‌ನಲ್ಲಿ, ಯಾವುದೇ ಸಮಸ್ಯೆಯಿಲ್ಲದೆ ಇತರ ಟೋಲ್ ಬೂತ್‍ಗಳ ಮೂಲಕ ಹಾದುಹೋದ ದಾಖಲೆಗಳನ್ನು ಪ್ರಸ್ತುತಪಡಿಸುತ್ತಿರುವುದು ಕಂಡುಬರುತ್ತದೆ.
ವಿಡಿಯೊ ವೀಕ್ಷಿಸಿ:
ಮಾಜಿ ಸೈನಿಕ ತಮ್ಮ ಪತ್ನಿಯ ಹುದ್ದೆಗೆ ಸಂಬಂಧಿಸಿದ ವಿನಾಯಿತಿ ಪ್ರಮಾಣಪತ್ರವನ್ನು ಹೊಂದಿದ್ದರು. ಅವರು ಆಪರೇಷನ್ ಪರಾಕ್ರಮ್ ಯುದ್ಧದಲ್ಲಿ ಗಾಯಗೊಂಡವರು. ವಿನಾಯಿತಿ ಪ್ರಮಾಣಪತ್ರವನ್ನು ನೀಡಿದರೂ ಸಹ, ಸಾಸ್ಥಾನದ ಟೋಲ್ ಬೂತ್ ಉದ್ಯೋಗಿಗಳಾದ ಸುರೇಶ್ ಮತ್ತು ಶಿವರಾಜ್ ಅವರನ್ನು ತಡೆದರು ಎಂದು ಅವರು ಹೇಳಿಕೊಂಡಿದ್ದಾರೆ. ಶ್ಯಾಮರಾಜ್ ಅವರು ಘಟನೆಯ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಶ್ನಿಸಿದ್ದಾರೆ.
ಭಾನುವಾರ (ಜನವರಿ 25) ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ. ಶ್ಯಾಮರಾಜ್ ಅವರು ತಮ್ಮ ಮಾಜಿ ಸೈನಿಕ ಗುರುತಿನ ಚೀಟಿಯನ್ನು ನೀಡಿದರು. ಯಾವುದೇ ವಿನಾಯಿತಿ ಇಲ್ಲ ಎಂದು ನಾವು ಹೇಳಿದೆವು. ಅವರು ಅಂಗವೈಕಲ್ಯ ಗುರುತಿನ ಚೀಟಿಯನ್ನು ನೀಡಿದರು. ನಾವು ಅದನ್ನು ನಮ್ಮ ಹಿರಿಯ ಅಧಿಕಾರಿಗಳಿಗೆ ನೀಡಿದ್ದೇವೆ. ಆದರೆ, ಪ್ರತಿಕ್ರಿಯೆ ವಿಳಂಬವಾಯಿತು. ನಂತರ ನಾವು ವಿನಾಯಿತಿ ನೀಡಿ ಕ್ಷಮೆಯಾಚಿಸಿದೆವು. ಮಾಜಿ ಯೋಧನಿಗೆ ನೋವುಂಟು ಮಾಡಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಟೋಲ್ ಸಿಬ್ಬಂದಿ ಹೇಳಿದರು.
ಪೊಲೀಸರ ಪ್ರಕಾರ, ಮಾಜಿ ಸೈನಿಕ ಶ್ಯಾಮರಾಜ್ ಅವರು ಈ ವಿಷಯದಲ್ಲಿ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ, ಘಟನೆಯು ಸಾರ್ವಜನಿಕರ ಗಮನ ಸೆಳೆದಿದ್ದು, ಟೋಲ್ ಪ್ಲಾಜಾದಲ್ಲಿ ಸೈನಿಕರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.