ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಮೇ 10, 11ರಂದು ಎರಡು ದಿನಗಳ ಕಾಲ 16ನೇ ವರ್ಷದ ಕೃಷಿ ಜಯಂತಿ, ಶ್ರೀ ಲಕ್ಷಿನೃಸಿಂಹ ರಥೋತ್ಸವ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಸ್ವರ್ಣ ವಲ್ಲೀ ಕೃಷಿ ಪ್ರತಿಷ್ಠಾನ, ಸೋಂದಾ ಇವರ ಸಹಯೋಗದಲ್ಲಿ 16ನೇ ವರ್ಷದ ಕೃಷಿ ಜಯಂತಿಯನ್ನು ಶ್ರೀ ಲಕ್ಷಿನೃಸಿಂಹ ರಥೋತ್ಸವವನ್ನು ಮೇ 10ಮತ್ತು 11ರಂದು ಎರಡು ದಿನಗಳ ಕಾಲ ನಡೆಸ ಲಾಗುವುದು

ಎರಡು ದಿನಗಳ ಕಾಲ 16ನೇ ವರ್ಷದ ಕೃಷಿ ಜಯಂತಿ, ಶ್ರೀ ಲಕ್ಷಿನರಸಿಂಹ ರಥೋತ್ಸವ

Profile Ashok Nayak May 3, 2025 2:03 PM

ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಸ್ವರ್ಣ ವಲ್ಲೀ ಕೃಷಿ ಪ್ರತಿಷ್ಠಾನ, ಸೋಂದಾ ಇವರ ಸಹಯೋಗದಲ್ಲಿ 16ನೇ ವರ್ಷದ ಕೃಷಿ ಜಯಂತಿ ಯನ್ನು ಶ್ರೀ ಲಕ್ಷಿನೃಸಿಂಹ ರಥೋತ್ಸವವನ್ನು ಮೇ 10ಮತ್ತು 11ರಂದು ಎರಡು ದಿನಗಳ ಕಾಲ ನಡೆಸ ಲಾಗುವುದು ಎಂದು ಅಧ್ಯಕ್ಷ ವಿಎನ್ ಹೆಗಡೆ ಹೇಳಿದರು. ಅವರು ಶನಿವಾರ ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಪುನಶ್ವೇತನ ಕೊಡುವ ನಿಟ್ಟಿನಲ್ಲಿ ಅನ್ನದಾತಾ ಸುಖಿಭವ: ಎನ್ನುವ ಗುರಿಯೊಂದಿಗೆ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಹಾಗೂಶ್ರೀಮದ್ ಆನಂದಭೋದೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸದಾಶಯ ಹಾಗೂ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದಕ್ಕೂ ಪೂರ್ವದಲ್ಲಿ ಮೇ 6 ರ ಮಂಗಳವಾರ ದಂದು ಮಾರಕ ಎಲೆ ಚುಕ್ಕಿ ರೋಗದ ಕುರಿತು ವಿಶೇಷ ಚಿಂತನ ಸಂವಾದ ಕಾರ್ಯಕ್ರಮ ಕೃಷಿ ಜಯಂತಿ ಜಾಗೃತಿ ಕಾರ್ಯಕ್ರಮವಾಗಿ ಶಿರಸಿಯ ಟಿಎಂಸ್ ಸಭಾಭವನದಲ್ಲಿ ನಡೆಯಲಿದೆ. ಜಿಲ್ಲೆಯ ಘಟ್ಟದ ಮೇಲಿನ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ರೈತರ ಸಹಭಾಗಿತ್ವದಲ್ಲಿ ನಡೆಯುವ ಈ ವಿಶೇಷ ಚಿಂತನಾ ಸಭೆಯಲ್ಲಿ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: Sirsi News: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ವಾತಾವರಣ ಹೆಚ್ಚಬೇಕು: ಸಂಸದ ಕಾಗೇರಿ

ಅಭ್ಯಾಗತರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಶಿರಸಿಯ ಟಿಎಸ್ ಎಸ್ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಹಾಗೂ ಶಿರಸಿಟಿಎಂಎಸ್ ನ ಅಧ್ಯಕ್ಷರಾದ ಜಿ ಟಿ ಹೆಗಡೆ ತಟ್ಟಿಸರ ಉಪಸ್ಥಿತರಿರಲಿದ್ದಾರೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜ
ಯೋಗಿಂದ್ರ ಮಹಾಸ್ವಾಮಿಗಳು "ಕೃಷಿ ಜಯಂತಿ 'ಯನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವ ನ್ಯಾಯಮೂರ್ತಿಗಳಾದ ಚಂದ್ರಶೇಖರ ಜೋಶಿ ಅವರು ಸ್ವರ್ಣ ವಲ್ಲಿ ಪ್ರಭಾ ಕೃಷಿ ವಿಶೇಷಾಂಕವನ್ನು ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ತೀರ್ಥ ಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ.

ವಿಚಾರ ಪೂರ್ಣ ಗೋಷ್ಠಿಗಳು :

ಮೇ 10 ರ ಸಂಜೆ 4 ಗಂಟೆಗೆ ಬಾಗಲಕೋಟ ತೋಟಗಾರಿಕೆ ವಿ.ವಿಯ ನಿವೃತ್ತ ವಿಸ್ತರಣಾ ನಿರ್ದೇಶಕ ರಾದ ಡಾಯಖ ಲಕ್ಷ್ಮೀನಾರಾಯಣ ಹೆಗಡೆಯವರ ಅಧ್ಯಕ್ಷತೆಯಲ್ಲಿ " ನಮ್ಮ ಭೂಮಿ ನಮ್ಮ- ಮಣ್ಣು ಎಂಬ ವಿಷಯ ದ ಕುರಿತು ಕಾಸರಗೋಡಿನ ಸಿ ಪಿ ಸಿ ಆರ್ ಐ ನ ಪ್ರಧಾನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗಡೆ ಹಾಗೂ ಡಾ. ರವಿ ಭಟ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಮರುದಿನ ಮೇ 11ರ ಬೆಳಗ್ಗೆ 10- 30 ಗಂಟೆಗೆ "ಸೊಪ್ಪಿನ ಬೆಟ್ಟ ಸಂರಕ್ಷಣೆ ಹಾಗೂ ಅಭಿವೃದ್ಧಿ " ವಿಷಯವಾಗಿ ಎರಡನೆಯ ಗೋಷ್ಠಿ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿಗಳಾದ ಆರ್ ಕೆ ಭಟ್ಟಿ ಯಲ್ಲಾಪುರ ಮತ್ತು ಪರಿಸರವಾದಿ ನರೇಂದ್ರ ಹೆಗಡೆ ಹೊಂಡಗಾಶಿ ಭಾಗವಹಿಸಲಿದ್ದಾರೆ. ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಿ ಆರ್ ಹೆಗಡೆ ಬೆಳ್ಳಿಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಉತ್ಸಾಹಕ್ಕೆ ಸ್ಪರ್ಧೆಗಳು :

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದಲ್ಲಿ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಆನೈನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸ ಲಾಗಿದ್ದು ಮೇ 4 ರಂದು ಮುಂಜಾನೆ 11 ಗಂಟೆಗೆ ಶ್ರೀಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಸ್ವರ್ಣ ವಲ್ಲಿಯ ಉಭಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನೆಗೊಳ್ಳಲಿದೆ ಅನ್ನಿನಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಅಂಕಗಳಿಸಿದ ಹತ್ತು ವಿದ್ಯಾರ್ಥಿಗಳನ್ನು ನೇರ ಸುತ್ತಿಗೆ ಆಯ್ಕೆ ಮಾಡಿ ಮೇ 10ರಂದು ಸ್ವರ್ಣವಲ್ಲಿಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಸಲಾಗುವುದು. ಅಂಗನವಾಡಿ ಮಕ್ಕಳಿಗೆ ತರಕಾರಿಗುರುತಿಸುವ ಸ್ಪರ್ಧೆ, ಒಂದರಿಂದ ನಾಲ್ಕನೇ ವರ್ಗದ ಮಕ್ಕಳಿಗೆ ಕೃಷಿ ಆಧಾರಿತ ಚಿತ್ರಕಲಾ ಸ್ಪರ್ಧೆ, 5 ರಿಂದ 7ನೇ ವರ್ಗದ ಮಕ್ಕಳಿಗೆ ಸಸ್ಯ ಎಲೆಗಳನ್ನು ಗುರುತಿಸುವ ಸ್ಪರ್ಧೆ, ಕೇಂದ್ರ ಮಾತೃಮಂಡಳದವರ ಸಹಕಾರದಲ್ಲಿ ಮಾತೆಯರಿಗಾಗಿ ಭಗವದ್ಗೀತೆ 9ನೇ ಅಧ್ಯಾ ಯದ ಅರ್ಥ ಸಹಿತ ಶ್ಲೋಕಗಳ ಸ್ಪರ್ಧೆ ಹಾಗೂ ಹೂವಿನರಂಗೋಲಿ ಸ್ಪರ್ಧೆ, ಹೂಬತ್ತಿ ಹೊಸೆ ಯುವ ಸ್ಪರ್ಧೆ ನಡೆಯಲಿದೆ.

ಮೇ 11ರಂದು ಬೆಳಗ್ಗೆ 10 ಗಂಟೆಯಿಂದ ಸೋಂದಾದ ಶ್ರೀರಾಜರಾಜೇಶ್ವರಿ ಯುವಕ ಮಂಡಲ ಹಾಗೂ ಶ್ರೀ ರಾಜರಾಜೇಶ್ವರಿ ಕ್ರೀಡಾ ಮತ್ತು ಸಂಸ್ಕೃತಿಕ ಸಂಘದ ಸಹಕಾರದಲ್ಲಿ ಪುರುಷರಿಗೆ ಮಾತೆಯರಿಗೆ ಕೃಷಿ ಪದ ಬಂಧ ಸ್ಪರ್ಧೆ, ಚಾಲಿ ಸುಲಿಯುವ ಸ್ಪರ್ಧೆ, ಪುರುಷರಿಗಾಗಿ ತೆಂಗಿನಕಾಯಿ ಸುಲಿಯುವಸ್ಪರ್ಧೆ, ಹಾಗೂ ಶಂಖನಾದ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭ ದಲ್ಲಿ ಸುರೇಶ ಹಕ್ಕಿಮನೆ, ಆರ್ ಎನ್ ಹೆಗಡೆ ಉಪಸ್ಥಿತರಿದ್ದರು.