ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Transport Department: ವಾಕರಸಾ ಸಂಸ್ಥೆಗೆ ಶೀಘ್ರದಲ್ಲೇ 700 ಹೊಸ ಬಸ್‌: ಸಚಿವ ರಾಮಲಿಂಗಾರೆಡ್ಡಿ

Transport Department: ಶಿರಸಿ ನಗರದಲ್ಲಿ ನೂತನ ಕೇಂದ್ರ ಬಸ್ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿದ್ದಾರೆ. ಬಜೆಟ್‌ನಲ್ಲಿ 2000 ಹೊಸ ಬಸ್ ಖರೀದಿಗೆ ಅನುದಾನ ಬಿಡುಗಡೆಯಾಗಿದೆ. ವಾಕರಸಾ ಸಂಸ್ಥೆಗೆ ಒಟ್ಟು 700 ಹೊಸ ಬಸ್‌ಗಳನ್ನು ನೀಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ವಾಕರಸಾ ಸಂಸ್ಥೆಗೆ ಶೀಘ್ರದಲ್ಲೇ 700 ಹೊಸ ಬಸ್‌: ಸಚಿವ ರಾಮಲಿಂಗಾರೆಡ್ಡಿ

Profile Prabhakara R Mar 28, 2025 7:27 PM

ಶಿರಸಿ: ಶಕ್ತಿ ಯೋಜನೆ ಜಾರಿಗೆ ಬಂದ ನಂತರ ನಿತ್ಯ 1 ಕೋಟಿ ಪ್ರಯಾಣಿಕರು ನಮ್ಮ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್ ಖರೀದಿಯಾಗಿರಲಿಲ್ಲ. ಖಾಲಿ ಹುದ್ದೆ ಭರ್ತಿ ಮಾಡಲಾಗುತ್ತಿದ್ದು, 800ಕ್ಕೂ ಅಧಿಕ ಹೊಸ ಬಸ್‌ಗಳನ್ನು ಖರೀದಿ ಮಾಡಿದ್ದೇವೆ. ಬಜೆಟ್‌ನಲ್ಲಿ 2000 ಹೊಸ ಬಸ್ ಖರೀದಿಗೆ ಅನುದಾನ ಬಿಡುಗಡೆಯಾಗಿದೆ. ವಾಕರಸಾ ಸಂಸ್ಥೆಗೆ ಒಟ್ಟು 700 ಹೊಸ ಬಸ್‌ಗಳನ್ನು ನೀಡುತ್ತೇವೆ. 4 ತಿಂಗಳೊಳಗೆ ಮೊದಲ ಹಂತದಲ್ಲಿ 300 ಬಸ್‌ಗಳನ್ನು ನೀಡಲಾಗುತ್ತದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಶಿರಸಿ ನಗರದಲ್ಲಿ ನೂತನ ಕೇಂದ್ರ ಬಸ್ ನಿಲ್ದಾಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದಾಪುರದಲ್ಲಿ ನೂತನ ಬಸ್ ಡಿಪೋ ನಿರ್ಮಿಸಲು ಚಿಂತನೆ ನಡೆಸುತ್ತೇವೆ. ಸಾರಿಗೆ ನೌಕರರು ನಿಧನರಾದರೆ 1 ಕೋಟಿ ಪರಿಹಾರ ನೀಡುತ್ತೇವೆ. ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ನೌಕರರ ಕುಟುಂಬ, 350 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಸುಮಾರು 5900 ಕೋಟಿ ರೂ. ಸಾಲ ಇತ್ತು. ಸಾಲವನ್ನು ತೀರಿಸಿ ಸಂಸ್ಥೆಯನ್ನು ಅಭಿವೃದ್ಧಿಯತ್ತ ಸಾಗಿಸುತ್ತಿದ್ದೇವೆ. ಹೊಸ ನೌಕರರಿಗೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ನೀಡಲಾಗುವುದು ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಅಲಗೌಡ ಕಾಗೆ ಮಾತನಾಡಿ, ವಾಕರಸಾಸಂ ವ್ಯಾಪ್ತಿಯ ಎಲ್ಲಾ ಹಳೆಯ ಬಸ್ ನಿಲ್ದಾಣಗಳನ್ನು ನೆಲಸಮ ಮಾಡಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತದೆ. ಇನ್ನು ಹಳೆ ಬಸ್‌ಗಳನ್ನು ಮೂಲೆಗೆ ತಳ್ಳಿ ಹೊಸ ಬಸ್‌ಗಳನ್ನು ಖರೀದಿ ಮಾಡುತ್ತಿದ್ಧೇವೆ. ದೇಶದಲ್ಲಿ ಅತೀ ಹೆಚ್ಚು ತೊಂದರೆ ಪಡುವ ನೌಕರರು ನಮ್ಮ ಸಾರಿಗೆ ಸಂಸ್ಥೆ ನೌಕರರು. ನೌಕರರ ಸಾವಿರಾರು ಬೇಡಿಕೆಗಳಿವೆ. ಅವರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. 300 ಬಸ್‌ಗಳು ನಮಗೆ ಸಾಲುವುದಿಲ್ಲ.ಕನಿಷ್ಠ 600 ಬಸ್‌ಗಳು ನಮಗೆ ಅವಶ್ಯಕತೆ ಇದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರೀಯಾಂಗಾ. ಎಂ, ಈ ಬಸ್ ನಿಲ್ದಾಣದಿಂದ 10ರಿಂದ 15 ಸಾವಿರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದನ್ನು 6.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 850 ಹೊಸ ಬಸ್‌ಗಳನ್ನು ಖರೀದಿಮಾಡಲಾಗಿದ್ದು, ಶಕ್ತಿ ಯೋಜನೆಯಲ್ಲಿ 16 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Basavaraj Bommai: ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಜನರಿಗೆ ಬರೆ: ಬಸವರಾಜ ಬೊಮ್ಮಾಯಿ ಆರೋಪ

ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ, ಜಿಲ್ಧಾಧಿಕಾರಿ ಕೆ.ಲಕ್ಷ್ಮೀಪ್ರೀಯ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಸತೀಶ್ ನಾಯ್ಕ್, ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರೀಯಾಂಗಾ ಎಂ, ಸಂಸ್ಥೆ ಮಾಜೀ ಅಧ್ಯಕ್ಷ ವಿ.ಎಸ್ ಪಾಟೀಲ್ ಸೇರಿದಂತೆ ಹಲವರು ಇದ್ದರು.