ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raju Adakalli Book Release: 21 ರಂದು ಅಡಕಳ್ಳಿಯವರ ಕೃತಿ ಬಿಡುಗಡೆ

ಮನುವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ ಕರ್ಜಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾವಿದ ಸತೀಶ ಯಲ್ಲಾಪುರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸ ಲಾಗುವುದು. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನುವಿಕಾಸ ಸಂಸ್ಥೆಯು ಕೋರಿದೆ

ಶಿರಸಿ: ಪ್ರಸಿದ್ಧ ಲೇಖಕ ರಾಜು ಅಡಕಳ್ಳಿ ಅವರ ನೂತನ " ಹಾಸ್ಯ ವಿಲಾಸ ಮತ್ತು ರಸ ಗುಲ್ಲಾ " ಕೃತಿಗಳನ್ನು 21 ರಂದು ಸ್ಥಾನಿಕವಾಗಿ ಸಿದ್ದಾಪುರದ ಬಾಲ ಭವನದಲ್ಲಿ ಬಿಡುಗಡೆ ಗೊಳ್ಳಲಿದೆ.

ಹಾಸ್ಯ ಪೂರಿತ ಮತ್ತು ಉತ್ತರ ಕನ್ನಡದ ವಿಶಿಷ್ಟ ಶೈಲಿಯ ಈ ಕೃತಿಗಳಿಗೆ ಬೆಂಗಳೂರು ವಲಯದಲ್ಲಿ ಇತ್ತೀಚೆಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಈ ಲೇಖಕರ ತವರು ತಾಲೂಕು ಕೇಂದ್ರವಾದ ಸಿದ್ದಾಪುರದಲ್ಲಿ ಸ್ಥಾನಿಕವಾಗಿ ಬಿಡುಗಡೆ ಮಾಡುತ್ತಿರು ವುದು ವಿಶೇಷ ಎಂದು ಕಾರ್ಯಕ್ರಮವನ್ನು ಆಯೋಜಿಸಿರುವ ಕರ್ಜಗಿಯ ಮನುವಿಕಾಸ ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

21ರಂದು ಮಧ್ಯಾಹ್ನ 3. 15ಕ್ಕೆ ವಿಮರ್ಶಕ ನಾರಾಯಣ ಯಾಜಿ ಅವರು ಈ ಕೃತಿ ಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಇದನ್ನೂ ಓದಿ: Sirsi Marikamba Jatre 2026: ಫೆ. 24ರಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ

ಮುಖ್ಯ ಅತಿಥಿಗಳಾಗಿ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ನ್ಯಾಯವಾದಿ ರವಿ ಹೆಗಡೆ ಹೂವಿನಮನೆ ಮುಖ್ಯ ಅತಿಥಿಗಳಾಗಿದ್ದಾರೆ.

Raju adakalli

ಮನುವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ ಕರ್ಜಗಿ ಅವರು ಅಧ್ಯಕ್ಷತೆ ವಹಿಸ ಲಿದ್ದಾರೆ. ಕಲಾವಿದ ಸತೀಶ ಯಲ್ಲಾಪುರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸ ಲಾಗುವುದು. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನುವಿಕಾಸ ಸಂಸ್ಥೆಯು ಕೋರಿದೆ.

ಪ್ರತಿಷ್ಠಿತ ಸಪ್ನ ಪುಸ್ತಕ ಪ್ರಕಾಶನವು ಪ್ರಕಟಿಸಿರುವ ಈ ಹಾಸ್ಯ ವಿಲಾಸವು, ಅಡಕಳ್ಳಿಯವರ ವಿಶಿಷ್ಟ ಶೈಲಿಯ ಗದ್ಯ ಪ್ರಯೋಗದ ಪ್ರಬಂಧ ಮತ್ತು ಸಮಕಾಲೀನ ಸ್ವಾರಸ್ಯಗಳ ನಗೆ ಡಬ್ಬಿಯಂತಿದೆ. ವೀರಲೋಕ ಪ್ರಕಾಶನವು ಪ್ರಕಟಿಸಿದ ರಸಗುಲ್ಲಾವು ಬದುಕಿನ ಸ್ವಾರಸ್ಯ ಗಳಿಗೆ ಹನಿಗವನಗಳ ಮೂಲಕ ಒಗ್ಗರಣೆಯನ್ನು ಹಾಕಿದಂತಹ ವಿಶಿಷ್ಟ ಕೃತಿಯಾಗಿದೆ.