ಶಿರಸಿ: ನಗರಸಭೆಯಲ್ಲಿ ಜಾತ್ರೆಯ ಪ್ರಯುಕ್ತವಾಗಿ ಹಲವಾತು ಅಭಿವೃದ್ದಿ ಕಾಮಗಾರಿ ಗಳನ್ನು ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ತಿಳಿಸಿ ದರು. ಅವರಿಂದು ನಗರಸಭೆಯ ಆವಾರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಶ್ವಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಹತ್ತಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ನಗರದಾದ್ಯಂತ ಬೆಳಕಿನ ವ್ಯವಸ್ಥೆ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜಾತ್ರಾ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳ ಲಾಗಿದೆ.
ಬೀದಿ ದೀಪಗಳ ಅಳವಡಿಕೆ: ಜಾತ್ರಾ ಉದ್ದೇಶಕ್ಕಾಗಿ ಹೊಸ ಎಲ್.ಇ.ಡಿ ಬೀದಿ ದೀಪಗಳನ್ನು ಖರೀದಿಸಿ ಅಳವಡಿಸಲಾಗುತ್ತಿದೆ.
ಇದನ್ನೂ ಓದಿ: Sirsi News: ಬೇಡ್ತಿ, ಅಘನಾಶಿನಿ ಯೋಜನೆ ವಿರೋಧಿಸಿ ಬೃಹತ್ ಜನ ಸಮಾವೇಶ
ತಾತ್ಕಾಲಿಕ ಸೌಲಭ್ಯಗಳು: ಜಾತ್ರಾ ಸ್ಥಳ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೌಚಾಲಯಗಳಿಗೆ ಹಾಗೂ ನಗರದ ಬಸ್ ತಂಗುದಾಣಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.
ಮಾರಿಕಾಂಬಾ ದೇವಸ್ಥಾನದ ಎದುರು ಕೆಟ್ಟು ಹೋಗಿದ್ದ ಹೈಮಾಸ್ಟ್ ದೀಪವನ್ನು ದುರಸ್ತಿ ಗೊಳಿಸಲಾಗುತ್ತಿದ್ದು, ರಾಘವೇಂದ್ರ ಸರ್ಕಲ್‌ನಲ್ಲಿರುವ ಹೈಮಾಸ್ಟ್ ಅನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಇಡೀ ಶಿರಸಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾತ್ರಾ ನಿಮಿತ್ತ ವಿಶೇಷ ದೀಪಾಲಂಕಾರ ಮಾಡಲಾಗುವುದು.
ಸಿಸಿ ಕ್ಯಾಮರಾ ಕಣ್ಗಾವಲು: ಸುರಕ್ಷತೆಯ ದೃಷ್ಟಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.
ನೀರು ಸರಬರಾಜು ಘಟಕಗಳು: ಭೀಮನಗುಡ್ಡ, ಮಾರಿಗದ್ದೆ, ಅಡ್ನಳ್ಳಿ ಹಾಗೂ ಕಂಪ್ರಿ ಯಲ್ಲಿರುವ ನೀರು ಸರಬರಾಜು ಘಟಕಗಳಿಗೆ ಯುಪಿಎಸ್ ಸಹಿತ ಸಿಸಿ ಕ್ಯಾಮರಾ ಅಳವಡಿಕೆ.
ಜಾತ್ರಾ ಗದ್ದೆಯಾದ ಬಿದ್ಕಿಬೈಲ್ ಮತ್ತು ಕೋಣನಬೀದಿಯ ಸುತ್ತಮುತ್ತ 32 ಸಿಸಿ ಕ್ಯಾಮರಾ ಗಳನ್ನು ಬಾಡಿಗೆ ಆಧಾರದಲ್ಲಿ ಅಳವಡಿಸಲಾಗುತ್ತಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ನಗರದ ಪ್ರಮುಖ 22 ಸ್ಥಳಗಳಲ್ಲಿ ಸಿಸಿ ಕ್ಯಾಮರಾ, 5 ಕಡೆ ಮುಖ ಗುರುತಿಸುವ ಕ್ಯಾಮರಾ ಹಾಗೂ ಒಂದು ಅತ್ಯಾಧುನಿಕ ಪಿ.ಟಿ.ಝೆಡ್ ಕ್ಯಾಮರಾವನ್ನು ಬಳಸಲಾಗುತ್ತಿದೆ.
ಜಾತ್ರೆ ಮುಗಿದ ನಂತರ ಪಾರ್ಕಿಂಗ್ ಸ್ಥಳಗಳಲ್ಲಿ ಬಳಸಲಾದ ಎಲ್.ಇ.ಡಿ ಫ್ಲಡ್ ಲೈಟ್ ಗಳನ್ನು ನಗರದ ವಿವಿಧ ಹೈಮಾಸ್ಟ್ ಕಂಬಗಳಿಗೆ ಅಳವಡಿಸಿ ಮರುಬಳಕೆ ಮಾಡಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.