#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Landslide: ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು

ಈ ಹಿಂದೆ ಯಲ್ಲಾಪುರ ಭಾಗದ ಕಳಚೆಯಲ್ಲಿ ಕೂಡ ಭೂಮಿ ಕುಸಿದಿತ್ತು. ಜಿಎಸ್ಐ ತಜ್ಞರ ವರದಿ ಪ್ರಕಾರ ಜಿಲ್ಲೆಯಲ್ಲಿ 439 ಭೂಕುಸಿತ ವಲಯಗಳಿವೆ ಎಂದು ತಿಳಿದುಬಂದಿದೆ. ಮಳೆ ನಿಂತರೂ ಕೂಡ ಇಲ್ಲಿ ಭೂಕುಸಿತ ನಿಲ್ಲುತ್ತಿಲ್ಲ ಎಂಬುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.

ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು

ಉತ್ತರ ಕನ್ನಡ ಭೂಕುಸಿತ

ಹರೀಶ್‌ ಕೇರ ಹರೀಶ್‌ ಕೇರ Feb 13, 2025 2:30 PM

ಕಾರವಾರ: ಉತ್ತರಕನ್ನಡ (Uttara Kannada news) ಜಿಲ್ಲೆಯಲ್ಲಿ ಮತ್ತೆ ಭೂಕುಸಿತ (Landslide) ಸಂಭವಿಸಿದೆ. ಭೂಕುಸಿತ ನಡೆದ ಜಾಗದಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರಿ ಸ್ಫೋಟದ (Blast) ಸದ್ದು ಕೇಳಿ ಬಂದಿದೆ. ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಭೂ ಕುಸಿತದಿಂದ ಗುಡ್ಡ ಕುಸಿದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಗುಡ್ಡ ಕುಸಿತ ಪರಿಣಾಮ ಸ್ಥಳಿಯರ ತೋಟಕ್ಕೆ ದೊಡ್ಡ ದೊಡ್ಡ ಪ್ರಮಾಣದ ಬಂಡೆಕಲ್ಲು ಹಾಗೂ ಮಣ್ಣಿನ ರಾಶಿ ಉರುಳಿ ಬಂದಿವೆ. ಕಳೆದ ಎರಡು ತಿಂಗಳ ಹಿಂದೆ ಇದೇ ಭಾಗದ ಸುತ್ತಲೂ ಭೂಮಿ ಕಂಪಿಸಿತ್ತು. ಘಟನಾ ಸ್ಥಳಕ್ಕೆ ತಜ್ಞರ ತಂಡ ಭೇಟಿ ನೀಡಿ ಭೂಕಂಪನದ ಬಗ್ಗೆ ದೃಢೀಕರಿಸಿದ್ದರು.

ಈ ಹಿಂದೆ ಯಲ್ಲಾಪುರ ಭಾಗದ ಕಳಚೆಯಲ್ಲಿ ಕೂಡ ಭೂಮಿ ಕುಸಿದಿತ್ತು. ಜಿಎಸ್ಐ ತಜ್ಞರ ವರದಿ ಪ್ರಕಾರ ಜಿಲ್ಲೆಯಲ್ಲಿ 439 ಭೂಕುಸಿತ ವಲಯಗಳಿವೆ ಎಂದು ತಿಳಿದುಬಂದಿದೆ. ಮಳೆ ನಿಂತರೂ ಕೂಡ ಇಲ್ಲಿ ಭೂಕುಸಿತ ನಿಲ್ಲುತ್ತಿಲ್ಲ ಎಂಬುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಹೊತ್ತಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಗುಡ್ಡ ಕುಸಿದು ಬಿದ್ದಿತ್ತು. 7 ಮಂದಿ ಸಾವನ್ನಪ್ಪಿದ್ದರು. ಸ್ಥಳೀಯ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಇತರ ಏಜೆನ್ಸಿಗಳ ಅಧಿಕಾರಿಗಳು ತೀವ್ರವಾದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದರೂ ಕೆಲವು ಶವಗಳು ಸಿಕ್ಕಿರಲಿಲ್ಲ.

ಇದರ ಬಳಿಕ, ಜಿಲ್ಲೆಯಲ್ಲಿ ಸಂಭವನೀಯ ಭೂಕುಸಿತ ಪ್ರದೇಶಗಳನ್ನು ಗುರುತಿಸಲು ವ್ಯಾಪಕ ಆಗ್ರಹ ಕೇಳಿಬಂದಿತ್ತು. ಹೆದ್ದಾರಿ ಪ್ರಾಧಿಕಾರದ ಕಾರ್ಯಾಚರಣೆಯ ವೈಖರಿಯ ಬಗ್ಗೆಯೂ ಅಸಮಾಧಾನ ಎದ್ದಿತ್ತು.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತದಲ್ಲಿ ನಾಪತ್ತೆಯಾದವರನ್ನು ಮೃತರೆಂದು ಘೋಷಿಸಲು ಮುಂದಾದ ಕೇರಳ ಸರ್ಕಾರ